

ಬೆಂಗಳೂರು: ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಸ್ಯಾಂಡಲ್ವುಡ್ ಹಿರಿಯ ನಟಿ ಜಯಂತಿ ಅವರಿಂದು ಕೊನೆಯುಸಿರೆಳೆದಿದ್ದಾರೆ. ಅಭಿನಯ ಶಾರದೆ ಅಗಲಿಕೆಗೆ ಚಿತ್ರರಂಗದ ಗಣ್ಯರು ಮತ್ತು ರಾಜಕೀಯ ನಾಯಕರು ಸಂತಾಪ ಸೂಚಿಸಿದ್ದಾರೆ. ಜಯಂತಿ ಅವರ ಮಾಜಿ ಸೊಸೆ ಹಾಗೂ ನಟಿ ಅನುಪ್ರಭಾಕರ್ ಭಾವುಕವಾಗಿ ಟ್ವೀಟ್ ಮಾಡಿದ್ದಾರೆ.
ನಿಮ್ಮ ಜೊತೆ ಕಳೆದಂತ ಪ್ರತಿ ಕ್ಷಣ ಸದಾ ನನ್ನ ಮನಸು ಹಾಗು ಹೃದಯದಲ್ಲಿ ಇರುತ್ತದೆ Mom… ನಿಮ್ಮಿಂದ ಕಲಿತ ಜೀವನದ ಪಾಠಗಳು ನಾನು ಎಂದು ಮರೆಯೋದಿಲ್ಲ. ನಿಮ್ಮ ಆತ್ಮೀಯರನ್ನು ಕಳೆದುಕೊಂಡಾಗ ಆ ವಿಷಯದ ಬಗ್ಗೆ ಎಷ್ಟೋ ಸಾರಿ ನನ್ನ ಹತ್ತಿರ ಮಾತಾಡಿದ್ರಿ..ಅಮ್ಮಮ್ಮ ಜೊತೆ ನೆಮ್ಮದಿಯಿಂದ ಇರಿ. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲೆಂದು ಅನುಪ್ರಭಾಕರ್ ಟ್ವೀಟ್ ಮಾಡಿದ್ದಾರೆ.
ಜಯಂತಿ ಅವರ ಪುತ್ರ ಕೃಷ್ಣ ಪ್ರಸಾದ್ ಜತೆ ಮದುವೆ ಆಗಿದ್ದ ಅನುಪ್ರಭಾಕರ್ ಬಳಿಕ ವಿಚ್ಛೇದನ ಪಡೆದ ನಟ ರಘುಮುಖರ್ಜಿ ಅವರನ್ನು ವರಿಸಿದ್ದಾರೆ. (ದಿಗ್ವಿಜಯ ನ್ಯೂಸ್)