ವೃತ್ತಿಯಲ್ಲಿ ತೃಪ್ತಿ, ಜೀವನದಲ್ಲಿ ಶಿಸ್ತು ಅಗತ್ಯ

Bel_Career
Published on

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

ಮಾಡುವ ಕೆಲಸದಲ್ಲಿ ತೃಪ್ತಿ, ಆ ಕೆಲಸದ ಕುರಿತು ಆಳವಾದ ಅರಿವು ಹಾಗೂ ಜೀವನದಲ್ಲಿ ಶಿಸ್ತು, ಸಮಯಪ್ರಜ್ಞೆ ಇರುವುದು ಅಗತ್ಯ ಎಂದು ಹಿರಿಯ ಸಾಹಿತಿ, ನಿವೃತ್ತ ಎಂಜಿನಿಯರ್ ಕುಮಾರಸ್ವಾಮಿ.ಟಿ ಹೇಳಿದರು.

ಉಜಿರೆ ಶ್ರೀ ಧ.ಮಂ. ಕಾಲೇಜಿನಲ್ಲಿ ಹಿರಿಯ ವಿದ್ಯಾರ್ಥಿ ಸಂಘದ ವತಿಯಿಂದ ಆಯೋಜಿಸಲಾಗಿದ್ದ ಹಿರಿಯ ವಿದ್ಯಾರ್ಥಿಗಳೊಂದಿಗೆ ಸಂವಾದ ಸರಣಿ ಎಸ್‌ಡಿಎಂ ನೆನಪಿನಂಗಳದ ಹದಿನಾರನೇ ಕಂತಿನ ಕಾರ್ಯಕ್ರಮದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿ ನಿತಿನ್ ಎಸ್.ಜೆ.(ದ್ವಿತೀಯ ಬಿ.ಎ.) ಅವರಿಗೆ 5,000 ರೂ.ಸಹಾಯಧನ ಹಸ್ತಾಂತರಿಸಿ ಮಾತನಾಡಿದರು.

ತೃಪ್ತಿ ಇದ್ದಲ್ಲಿ ನಾವು ಭ್ರಷ್ಟಾಚಾರಕ್ಕೆ ಒಳಗಾಗದೆ ಬದುಕಬಹುದು. ಏನನ್ನಾದರೂ ಸಾಧಿಸಬೇಕಾದರೆ ಮೊದಲು ಅಹಂಕಾರ ಬಿಡಬೇಕು. ಹಾಗಿದ್ದಾಗ ಸಾಧಿಸುವ ಅವಕಾಶ ಹೇರಳವಾಗಿ ದೊರೆಯುತ್ತವೆ. ಶಿಸ್ತು ಇತ್ಯಾದಿ ಮೌಲ್ಯಗಳಿದ್ದಾಗ ಯಶಸ್ಸು ಸಾಧ್ಯವಾಗುತ್ತದೆ. ಜೀವನ ಕೇವಲ 60 ವಷರ್ಗಳವರೆಗೆ ಅಲ್ಲ. ಅದರ ಮೇಲೂ ಇದೆ. ಯೋಗಾಭ್ಯಾಸ, ಓದು ಇತ್ಯಾದಿ ಉತ್ತಮ ಹವ್ಯಾಸಗಳನ್ನು ರೂಢಿಸಿಕೊಂಡರೆ ವಿಶ್ರಾಂತ ಜೀವನದಲ್ಲಿ ಅವು ನೆರವಾಗುತ್ತವೆ ಎಂದು ಹೇಳಿದರು.

ಕಾಲೇಜಿನ ಉಪ ಪ್ರಾಂಶುಪಾಲ ಎಸ್.ಎನ್.ಕಾಕತ್ಕರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಯಾವುದೇ ಶಿಕ್ಷಣ ಸಂಸ್ಥೆ ಬೆಳೆಯಬೇಕಾದರೆ ಉತ್ತಮ ಆಡಳಿತ ಮಂಡಳಿ, ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು, ಪಾಲಕರು ಹಾಗೂ ಹಳೇ ವಿದ್ಯಾರ್ಥಿಗಳು ಅಗತ್ಯ. ನಮ್ಮ ಕಾಲೇಜಿನಲ್ಲಿ ಈ ಎಲ್ಲ ಅಂಶಗಳೂ ಸಾಂಸ್ಥಿಕ ಅಭಿವೃದ್ಧಿಗೆ ಕೊಡುಗೆ ನೀಡುತ್ತಿವೆ. ಹಳೇ ವಿದ್ಯಾರ್ಥಿಗಳು ವಿದ್ಯಾರ್ಥಿವೇತನ ವಿತರಣೆ, ಬಿಸಿಯೂಟ ಯೋಜನೆಗೆ ಆರ್ಥಿಕ ನೆರವು ಇತ್ಯಾದಿ ಕಾರ್ಯಗಳನ್ನು ಮಾಡುತ್ತಿದ್ದಾರೆ ಎಂದರು.

ಕಾಲೇಜಿನ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮ ಸಂಯೋಜಕ ಡಾ.ಎಂ.ಪಿ.ಶ್ರೀನಾಥ್ ಸ್ವಾಗತಿಸಿ, ನಿರೂಪಿಸಿದರು. ಪ್ರಾಧ್ಯಾಪಕ ಗುರುರಾಜ್ ಭಟ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net