ಅಂಬರೀಷ್ ಹುಟ್ಟುಹಬ್ಬಕ್ಕೆ ಸತೀಶ್ ಕೊಟ್ಟ ಗಿಫ್ಟು ಇದು!

Satish - Final - New
Published on

ಸತೀಶ್ ನೀನಾಸಂ ಈ ಹಿಂದೆ ‘ರಾಕೆಟ್’ ಮತ್ತು ‘ಅಂಜದ ಗಂಡು’ ಚಿತ್ರಗಳಿಗೆ ಒಂದೊಂದು ಹಾಡನ್ನು ಹಾಡಿದ್ದರು. ಈಗ ಕೆಲವು ವರ್ಷಗಳ ನಂತರ ಪುನಃ ಮೈಕಿನ ಮುಂದೆ ನಿಂತು ಹಾಡಿದ್ದಾರೆ. ಈ ಬಾರಿ ಯಾವ ಚಿತ್ರಕ್ಕೆ ಎಂಬ ಪ್ರಶ್ನೆ ಸಹಜ. ಸತೀಶ್ ನೀನಾಸಂ ಈ ಬಾರಿ ಮೈಕಿನ ಮುಂದೆ ನಿಂತಿದ್ದು, ಅಂಬರೀಷ್ ಕುರಿತ ಒಂದು ಹಾಡಿಗೆ.

ಇಂದು ಅಂಬರೀಷ್ ಅವರ ಹುಟ್ಟುಹಬ್ಬ. ಈ ಹುಟ್ಟುಹಬ್ಬಕ್ಕೆ, ಸತೀಶ್ ನೀನಾಸಂ ಒಂದು ಹಾಡಿನ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ‘ಮಂಡ್ಯದ ಗಂಡು ಕಲ, ಕನ್ನಡದ ಆಸ್ತಿ ಕಲ, ದೋಸ್ತಿಗೆ ಬ್ರಾಂಡು ಕಲ, ನಮ್ ಜಲೀಲ ...’ ಎಂಬ ಹಾಡನ್ನು ಸತೀಶ್ ಹಾಡಿದ್ದು, ಅದೀಗ ಹುಟ್ಟುಹಬ್ಬದ ಪ್ರಯುಕ್ತ ಇಂದು ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿದೆ.

ಈ ಹಾಡನ್ನು ಅಂಬರೀಷ್ ಅವರ ಚಿತ್ರಗಳ ಹಲವು ದೃಶ್ಯಗಳು ಮತ್ತು ಅವರ ಸಂಭಾಷಣೆಗಳನ್ನಿಟ್ಟುಕೊಂಡು ರೂಪಿಸಲಾಗಿದೆ. ‘ಬಹದ್ದೂರ್’ ಖ್ಯಾತಿಯ ಚೇತನ್, ಈ ಹಾಡಿಗೆ ಸಾಹಿತ್ಯ ಬರೆದರೆ, ಸಂತೋಷ್ ವೆಂಕಿ ಕಂಪೋಸ್ ಮಾಡಿದ್ದಾರೆ.

ಈ ಹಾಡು ಯೂಟ್ಯೂಬ್‌ನ ಎ2 ಮ್ಯೂಸಿಕ್ ಚಾನಲ್‌ನಲ್ಲಿ ಶುಕ್ರವಾರ ಬಿಡುಗಡೆಯಾಗಿದ್ದು, ಮೆಚ್ಚುಗೆ ಪಡೆಯುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net