ಮೂಡುಬಿದಿರೆ: ಕುಲಾಲ ಸಂಘದ ನೂತನ ಅಧ್ಯಕ್ಷರಾಗಿ ಸತೀಶ್ ಕುಲಾಲ್ ಏರಿಮಾರ್, ಕಾರ್ಯದರ್ಶಿಯಾಗಿ ವಿಶ್ವನಾಥ ಕುಲಾಲ್, ವೆಂಕಟೇಶ್ ಬಂಗೇರ ಆಯ್ಕೆಯಾಗಿದ್ದಾರೆ.
ಮೂಡುಬಿದಿರೆ ಸಮಾಜ ಮಂದಿರದಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.
ಸುಬ್ಬಯ್ಯ ಬಂಗೇರ, ಸುಂದರ ಕುಲಾಲ್ ಕಡಂದಲೆ, ಶಂಕರ ಕುಲಾಲ್, ಹೇಮನಾಥ ಬಂಗೇರ(ಗೌರವಾಧ್ಯಕ್ಷರು), ಉಮೇಶ್ ಕುಲಾಲ್, ಮೀನಾಕ್ಷಿ ಲಾಡಿ(ಉಪಾಧ್ಯಕ್ಷರು), ಕಿರಣ್ ಕುಲಾಲ್ ಕಾಪಿಕಾಡು(ಕೋಶಾಧಿಕಾರಿ), ವಿಕಾಸ್ ಕುಲಾಲ್, ಮೋಹನ್ ಹೊಸ್ಮಾರ್, ಲೋಕೇಶ್ ಕುಲಾಲ್ ಮರಾಯಿಗುತ್ತು(ಸಾಂಸ್ಕೃತಿಕ ಕಾರ್ಯದರ್ಶಿ), ವಿಜಯ ಕುಮಾರ್, ಮೋಹಿತ್ ಕುಲಾಲ್(ಕ್ರೀಡಾ ಕಾರ್ಯದರ್ಶಿ), ಸೀತಾರಾಮ ಕುಲಾಲ್ ಸಂಪಿಗೆ, ಲೋಕೇಶ್ ನೆಲ್ಲಿಗುಡ್ಡೆ, ಆನಂದ ವಿಶಾಲ್ ನಗರ, ನಾರಾಯಣ ವಿಶಾಲ್ ನಗರ, ದಯಾನಂದ ಪುತ್ತಿಗೆ(ಸಂಘಟನಾ ಕಾರ್ಯದರ್ಶಿ) ಆಯ್ಕೆಯಾಗಿದ್ದಾರೆ.
ಮಹಿಳಾ ಘಟಕ ಅಧ್ಯಕ್ಷರಾಗಿ ಪೂರ್ಣಿಮಾ ಎ.ಬಂಗೇರ ಲಾಡಿ, ಉಪಾಧ್ಯಕ್ಷರಾಗಿ ಗಾಯತ್ರಿ ಎಂ.ಕುಲಾಲ್, ಕಾರ್ಯದರ್ಶಿಯಾಗಿ ಮಮತಾ ಕುಲಾಲ್, ಕೋಶಾಧಿಕಾರಿಯಾಗಿ ಸುಕನ್ಯಾ ಅಶೋಕ್ ಕುಲಾಲ್ ಆಯ್ಕೆಯಾಗಿದ್ದಾರೆ.