More

    ನಟ ದರ್ಶನ್ ​’Devil’ ಚಿತ್ರದ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಬೇಡಿ! ಮಿಲನ ಪ್ರಕಾಶ್​ ಹೀಗಂದಿದ್ಯಾಕೆ?

    ಬೆಂಗಳೂರು: ಕಾಟೇರ ಚಿತ್ರದ ಯಶಸ್ಸಿನ ನಂತರ ‘ಚಾಲೆಂಜಿಂಗ್ ಸ್ಟಾರ್’ ದರ್ಶನ್​ ನಟನೆಯ ಮುಂಬರುವ ಸಿನಿಮಾಗಳ ಮೇಲೆ ಅಭಿಮಾನಿಗಳ ಕುತೂಹಲ ಹೆಚ್ಚಾಗಿದೆ. ‘ಮಿಲನ’ ಚಿತ್ರದ ಖ್ಯಾತಿಯ ನಿರ್ದೇಶಕ ಮಿಲನ ಪ್ರಕಾಶ್​ ಅವರು ದರ್ಶನ್​ ಜೊತೆ ಹೊಸ ಸಿನಿಮಾ ಮಾಡುತ್ತಿದ್ದು, ಅದರ ಶೀರ್ಷಿಕೆ ‘ಡೆವಿಲ್​’ ಎಂದು ಇಡಲಾಗಿದೆ.

    ಇದನ್ನೂ ಓದಿ:ನಟ ಆಮೀರ್ ಖಾನ್ ಪುತ್ರಿ ಇರಾಖಾನ್-ನೂಪುರ್ ಶಿಖರೆ ಜೋಡಿ ಹನಿಮೂನ್ಗೆ ಎಲ್ಲಿ ಹೋಗಿದ್ದಾರೆ?

    ಈ ಮಧ್ಯೆ ಚಿತ್ರದ ನಾಯಕಿಯಾಗಿ ತುಳು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಕಡಲ ತೀರದ ಹುಡುಗಿ ರಚನಾ ರೈ ಡೆವಿಲ್;‌ ದಿ ಹೀರೋ ಸಿನಿಮಾಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಎಂಬ ಸುದ್ದಿ ಭಾರೀ ಸದ್ದು ಮಾಡಿತ್ತು. ಇದೀಗ ಈ ನಾಯಕಿ ಆಯ್ಕೆ ವಿಚಾರ ಮತ್ತು ಡೆವಿಲ್‌ ಸಿನಿಮಾ ಬಗ್ಗೆ ಹರಿದಾಡುತ್ತಿರುವ ಮಾಹಿತಿ ಸುಳ್ಳು ಎಂದು ನಿರ್ದೇಶಕರು ಸ್ಪಷ್ಟಪಡಿಸಿದ್ದಾರೆ.

    ನಟ ದರ್ಶನ್ ​'Devil' ಚಿತ್ರದ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಬೇಡಿ! ಮಿಲನ ಪ್ರಕಾಶ್​ ಹೀಗಂದಿದ್ಯಾಕೆ?

    ಈ ಬಗ್ಗೆ ನಿರ್ದೇಶಕ ಪ್ರಕಾಶ್‌ ವೀರ್‌ ಸುಳ್ಳು ವದಂತಿ ಹಬ್ಬಿಸಬೇಡಿ. ‘ಡೆವಿಲ್ ಸಿನಿಮಾದ ಬಗ್ಗೆ ಶೀಘ್ರದಲ್ಲಿ ನಾವೇ ಅಧಿಕೃತವಾಗಿ ಮಾಹಿತಿ ನೀಡುತ್ತೇವೆ. ಅಲ್ಲಿಯ ತನಕ ಬೇರೆ ಯಾವುದನ್ನೂ ನಂಬಬೇಡಿ’ ಎಂದು ಮನವಿ ಮಾಡಿಕೊಂಡಿದ್ದಾರೆ. ಪ್ರಕಾಶ್ ವೀರ್ ಮತ್ತು ‘ಚಾಲೆಂಜಿಂಗ್ ಸ್ಟಾರ್’ ದರ್ಶನ್ ಅವರ ಕಾಂಬಿನೇಷನ್​ನಲ್ಲಿ ಮೂಡಿಬರಲಿರುವ ಈ ಸಿನಿಮಾಗೆ 2 ತಿಂಗಳ ಹಿಂದೆ ಸಿಂಪಲ್​ ಆಗಿ ಸ್ಕ್ರಿಪ್ಟ್ ಪೂಜೆ ಮಾಡಲಾಗಿತ್ತು. ಸದ್ಯಕ್ಕೆ ‘ಡೆವಿಲ್’ ಚಿತ್ರತಂಡದವರು ಯಾವುದೇ ಪ್ರಚಾರ ಕಾರ್ಯ ಆರಂಭಿಸಿಲ್ಲ.

    ನಟ ದರ್ಶನ್ ​'Devil' ಚಿತ್ರದ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಬೇಡಿ! ಮಿಲನ ಪ್ರಕಾಶ್​ ಹೀಗಂದಿದ್ಯಾಕೆ?

