ಹಬ್ಬ, ದೇವರ ಸ್ತುತಿಯಿಂದ ನೆಮ್ಮದಿ

shanthinikethana
ಶಾಂತಿನಿಕೇತನ ಸೌಹಾರ್ದ ಸಹಕಾರಿ ಸಂಘದ ವತಿಯಿಂದ ನಡೆದ ವಾರ್ಷಿಕ ಪೂಜೆಯಲ್ಲಿ ವಿದ್ವಾನ್ ವೇದವ್ಯಾಸ ಮಡಾಮಕ್ಕಿ, ಶಾಂತಿನಿಕೇತನ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ರಾಜೇಶ್, ನಿರ್ದೇಶಕರಾದ ಜಯಕರ್, ಮಹೇಶ್, ಕೆ.ಗಣೇಶ್, ಸಿಇಒ ನರೇಂದ್ರ ಇದ್ದರು.
Published on

ಹೆಬ್ರಿ: ಭಾರತೀಯರಿಗೆ ಪುರಾಣಗಳಲ್ಲಿ ತಿಳಿಸಿದಂತೆ ಧರ್ಮ ಮಾರ್ಗದಲ್ಲಿ ನಡೆಯಬೇಕಾದರೆ ಪೂಜೆ ಪುರಸ್ಕಾರ, ಹಬ್ಬಗಳ ಆಚರಣೆ ದೇವರ ಸ್ತುತಿ ಮಾಡಬೇಕಾಗುತ್ತದೆ. ಆ ಮೂಲಕ ಶಾಂತಿನಿಕೇತನದಲ್ಲಿ ನಡೆಸಿದ ಗಣಪತಿ ಹೋಮ ಸರ್ವರಿಗೂ ಒಳಿತು ಮಾಡಲಿ ಎಂದು ವಿದ್ವಾನ್ ವೇದವ್ಯಾಸ ಮಡಾಮಕ್ಕಿ ಹೇಳಿದರು.

ಶಾಂತಿನಿಕೇತನ ಸೌಹಾರ್ದ ಸಹಕಾರಿ ಸಂಘದ ವತಿಯಿಂದ ನಡೆದ ವಾರ್ಷಿಕ ಪೂಜೆಯಲ್ಲಿ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿ ಮಾತನಾಡಿದರು.

ಗಣಪತಿ ಹೋಮ, ವಾಹನ ಪೂಜೆ, ನಾಗನಿಗೆ ಪೂಜೆ ನೆರವೇರಿತು. ಶಾಂತಿನಿಕೇತನ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ರಾಜೇಶ್, ನಿರ್ದೇಶಕರಾದ ಜಯಕರ್, ಮಹೇಶ್, ಕೆ.ಗಣೇಶ್, ಸಿಇಒ ನರೇಂದ್ರ, ವ್ಯವಸ್ಥಾಪಕಿ ರಾಜಶ್ರೀ, ಸಿಬ್ಬಂದಿ ಪ್ರಸನ್ನ, ರಾಘವೇಂದ್ರ, ಸಹಕಾರಿ ಸದಸ್ಯರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net