ಮನೆಯಿಂದಲೇ ಸಂಸ್ಕಾರ ಶಿಕ್ಷಣ

vishushetty
ಸಾಹೇಬರಕಟ್ಟೆ ಯಡ್ತಾಡಿಯಲ್ಲಿ ನಡೆದ ನಮ್ಮೂರ ದಸರಾ ಕಾರ್ಯಕ್ರಮದಲ್ಲಿ ವಿಶು ಶೆಟ್ಟಿ ಅಂಬಲಪಾಡಿ ಅವರಿಗೆ ಶ್ರೀ ವಿನಾಯಕ ಸಾಧನ ಶ್ರೀ ಪುರಸ್ಕಾರ ಪ್ರದಾನಿಸಲಾಯಿತು
Published on

ಕೋಟ: ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ಮನೆಯಿಂದಲೇ ಆರಂಭವಾಗಬೇಕು. ಮಾನವೀಯತೆಗೆ ಮಿಡಿಯುವ ಮನಸ್ಸುಗಳು ಕಡಿಮೆಯಾಗಿರುವುದು ದುರಾದೃಷ್ಟ. ನೋವಿಗೆ ಮನಸ್ಸುಗಳು ಮಿಡಿಯುವಂತಾಗಬೇಕು ಎಂದು ಸಮಾಜಸೇವಕ ವಿಶು ಶೆಟ್ಟಿ ಅಂಬಲಪಾಡಿ ಹೇಳಿದರು.

ಸಾಹೇಬರಕಟ್ಟೆ ಯಡ್ತಾಡಿ ಶ್ರೀ ವಿನಾಯಕ ಯುವಕ ಮಂಡಲದ ಆಶ್ರಯದಲ್ಲಿ 13ನೇ ವರ್ಷದ ಶ್ರೀ ಶಾರದಾಮಹೋತ್ಸವ ನಮ್ಮೂರ ದಸರಾ-2024 ಕಾರ್ಯಕ್ರಮದಲ್ಲಿ ಶ್ರೀ ವಿನಾಯಕ ಸಾಧನ ಶ್ರೀ ಪುರಸ್ಕಾರ ಸ್ವೀಕರಿಸಿ ಮಾತನಾಡಿದರು.

ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ, ವಿದ್ವಾನ್ ಟಿ ವಾಸುದೇವ ಜೋಯಿಸ್ ಶುಭಹಾರೈಸಿದರು. ನಿವೃತ್ತ ಯೋಧ ಗಣೇಶ್ ಶೆಟ್ಟಿ, ಕ್ರೀಡಾಪಟು ಕಿರಣ್ ದೇವಾಡಿಗ ಹಾಗೂ ನಿರ್ದೇಶಕ ವಿಜಯ್ ಕುಮಾರ್ ಕೊಡಿಯಲ್‌ಬೈಲ್ ಅವರನ್ನು ಸನ್ಮಾನಿಸಲಾಯಿತು. ಅಮೃತ್ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಗಣೇಶ್ ಪ್ರಸಾದ್ ಕಾಂಚನ್, ಪ್ರದೀಪ್ ಬಲ್ಲಾಳ್, ಸುಬ್ರಹ್ಮಣ್ಯ ಎನ್ ಪೂಜಾರಿ, ಶರತ್ ಕುಮಾರ್ ಶೆಟ್ಟಿ, ಗಿರೀಶ್ ನಾಯ್ಕ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net