ಬ್ರಹ್ಮಾವರ: ಅಖಂಡ ಭಾರತದ ಪರಿಕಲ್ಪನೆ ಕಂಡ ಶ್ರೀ ಶಂಕರಾಚಾರ್ಯರು ಶ್ರೇಷ್ಠ ತತ್ವಜ್ಞಾನಿಗಳು. ಅವರ ನೆನಪಿಗಾಗಿ ತತ್ವಜಾನಿಗಳ ದಿನ ಆಚರಿಸಲಾಗುತ್ತದೆ ಎಂದು ಬ್ರಹ್ಮಾವರ ಎಸ್‌ಎಂಎಸ್ ಕಾಲೇಜು ನಿವೃತ್ತ ಪ್ರಾಂಶುಪಾಲ ಡಾ.ವೈ.ರವೀಂದ್ರನಾಥ್ ರಾವ್ ಹೇಳಿದರು.
ಬ್ರಹ್ಮಾವರದ ಮಹಾತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಭಾನುವಾರ ಶ್ರೀ ಶಂಕರತತ್ವ ಪ್ರಸಾರ ಅಭಿಯಾನ ಸಮಿತಿ ಬ್ರಹ್ಮಾವರ, ಬ್ರಾಹ್ಮಣ ವಲಯ ಸಮಿತಿ ವತಿಯಿಂದ ಶ್ರೀ ಶಂಕರ ಜಯಂತಿ ಮಹೋತ್ಸವದಲ್ಲಿ ಮಾತನಾಡಿದರು.
ಬ್ರಾಹ್ಮಣ ವಲಯ ಸಮಿತಿಯ ಅಶೋಕ್ ಭಟ್ ಅಧ್ಯಕ್ಷತೆ ವಹಿಸಿದ್ದರು. ಗೌರವಾಧ್ಯಕ್ಷ ಶ್ರೀನಿವಾಸ್ ಭಟ್, ಶ್ರೀ ಶಂಕರತತ್ವ ಪ್ರಸಾರ ಅಭಿಯಾನ ಸಮಿತಿ ಸಂಘಟನಾ ಕಾರ್ಯದರ್ಶಿ ಸವಿತಾ ಎರ್ಮಾಳ್, ಸದಸ್ಯ ಮಾಧವ ಖಾರ್ವಿ ಉಪಸ್ಥಿತರಿದ್ದರು. ರವೀಂದ್ರ ಹೆಬ್ಬಾರ್ ಸ್ವಾಗತಿಸಿದರು. ಕೃಷ್ಣಮೂರ್ತಿ ಉಪಾಧ್ಯ ವಂದಿಸಿದರು. ಆರ್‌ಟಿ ಭಟ್ ಕಾರ್ಯಕ್ರಮ ನಿರೂಪಿಸಿದರು.