More

    ಯಾರಿಗೂ ಗೊತ್ತಾಗದಂತೆ ಮೈಸೂರು ಸುತ್ತಾಡಿದ ಹೀರೋ ಯಾರು ಹೇಳಿ?

    ಮೈಸೂರು: ಸಿನಿಮಾ ಹೀರೋಗಳು ಕೆಲವೊಮ್ಮೆ ಯಾರಿಗೂ ಗೊತ್ತಾಗದಂತೆ ಜನರ ಮಧ್ಯೆ ಕುಳಿತು ಸಿನಿಮಾ ಸಿನಿಮಾ ನೋಡೋದು, ಪಾನಿಪುರಿ ತಿನ್ನೋದು, ವಾಕಿಂಗ್​ ಅಥವಾ ಸೈಕ್ಲಿಂಗ್​ ಹೋಗೋದು ಸಹಜ. ಮುಖ ಮುಚ್ಚಿಕೊಂಡು, ಕಣ್ಣಿಗೊಂದು ಗ್ಲಾಸ್ ಹಾಕಿಕೊಂಡು ಓಡಾಡಿದರೆ, ಸುತ್ತಮುತ್ತಲಿರುವ ಜನಕ್ಕೆ ತಮ್ಮ ಮಧ್ಯೆ ಒಬ್ಬ ಸೆಲೆಬ್ರಿಟಿ ಇರಬಹುದು ಎಂದು ಗೊತ್ತಾಗುವುದು ಕಷ್ಟ.

    ಇದನ್ನೂ ಓದಿ: ತಮ್ಮನ್ನು ಫೇಕ್​ ಅಂದವರಿಗೆ ಸೋನು ಕೊಟ್ಟ ಉತ್ತರವೇನು?

    ಈಗ್ಯಾಕೆ ಈ ಮಾತೆಂದರೆ, ಇತ್ತೀಚೆಗೆ ಒಬ್ಬ ಸೆಲೆಬ್ರಿಟಿ ಮೈಸೂರು ಸುತ್ತಿ ಬಂದಿದ್ದಾರೆ. ಮೈಸೂರಿನ ಜನಪ್ರಿಯ ಸ್ಥಳಗಳಲ್ಲಿ ಯಾರಿಗೂ ಗೊತ್ತಾಗದಂತೆ ಹೋಗಿ ಬಂದಿದ್ದಾರೆ. ಹಾಗೆ ಸುತ್ತಾಡಿದ ನಟ ಯಾರು ಗೊತ್ತಾ? ಸತೀಶ್​ ನೀನಾಸಂ.

    ಸತೀಶ್​ ನೀನಾಸಂ, ಕಳೆದ ಕೆಲವು ದಿನಗಳಿಂದ ಮೈಸೂರಿನಲ್ಲಿ ಬೀಡುಬಿಟ್ಟಿದ್ದಾರೆ. ಅದಕ್ಕೆ ಕಾರಣ, ‘ಪೆಟ್ರೋಮ್ಯಾಕ್ಸ್​’ ಚಿತ್ರದ ಚಿತ್ರೀಕರಣ ಮೈಸೂರಿನಲ್ಲಿ ನಡೆಯುತ್ತಿದೆ. ಬೆಳಿಗ್ಗೆ ಶೂಟಿಂಗ್​ನಲ್ಲಿ ಪಾಲ್ಗೊಳ್ಳುವ ಸತೀಶ್​, ರಾತ್ರಿ ತಮ್ಮ ಸ್ನೇಹಿತರೊಂದಿಗೆ ಅರಮನೆ ಸೇರದಿಂತೆ ಮೈಸೂರಿನ ಹಲವು ಸ್ಥಳಗಳಿಗೆ ಯಾರಿಗೂ ಗೊತ್ತಾಗದಂತೆ ಹೋಗಿ ಬಂದಿದ್ದಾರೆ.

    ಇದನ್ನೂ ಓದಿ: ಒನ್ ಆಂಡ್ ಓನ್ಲಿ :30 ವರ್ಷಗಳ ನಂತರ ಕನ್ನಡಿಗನಾದ ಕ್ರೇಜಿಸ್ಟಾರ್

    ಈ ಕುರಿತು ಮಾತನಾಡಿರುವ ಅವರು, ‘ಯಾರಿಗೂ ಗೊತ್ತಾಗದಂತೆ ತಲೆಗೊಂದು ಕ್ಯಾಪ್​ ಹಾಕಿಕೊಂಡು, ಮುಖಮುಚ್ಚಿಕೊಂಡು ಮೈಸೂರು ಸುತ್ತಾಡುವ ಮಜವೇ ಬೇರೆ. ಈ ಊರೇ ಅದ್ಭುತ. ಅದರಲ್ಲೂ ದಸರಾ ಸಂದರ್ಭದಲ್ಲಿ ಇನ್ನಷ್ಟು ಚೆನ್ನಾಗಿರುತ್ತದೆ. ಸಮಯ ಸಿಕ್ಕಾಗ ನೀವು ಸಹ ಬನ್ನಿ’ ಎಂದು ಅವರು ಹೇಳಿದ್ದಾರೆ.

    ಆಪ್ತ ಸಹಾಯಕನಿಗೆ ಜಾಕ್ವೆಲಿನ್​ ಫರ್ನಾಂಡಿಸ್​ ಏನು ಗಿಫ್ಟ್​ ಕೊಟ್ರು ಹೇಳಿ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts