10 ಸಾವಿರ ರಟ್ಟಿನ ಮಂಚಗಳು, ಫೋಮ್​ ಹಾಸಿಗೆ, 1,000 ವೈದ್ಯರು...! 300 ಎಕರೆಯಲ್ಲಿ ದೆಹಲಿ ಕೋವಿಡ್​ ಆಸ್ಪತ್ರೆ

delhi_covid_centre
Published on

ನವದೆಹಲಿ: ಕೋವಿಡ್​ ರೋಗಿಗಳ ಚಿಕಿತ್ಸೆಗಾಗಿ ಜಗತ್ತಿನಲ್ಲೇ ಅತಿ ದೊಡ್ಡ ಚಿಕಿತ್ಸಾ ಕೇಂದ್ರ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಿರ್ಮಾಣಗೊಂಡಿದೆ. ಏಕಕಾಲಕ್ಕೆ 10,000 ರೋಗಿಗಳಿಗೆ ಇಲ್ಲಿ ಚಿಕಿತ್ಸೆ ದೊರೆಯಲಿದೆ.

ದಕ್ಷಿಣ ದೆಹಲಿಯ ಛತ್ತರಪುರ್​ದಲ್ಲಿರುವ ರಾಧಾ ಸಓಮಿ ಸತ್ಸಂಗ ಬಿಯಾಸ್​ ಕೇಂದ್ರದ 300 ಎಕರೆ ಪ್ರದೇಶದಲ್ಲಿ ಇದನ್ನು ಸ್ಥಾಪಿಸಲಾಗಿದೆ. ಇಂಡೋ ಟಿಬೇಟಿಯನ್​ ಬಾರ್ಡರ್​ ಫೋರ್ಸ್​ನ (ಐಟಿಬಿಪಿ) ಹಾಗೂ ಇತರ ಕೇಂದ್ರೀಯ ಪಡೆಗಳ ವೈದ್ಯರು, ನರ್ಸ್​ಗಳು ಸೇರಿ 3,000ಕ್ಕೂ ವೈದ್ಯಕೀಯ ಸಿಬ್ಬಂದಿ ಇಲ್ಲಿ ಸೇವೆ ಸಲ್ಲಿಸಲಿದ್ದಾರೆ.

  • ಜಗತ್ತಿನಲ್ಲಿಯೇ ಅತಿ ಚಿಕಿತ್ಸಾ ಕೇಂದ್ರದ ವಿಶೇಷತೆಗಳೇನು ಎಂಬುದಕ್ಕೆ ಇಲ್ಲಿದೆ ವಿವರ. * ಕೋವಿಡ್​ ಚಿಕಿತ್ಸಾ ಕೇಂದ್ರವನ್ನು 300 ಎಕರೆಯಲ್ಲಿ ಸ್ಥಾಪಿಸಲಾಗಿದೆ. 70 ಎಕರೆಯನ್ನು ಕ್ವಾರಂಟೈನ್​ ಉದ್ದೇಶಕ್ಕೆ ಮೀಸಲಾಗಿರಿಸಲಾಗಿದೆ. * 10,200 ಹಾಸಿಗೆಗಳಿವೆ. ಈ ಪೈಕಿ ಶೇ.10ಕ್ಕೆ ಗಂಭೀರ ಸ್ಥಿತಿಯಲ್ಲಿರುವ ರೋಗಿಗಳಿಗಾಗಿ ಮೀಸಲಿಟ್ಟಿದ್ದು, ಆಮ್ಲಜನಕ ಪೂರೈಕೆ ಸೌಲಭ್ಯವಿದೆ. * ಎಲ್ಲ ಮಂಚಗಳನ್ನು ರಟ್ಟಿನಿಂದ ಮಾಡಲಾಗಿದ್ದು, ಪರಿಸರ ಸ್ನೇಹಿಯಾಗಿವೆ. ಫೋಮ್​ ಹಾಸಿಗೆಯನ್ನು ಹೊಂದಿವೆ. * ರೋಗಿಗಳ ಚಿಕಿತ್ಸೆಗಾಗಿ 1,000 ವೈದ್ಯರು 2,000 ನರ್ಸ್​ ಹಾಗೂ ಅರೆವೈದ್ಯಕೀಯ ಸಿಬ್ಬಂದಿ ರನ್ನು ನಿಯೋಜಿಸಲಾಗುತ್ತಿದೆ. * 500 ಮೂತ್ರಗೃಹ, 450 ಸ್ನಾನದ ಮನೆ ಹಾಗೂ ಬಯೋ ಟಾಯ್ಲೆಟ್​ಗಳು ಇಲ್ಲಿವೆ. * ಅಂದಾಜು 60 ಅಂಬುಲೆನ್ಸ್​ಗಳು, 50 ಇ-ರಿಕ್ಷಾಗಳು ಸ್ಥಳದಲ್ಲಿರಲಿವೆ.

* ಪ್ರತಿ ರೋಗಿಗೆ ಪ್ರತ್ಯೇಕ ಹಾಸಿಗೆ, ಕುರ್ಚಿ, ಪ್ಲಾಸ್ಟಿಕ್​ ಕಬೋರ್ಡ್​, ಡಸ್ಟ್​ಬಿನ್​, ಸೋಪು, ಪೇಸ್ಟ್​ ಕಿಟ್​ ಹಾಗೂ ಚಾರ್ಜಿಂಗ್​ ಪಾಯಿಂಟ್​ ನೀಡಲಾಗಿದೆ.

* ರೋಗಿಗಳ ಮನರಂಜನೆಗಾಗಿ ಅಲ್ಲಲ್ಲಿ ದೊಡ್ಡ ಎಲ್​ಇಡಿ ಸ್ಕ್ರೀನ್​ಗಳನ್ನು ಅಳವಡಿಸಲಾಗಿದೆ.

* ದೆಹಲಿಯಲ್ಲಿ ಭಾರಿ ಸೆಖೆ ಇರುವುದರಿಂದ ಇಡೀ ಕೇಂದ್ರಕ್ಕೆ ಸೆಂಟ್ರಲೈಸ್ಡ್​ ಎಸಿ ವ್ಯವಸ್ಥೆ ಮಾಡಲಾಗಿದೆ. ಒಟ್ಟಾರೆ 18 ಸಾವಿರ ಟನ್​ ಸಾಮರ್ಥ್ಯದ ಎಸಿ ವ್ಯವಸ್ಥೆ ಇಲ್ಲಿದೆ.

* ಇಲ್ಲಿಗೆ ವಿದ್ಯುತ್​ ವ್ಯವಸ್ಥೆ ಕಲ್ಪಿಸಲು 22 ಕಿಮೀ. ದೂರದಷ್ಟು ಭೂಗತ ಕೇಬಲ್​, 20 ಟ್ರಾನ್ಸಫಾರ್ಮರ್​ ಅಳವಡಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net