

ಬೈಂದೂರು: ಉಡುಪಿ ತೋಟಕಾರಿಕೆ ಇಲಾಖೆ ಹಾಗೂ ಮಂಡ್ಯದ ಕಟ್ರಾಸಿ ಇಂಡಿಯ ಸಂಸ್ಥೆ ವತಿಯಿಂದ ಪರಂಪರಾಗಾತ ಕೃಷಿ ಮಾಹಿತಿ, ಗಿಡ ವಿತರಣೆ ಹಾಗೂ ಸಬ್ಸಿಡಿ ದರದಲ್ಲಿ ಸಿಗುವ ಕೃಷಿ ಸಲಕರಣೆ ಬಗ್ಗೆ ಮಾಹಿತಿ ಶಿಬಿರ ಜಡ್ಕಲ್ ವ್ಯವಸಾಯ ಸೇವಾ ಸಹಕಾರಿ ಸಂಘದ ಸಭಾಭವನದಲ್ಲಿ ನಡೆಯಿತು.
ಜಿಲ್ಲಾ ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಭುವನೇಶ್ವರಿ, ಕುಂದಾಪುರ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ನಿಧೀಶ್ ಕೆ.ಜೆ., ಬೈಂದೂರು ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಪ್ರವೀಣ್ ಕಟ್ರಾಸಿ, ಇಂಡಿಯಾ ಸಂಸ್ಥೆ ಮುಖ್ಯಸ್ಥೆ ಪದ್ಮಾಕಲಾ ಅವರು ಎರೆಹುಳ ಗೊಬ್ಬರ ಹಾಗೂ ಇತರ ಕೃಷಿ ವಿಷಯಗಳ ಬಗ್ಗೆ ಮಾಹಿತಿ ನೀಡಿದರು.
ಹಿರಿಯ ಕೃಷಿಕ ಸತ್ಯನಾರಾಯಣ ಅಡಿಗ, ಸಹಕಾರಿ ಸಂಘದ ಅಧ್ಯಕ್ಷ ಪ್ರಭಾಕರ ಶೆಟ್ಟಿ, ಸಿಇಒ ವೆಂಕಟರಮಣ ಶರ್ಮಾ, ಪಂಚಾಯಿತಿ ಸದಸ್ಯ ನಾಗೇಶ್ ನಾಯ್ಕ, ಪಿಕೆವಿವೈ ಪುಶ್ಯ ಗುಂಪಿನ ಅಧ್ಯಕ್ಷ ಚಂದ್ರ ಪೂಜಾರಿ ಸಳ್ಕೊಡು, ಪುನರ್ವಸು ಗುಂಪಿನ ಅಧ್ಯಕ್ಷ ಗೋಪಾಲ ಶೆಟ್ಟಿ. ಮೂಲ ಗುಂಪಿನ ಅಧ್ಯಕ್ಷ ಜೇಕಬ್, ಸಂಘದ ಸದಸ್ಯರು ಇದ್ದರು.