    ಡೆವಿಲ್‌ ನಿರ್ದೇಶಕರ ಸ್ಪಷ್ಟನೆ: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ನಾಯಕರಾಗಿ ನಟಿಸುತ್ತಿರುವ “ಡೆವಿಲ್” ಚಿತ್ರದ ಸ್ಕ್ರಿಪ್ಟ್ ಪೂಜೆ ಎರಡು ತಿಂಗಳ ಹಿಂದೆ ಸರಳವಾಗಿ ನೆರವೇರಿತ್ತು. ಆದರೆ ಡೆವಿಲ್ ಚಿತ್ರದ ಕುರಿತಂತೆ ಇನ್ನು ಯಾವುದೇ ಪ್ರಚಾರ ಕಾರ್ಯ ಆರಂಭ ಮಾಡಿಲ್ಲ. ಮೊದಮೊದಲು ಕೆಲವರು ಸೋಷಿಯಲ್‌ ಮೀಡಿಯಾದಲ್ಲಿ ಯಾವುದೋ ಪೋಸ್ಟರ್ ಹಾಕಿ ಡೆವಿಲ್ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಅಂತ ಹೇಳಿಕೊಂಡಿದ್ದರು.

    ಈಗ ಈ ಚಿತ್ರಕ್ಕೆ ನಾಯಕಿಯ ಆಯ್ಕೆಯಾಗಿದ್ದಾರೆ ಎಂಬ ವಿಷಯವನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಾಕುತ್ತಿದ್ದಾರೆ. ಈ ಮೇಲ್ಕಂಡ ಯಾವುದೇ ವಿಷಯಗಳು ಚಿತ್ರತಂಡದ ಅಧಿಕೃತ ಮಾಹಿತಿ ಆಗಿರುವುದಿಲ್ಲ. ಖಂಡಿತವಾಗಿಯೂ ಕನ್ನಡದ ಹುಡುಗಿಯನ್ನೇ ನಾಯಕಿಯಾಗಿ ಆಯ್ಕೆ ಮಾಡುತ್ತೇವೆ. ಆದರೆ ನಿಮ್ಮೆಲ್ಲರ ಸಂದೇಹಕ್ಕೆ ದರ್ಶನ್ ಅವರ ಹುಟ್ಟುಹಬ್ಬ ಫೆಬ್ರವರಿ 16ರಂದು ಉತ್ತರ ಕೊಡುತ್ತೇವೆ. ಸದ್ಯದಲ್ಲೇ ನಮ್ಮ ಚಿತ್ರದ ಪ್ರಚಾರ ಕಾರ್ಯ ಆರಂಭಿಸುತ್ತೇವೆ‌. ನಮ್ಮ ವೈಷ್ಣೊ ಸ್ಟುಡಿಯೋಸ್ ಸಂಸ್ಥೆಯ ಮೂಲಕವೇ ಅಧಿಕೃತವಾಗಿ ಡೆವಿಲ್ ಚಿತ್ರದ ಬಗ್ಗೆ ಮಾಹಿತಿ ನೀಡುತ್ತಾ ಹೋಗುತ್ತೇವೆ” ಎಂದಿದ್ದಾರೆ ನಿರ್ದೇಶಕ ಪ್ರಕಾಶ್.

    ನಟ ದರ್ಶನ್ ​'Devil' ಚಿತ್ರದ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಬೇಡಿ! ಮಿಲನ ಪ್ರಕಾಶ್​ ಹೀಗಂದಿದ್ಯಾಕೆ?

    ಒಟಿಟಿಯಲ್ಲಿ ಕಾಟೇರ: ಕಾಟೇರ ಸಿನಿಮಾ ಕನ್ನಡದಲ್ಲಷ್ಟೇ ಬಿಡುಗಡೆ ಆಗಿತ್ತು. ಅದಾದ ಬಳಿಕ ಬೇರೆ ಭಾಷೆಗಳಿಗೆ ಡಬ್‌ ಆಗಿ ರಿಲೀಸ್‌ ಆಗಲಿದೆ ಎನ್ನಲಾಗಿತ್ತು. ಆದರೆ, ಈ ಸಿನಿಮಾ ಪರಭಾಷೆಗಳಲ್ಲಿ ಬಿಡುಗಡೆ ಆಗಲಿಲ್ಲ. ಇದೀಗ ನೇರವಾಗಿ ಒಟಿಟಿಯತ್ತ ಕಾಟೇರ ಸಿನಿಮಾ ಕಾಲಿರಿಸಿದೆ. ಜೀ 5 ಒಟಿಟಿಯಲ್ಲಿ ಕಾಟೇರ ಸಿನಿಮಾ ಬಿಡುಗಡೆಗೆ ದಿನಾಂಕ ನಿಗದಿಯಾಗಿದೆ. ಫೆ. 9ರಂದು ಈ ಸಿನಿಮಾ ಸ್ಟ್ರೀಮಿಂಗ್‌ ಆರಂಭಿಸಲಿದೆ. ತರುಣ್‌ ಸುಧೀರ್‌ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿಬಂದಿತ್ತು. ರಾಕ್‌ಲೈನ್‌ ವೆಂಕಟೇಶ್‌ ಸಿನಿಮಾ ನಿರ್ಮಾಣ ಮಾಡಿದ್ದರು.

    ಬಿಗ್‌ಬಾಸ್‌ ಸ್ಕ್ರಿಪ್ಟೆಡ್ ಶೋ; ವಿನ್ನರ್​ ಕಾರ್ತಿಕ್ ಮಹೇಶ್​​ ಬೆಂಕಿ ರಿಯಾಕ್ಷನ್ ಕೇಳಿ​​?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts