ಆಪ್ತ ಸಹಾಯಕನಿಗೆ ಜಾಕ್ವೆಲಿನ್​ ಫರ್ನಾಂಡಿಸ್​ ಏನು ಗಿಫ್ಟ್​ ಕೊಟ್ರು ಹೇಳಿ?

Jacqueline Fernandes - Final
Published on

ಮುಂಬೈ: ಸಿನಿಮಾ ನಟ-ನಟಿಯರು ತಮ್ಮ ಆಪ್ತ ಸಹಾಯಕರಿಗೆ ಆಗಾಗ ಕಾಸ್ಟ್ಲಿ ಗಿಫ್ಟ್​ಗಳನ್ನು ಕೊಡುತ್ತಿರುತ್ತಾರೆ. ಅವರು ಮಾಡುವ ಸೇವೆಗೆ ಖುಷಿಯಾಗಿ ಒಂದಲ್ಲಾ ಒಂದು ರೀತಿ ಸಹಾಯ ಮಾಡುತ್ತಲೇ ಇರುತ್ತಾರೆ. ಇತ್ತೀಚೆಗೆ, ಬಾಲಿವುಡ್​ ನಟಿ ಜಾಕ್ವೆಲಿನ್​ ಫರ್ನಾಂಡಿಸ್​ ಸಹ ತಮ್ಮ ಆಪ್ತ ಸಹಾಯಕನಿಗೆ ಒಂದು ಗಿಫ್ಟ್​ ಕೊಟ್ಟಿದ್ದಾರೆ.

ಜಾಕ್ವೆಲಿನ್​ ತಮ್ಮ ಆಪ್ತ ಸಹಾಯಕನಿಗೆ ಒಂದು ಕಾರ್​ ಗಿಫ್ಟ್​ ಕೊಟ್ಟಿದ್ದಾರೆ. ಈ ಹಿಂದೆ, ಅವರು ತಮ್ಮ ಮೇಕಪ್​ ಮ್ಯಾನ್​ಗೆ ಇದೇ ರೀತಿ ಒಂದು ಕಾರ್​ ಗಿಫ್ಟ್​ ಕೊಟ್ಟಿದ್ದರು. ಈ ಬಾರಿ ಅವರು ತಮ್ಮ ಆಪ್ತ ಸಹಾಯಕನಿಗೆ ದಸರಾ ಅಂಗವಾಗಿ ಒಂದು ಹೊಸ ಕಾರ್​ ಕೊಡಿಸಿದ್ದಾರೆ.

ಜಾಕ್ವೆಲಿನ್​ ಚಿತ್ರರಂಗಕ್ಕೆ ಕಾಲಿಟ್ಟ ದಿನದಿಂದಲೂ ಅವರ ಜತೆಗೆ ಆ ಆಪ್ತ ಸಹಾಯಕ ಇದ್ದಾನಂತೆ. ಜಾಕ್ವೆಲಿನ್​ನ ಕಷ್ಟ-ಸುಖಗಳಲ್ಲಿ ಭಾಗಿಯಾಗಿದ್ದನಂತೆ. ಅದೇ ಕಾರಣಕ್ಕೆ ದಸರಾ ಹಬ್ಬದ ಸಂದರ್ಭದಲ್ಲಿ ಒಂದು ಕಾರ್​ ಬುಕ್​ ಮಾಡಿ, ಆಯುಧ ಪೂಜೆಯಂದು ಆ ಕಾರನ್ನು ಆಪ್ತ ಸಹಾಯಕನಿಗೆ ಕೊಟ್ಟಿದ್ದಾರೆ. ಈ ಸಂದರ್ಭದಲ್ಲಿ ನಡೆದ ಪೂಜೆಯಲ್ಲೂ ಜಾಕ್ವೆಲಿನ್​ ಭಾಗಿಯಾಗಿದ್ದಾರೆ.

ಎಲ್ಲಾ ಸರಿ, ಜಾಕ್ವೆಲಿನ್​ ಟ್ರಾಫಿಕ್​ ಪೊಲೀಸ್​ನ ಗೆಟಪ್​ನಲ್ಲಿ ಯಾಕಿದ್ದಾರೆ ಎಂಬ ಪ್ರಶ್ನೆ ಸಹಜವಾಗಿಯೇ ಬರಬಹುದು. ವಿಷಯವೇನೆಂದರೆ, ಜಾಕ್ವೆಲಿನ್​ ಹೊಸ ಚಿತ್ರದ ಶೂಟಿಂಗ್​ವೊಂದರಲ್ಲಿ ಭಾಗವಹಿಸಿದ್ದರಂತೆ. ಆ ಚಿತ್ರಕ್ಕಾಗಿ ಟ್ರಾಫಿಕ್​ ಪೊಲೀಸ್​ನ ಕಾಸ್ಟ್ಯೂಮ್​ ತೊಟ್ಟಿದ್ದರಂತೆ. ಈ ಸಂದರ್ಭದಲ್ಲಿ ಕಾರ್​ ಡೆಲಿವರಿಯಾಗಿದೆ. ಹಾಗಾಗಿ, ಫೋಟೋಗಳಲ್ಲಿ ಟ್ರಾಫಿಕ್​ ಪೊಲೀಸ್​ ಕಾಸ್ಟ್ಯೂಮ್​ನಲ್ಲಿ ಕಾಣಿಸಿಕೊಂಡಿದ್ದಾರೆ ಜಾಕ್ವೆಲಿನ್​.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net