More

  ಎನ್ನೆಸ್ಸೆಸ್ ಶಿಬಿರದಲ್ಲಿ ಹೊಂದಾಣಿಕೆಯ ಪಾಠ : ಆನಂದ್ ಸಿ.ಕುಂದರ್

  ಕೋಟ: ಸಮಾಜಸೇವೆ, ಪರಿಸರ ಸಂರಕ್ಷಣೆಗೆ, ಹೊಂದಾಣಿಕೆ ಮುಂತಾದ ಉತ್ತಮ ಗುಣಗಳನ್ನು ರೂಢಿಸಲು ಎನ್‌ಎಸ್‌ಎಸ್ ಶಿಬಿರ ಅಗತ್ಯ ಎಂದು ಗೀತಾನಂದ ಫೌಂಡೇಶನ್ ಪ್ರವರ್ತಕ ಆನ್‌ಂದ್ ಸಿ.ಕುಂದರ್ ಹೇಳಿದರು.

  ಕೋಡಿ- ಕನ್ಯಾನದ ಲಕ್ಷ್ಮೀ ಸೋಮ ಬಂಗೇರ ಸ್ಮಾರಕ ಸರ್ಕಾರಿ ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರ ಉದ್ಘಾಟಿಸಿ ಮಾತನಾಡಿದರು.

  ಶಿವ ಎಸ್. ಕರ್ಕೇರ ಶುಭಹಾರೈಸಿದರು. ಪ್ರಾಂಶುಪಾಲೆ ಡಾ.ಸುನೀತಾ ವಿ. ಅಧ್ಯಕ್ಷತೆ ವಹಿಸಿದ್ದರು. ಶಂಕರ ಕುಂದರ್, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ರಮೇಶ್ ಎಚ್.ಕುಂದರ್, ಕೋಡಿ ಪಿಡಿಒ ರವೀಂದ್ರ ರಾವ್, ಪ್ರಾಂಶುಪಾಲ ರಾಘವೇಂದ್ರ ಅಡಿಗ, ಸೋಮ ಬಂಗೇರ, ಪ್ರೌಢಶಾಲೆ ಮುಖ್ಯಶಿಕ್ಷಕಿ ರಾಧಿಕಾ, ಕಾಲೇಜಿನ ಹಳೇ ವಿದ್ಯಾರ್ಥಿ ಸಂಘ ಅಧ್ಯಕ್ಷ ಸುದಿನ, ಪಂಚಾಯಿತಿ ಪೂರ್ವಾಧ್ಯಕ್ಷ ಪ್ರಭಾಕರ ಮೆಂಡನ್ ಉಪಸ್ಥಿತರಿದ್ದರು. ಎನ್ನೆಸ್ಸೆಸ್ ಅಧಿಕಾರಿ ಡಾ.ಮನೋಜ್‌ಕುಮಾರ್ ಎಂ. ಸ್ವಾಗತಿಸಿದರು. ಶ್ರೀಕಾಂತ್ ಎ. ಪೂಜಾರಿ ವಂದಿಸಿದರು. ಉಪನ್ಯಾಸಕಿ ಮಮತಾ ಕಾರ್ಯಕ್ರಮ ನಿರೂಪಿಸಿದರು.

  See also  ಉಡುಪಿ ಮತದಾರರ ಚಿತ್ತ ಯಾವ ಅಭ್ಯರ್ಥಿಯತ್ತ..?

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts