More

    ದೆಹಲಿಯಲ್ಲಿ ಕೋವಿಡ್​ ರೋಗಿಗಳಿಗಾಗಿ ಸಜ್ಜಾಗಿದೆ ಜಗತ್ತಿನಲ್ಲಿಯೇ ಅತಿದೊಡ್ಡ ಚಿಕಿತ್ಸಾ ಕೇಂದ್ರ…!

    ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ಈಗ ದೇಶದ ಕೋವಿಡ್​ ಪೀಡಿತರ ರಾಜಧಾನಿಯಾಗಿ ಬದಲಾಗಿದೆ. ರಾಜಧಾನಿಯಲ್ಲೀಗ ಸೋಂಕಿತ ಸಂಖ್ಯೆ 80 ಸಾವಿರ ತಲುಪಿದೆ. ಈ ಪೈಕಿ 28 ಸಾವಿರ ಸಕ್ರಿಯ ಪ್ರಕರಣಗಳಿವೆ. 2,700ಕ್ಕೂ ಅಧಿಕ ಜನರು ಮೃತಪಟ್ಟಿದ್ದಾರೆ.

    ಕಳೆದ ಒಂದು ವಾರದಿಂದ ಪ್ರತಿದಿನ ಅತ್ಯಧಿಕ ಪ್ರಕರಣಗಳು ದೆಹಲಿಯಲ್ಲಿ ವರದಿಯಾಗುತ್ತಿವೆ. ಜತೆಗೆ, ಚಿಕಿತ್ಸೆ ನೀಡಲು ಆಸ್ಪತ್ರೆಗಳ ಬೆಡ್​ಗಳು ಸಾಕಾಗುತ್ತಿಲ್ಲ. ಈ ಕಾರಣಕ್ಕಾಗಿಯೇ ದೆಹಲಿ ಹೊರವಲಯದಲ್ಲಿ ಅತಿ ದೊಡ್ಡ ಚಿಕಿತ್ಸಾ ಕೇಂದ್ರವನ್ನು ಸ್ಥಾಪಿಸಲಾಗಿದೆ.

    ರಾಧಾ ಸಓಮಿ ಸತ್ಸಂಗ ಬ್ಯಾಸ ಕೇಂದ್ರದಲ್ಲಿ 10 ಸಾವಿರ ಬೆಡ್​ಗಳಿಗೆ ವ್ಯವಸ್ಥೆ ಮಾಡಲಾಗಿದೆ. ಕೇಂದ್ರ ಗೃಹ ಸಚಿವ ಅಮಿತ್​ ಷಾ ಹಾಗೂ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್​ ಶನಿವಾರ ಕೇಂದ್ರದಲ್ಲಿನ ವ್ಯವಸ್ಥೆಗಳ ಪರಿಶೀಲನೆ ನಡೆಸಿದರು.

    ಇದನ್ನೂ ಓದಿ; ಕರೊನಾಗೆ ಚುಚ್ಚುಮದ್ದಿಗಿಂತ ಮೂಗಿನ ಔಷಧವೇ ಉತ್ತಮ; ಆಕ್ಸ್​ಫರ್ಡ್​ ವಿವಿ ಸಂಶೋಧಕರ ಅಭಿಮತ

    ದೆಹಲಿಯಲ್ಲಿ ಕೋವಿಡ್​ ರೋಗಿಗಳಿಗಾಗಿ ಸಜ್ಜಾಗಿದೆ ಜಗತ್ತಿನಲ್ಲಿಯೇ ಅತಿದೊಡ್ಡ ಚಿಕಿತ್ಸಾ ಕೇಂದ್ರ...!
    ದೆಹಲಿಯ ರಾಧಾ ಸಓಮಿ ಸತ್ಸಂಗ ಬ್ಯಾಸ ಕೇಂದ್ರ

    ದಕ್ಷಿಣ ದೆಹಲಿ ಛತ್ತರಪುರ್​ ಪ್ರದೇಶದಲ್ಲಿ ಈ ಕೇಂದ್ರಕ್ಕೆ ಸರ್ದಾರ್​ ಪಟೇಲ್​ ಕೋವಿಡ್​ ಕೇರ್​ ಮತ್ತು ಆಸ್ಪತ್ರೆ ಎಂದು ಹೆಸರಿಸಲಾಗಿದೆ. ಇದು ಇಂಡೋ-ಟಿಬೇಟಿಯನ್​ ಬಾರ್ಡರ್​ ಸೆಕ್ಯುರಿಟಿ ಫೋರ್ಸ್​ನ ನಿರ್ವಹಣೆಯಲ್ಲಿರಲಿದೆ. ಇದು 15 ಫುಟ್ಬಾಲ್​ ಅಂಕಣಗಳಷ್ಟು ವಿಸ್ತಾರವಾಗಿದೆ. ಒಂದು ಕಡೆಯಲ್ಲಿ ಗುಣಲಕ್ಷಣ ಹೊಂದಿರದ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತದೆ. ಇನ್ನೊಂದೆಡೆ, ಸಂಪೂರ್ಣ ಚಿಕಿತ್ಸಾ ಸೌಲಭ್ಯ ಹೊಂದಿರುವ ಆಸ್ಪತ್ರೆ ರೂಪಿಸಲಾಗಿದೆ.

    ದೆಹಲಿಯಲ್ಲಿ ಜೂನ್​ ಅಂತ್ಯಕ್ಕೆ ಕೋವಿಡ್​ ರೋಗಿಗಳ ಸಂಖ್ಯೆ ಒಂದು ಲಕ್ಷಕ್ಕೆ ತಲುಪಲಿದೆ. ಈ ಕಾರಣಕ್ಕಾಗಿ 15,000 ಹೆಚ್ಚುವರಿ ಬೆಡ್​ಗಳು ಅಗತ್ಯವಿದೆ ಎಂದು ಅಂದಾಜಿಸಲಾಗಿತ್ತು. ಅದರಂತೆ ಇಲ್ಲಿ 10 ಸಾವಿರ ರೋಗಿಗಳ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ.

    ಇದನ್ನೂ ಓದಿ; ಯಾವ ದೇಶ ಮೊದಲಿಗೆ ಪಡೆಯುತ್ತೆ ಕರೊನಾ ಲಸಿಕೆ? ಭಾರತಕ್ಕೂ ಖುಲಾಯಿಸುತ್ತೆ ಅದೃಷ್ಟ

    ರಾಧಾ ಸಓಮಿ ಸತ್ಸಂಗ ಬ್ಯಾಸ ಕೇಂದ್ರವು ಆಧ್ಯಾತ್ಮಿಕ ಸಂಘಟನೆಯಾಗಿದ್ದು, 1861 ಶಿವ ದಯಾಲ್ ಸಿಂಗ್​ ಇದರ ಸಂಸ್ಥಾಪಕರು. ಪ್ರಸ್ತುತ ಗುರಿಂದರ್​ ಸಿಂಗ್​ ಇದರ ಮುಖ್ಯಸ್ಥರಾಗಿದ್ದಾರೆ. ಇದರ ಕೇಂದ್ರ ಕಚೇರಿಯು ಪಂಜಾಬ್​ನ ಬಿಯಾಸ್​ ನದಿ ತೀರದಲ್ಲಿದೆ.

    ಲಾಕ್​ಡೌನ್​ ಮರೆತು ಬಿಡಿ, ಅನ್​ ಲಾಕ್​ಡೌನ್ 2.0 ಗೆ ಸಿದ್ಧರಾಗಿ; ಶಾಲಾ- ಕಾಲೇಜು, ಮೆಟ್ರೋ ಆರಂಭಕ್ಕೆ ಮಾರ್ಗಸೂಚಿ ಸಜ್ಜು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts