More

  ಬ್ಯಾಂಕ್ ನಿವೃತ್ತ ಪ್ರಬಂಧಕರಿಗೆ ಗೌರವ

  ಕೋಟ: ಇತ್ತೀಚಿಗೆ ನಿವೃತ್ತರಾದ ಕರ್ಣಾಟಕ ಬ್ಯಾಂಕ್ ಸಾಲಿಗ್ರಾಮ ಶಾಖೆ ವ್ಯವಸ್ಥಾಪಕ ಭಾಸ್ಕರ ಹೆಗ್ಡೆ ಸಿ.ಎಚ್ ದಂಪತಿಯನ್ನು ಸಮಾನ ಮನಸ್ಕರ ತಂಡದ ವತಿಯಿಂದ ಸಾಲಿಗ್ರಾಮ ಶಾಖೆಯಲ್ಲಿ ಇತ್ತೀಚೆಗೆ ಗೌರವಿಸಲಾಯಿತು.

  ಹಿರಿಯರಾದ ಸಂಬಂಧ ನರಸಿಂಹ ಐತಾಳ್ ದಂಪತಿಯನ್ನು ಸನ್ಮಾನಿಸಿ ಶುಭ ಹಾರೈಸಿದರು. ಕಾರ್ತಟ್ಟು ಅಘೋರೇಶ್ವರ ದೇಗುಲದ ಅಧ್ಯಕ್ಷ ಚಂದ್ರಶೇಖರ ಕಾರಂತ್, ಭಾಸ್ಕರ ಹೆಗ್ಡೆಯವರ 34 ವರ್ಷದ ಬ್ಯಾಂಕ್‌ನ ಸುದೀರ್ಘ ಸೇವೆ ಶ್ಲಾಘಿಸಿ, ಅವರ ಕರ್ತವ್ಯ ಪ್ರಜ್ಞೆ, ಸರಳ ವ್ಯಕ್ತಿತ್ವವನ್ನು ಕೊಂಡಾಡಿದರು. ಸಿಬ್ಬಂದಿ ಪಿ.ಸೀತಾರಾಮ ಐತಾಳ, ಸುಧಾಕರ ನಾವಡ, ಶಾಖಾ ಸಿಬ್ಬಂದಿ, ಸ್ಥಳೀಯರು ಉಪಸ್ಥಿತರಿದ್ದರು.

  ಗೆಳೆಯರ ಬಳಗ ಕಾರ್ಕಡ ಅಧ್ಯಕ್ಷ ಕೆ.ತಾರಾನಾಥ ಹೊಳ್ಳ ಕಾರ್ಯಕ್ರಮ ಸಂಯೋಜಿಸಿ ನಿರೂಪಿಸಿದರು. ವ್ಯವಸ್ಥಾಪಕ ಅವಿನಾಶ್ ಹಂದೆ ವಂದಿಸಿದರು.

  See also  ಆಧ್ಯಾತ್ಮಿಕ ಮಾರ್ಗದಿಂದ ನೆಮ್ಮದಿ ಸಾಧ್ಯ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts