More

    ಬಿಗ್‌ಬಾಸ್‌ ಸ್ಕ್ರಿಪ್ಟೆಡ್ ಶೋ; ವಿನ್ನರ್​ ಕಾರ್ತಿಕ್ ಮಹೇಶ್​​ ಬೆಂಕಿ ರಿಯಾಕ್ಷನ್ ಕೇಳಿ​​?

    ಚಾಮರಾಜನಗರ: ‘ಬಿಗ್​ ಬಾಸ್​’ ಇದು ಕನ್ನಡ ಕಿರುತೆರೆಯ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ. ಸೀಸನ್​ 10ರ ಗ್ರ್ಯಾಂಡ್​ ಫಿನಾಲೆ ಭಾನುವಾರ ಸಂಜೆ ಪ್ರಸಾರವಾಗಿತ್ತು. ಕಾರ್ತಿಕ್ ಮಹೇಶ್‌ ಈ ಸೀಸನ್​ನ ವಿಜೇತರಾಗಿ ಹೊರಹೊಮ್ಮಿದ್ದಾರೆ. ಅತಿ ಹೆಚ್ಚು ಕನ್ನಡಿಗರ ಮತ ಸಂಪಾದಿಸಿದ ಇವರು​​​ ಗೆಲುವಿನ ನಗೆ ಬೀರಿದ್ದಾರೆ. ಬಿಗ್​ ಬಾಸ್​ ಟ್ರೋಫಿ, 50 ಲಕ್ಷ ರೂಪಾಯಿ, ಒಂದು ಮಾರುತಿ ಬ್ರೀಝಾ ಕಾರು, ಸ್ಕೂಟರ್‌ ಅನ್ನು ಬಹುಮಾನವಾಗಿ ಪಡೆದಿದ್ದಾರೆ.

    ಇದನ್ನೂ ಓದಿ:300 ಪ್ರಪೋಸಲ್‌ ರಿಜೆಕ್ಟ್‌ ಮಾಡಿದ್ದಾರಂತೆ ಕನ್ನಡದ ನಟಿ! ಈ ಮಾತು ಕೇಳಿ ಕಿಚ್ಚ ಸುದೀಪ್​ ಹೇಳಿದ್ದೇನು ಗೊತ್ತಾ ?

    ಇದೀಗ ಕಾರ್ತಿಕ್​ ಬಿಗ್​ಬಾಸ್​ ಬಗ್ಗೆ ಕೆಲವು ಮಹತ್ವದ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಬಿಗ್‌ಬಾಸ್‌ ಸ್ಕ್ರಿಪ್ಟೆಡ್ ಶೋ ಅಲ್ಲ, ಒಂದು ವ್ಯಕ್ತಿತ್ವದ ಆಟ ಎಂದು ಬಿಗ್‌ಬಾಸ್ ಸೀಸನ್ 10ರ ವಿಜೇತ ಕಾರ್ತಿಕ್ ಮಹೇಶ್ ಸ್ಪಷ್ಟಪಡಿಸಿದ್ದಾರೆ.

    ಬಿಗ್‌ಬಾಸ್‌ ಸ್ಕ್ರಿಪ್ಟೆಡ್ ಶೋ; ವಿನ್ನರ್​ ಕಾರ್ತಿಕ್ ಮಹೇಶ್​​ ಬೆಂಕಿ ರಿಯಾಕ್ಷನ್ ಕೇಳಿ​​?

    ಕನ್ನಡ ಬಿಗ್‌ಬಾಸ್‌ ಸ್ಕ್ರಿಪ್ಟೆಡ್ ಶೋ ಎಂದು ಬಿಗ್​ಬಾಸ್​ ಹೋಗಿ ಬಂದಿದ್ದ ಹಲವರು ಮಾಹಿತಿ ಹಂಚಿಕೊಂಡಿದ್ದರು ಇದಕ್ಕೆ ಬಿಗ್​ಬಾಸ್​ ವಿನ್ನರ್​ ಕಾರ್ತಿಕ್​ ಈ ವಿಷಯವನ್ನು ಸ್ಪಷ್ಟಪಡಿಸಿದ್ದಾರೆ. ಡ್ರೋನ್ ಪ್ರತಾಪ್ ರನ್ನರ್ ಅಪ್ ಆಗಿರೋದು ಖುಷಿಯಾಗಿದೆ. ಅದಕ್ಕೆ ಅವರು ಆರ್ಹರಾಗಿದ್ದಾರೆ. ವಿನಯ್ ನನ್ನ ಜೊತೆಗೆ ಫೈನಲ್‌ನಲ್ಲಿ ಇರ್ತಾರೆ ಎಂಬ ಆಸೆಯಿತ್ತು. ಆದರೆ ಅವರು ಫೈನಲ್‌ಗೆ ಬರಲಿಲ್ಲ. ಆ ಬಗ್ಗೆ ಬೇಜಾರಿಲ್ಲ. ಜನರು ವೋಟ್ ಹಾಕಿದ್ರಿಂದ ಡ್ರೋನ್ ಪ್ರತಾಪ್ ರನ್ನರ್ ಆಗಿದ್ದಾರೆ ಎಂದು ಹೇಳಿದರು.

    ಡ್ರೋನ್ ಪ್ರತಾಪ್ ರನ್ನರ್ ಅಪ್ ಆಗಿರೋದು ಖುಷಿಯಾಗಿದೆ. ಅದಕ್ಕೆ ಅವರು ಆರ್ಹರಾಗಿದ್ದಾರೆ. ವಿನಯ್ ನನ್ನ ಜೊತೆಗೆ ಫೈನಲ್‌ನಲ್ಲಿ ಇರ್ತಾರೆ ಎಂಬ ಆಸೆಯಿತ್ತು. ಆದರೆ ಅವರು ಫೈನಲ್‌ಗೆ ಬರಲಿಲ್ಲ. ಆ ಬಗ್ಗೆ ಬೇಜಾರಿಲ್ಲ. ಜನರು ವೋಟ್ ಹಾಕಿದ್ರಿಂದ ಡ್ರೋನ್ ಪ್ರತಾಪ್ ರನ್ನರ್ ಆಗಿದ್ದಾರೆ ಎಂದು ಹೇಳಿದರು.

    ಬಿಗ್‌ಬಾಸ್‌ ಸ್ಕ್ರಿಪ್ಟೆಡ್ ಶೋ; ವಿನ್ನರ್​ ಕಾರ್ತಿಕ್ ಮಹೇಶ್​​ ಬೆಂಕಿ ರಿಯಾಕ್ಷನ್ ಕೇಳಿ​​?

    ತಾಯಿ ತವರು, ತಮ್ಮ ಹುಟ್ಟೂರಾದ ಚಾಮರಾಜನಗರ ಜಿಲ್ಲೆಗೆ ಇಂದು ಬಿಗ್ ಬಾಸ್ ಸೀಸನ್​ 10ರ ವಿಜೇತ ಕಾರ್ತಿಕ್​​ ಮಹೇಶ್​ ಭೇಟಿ ಕೊಟ್ಟಿದ್ದಾರೆ. ಮರಿಯಾಲ ಮಠ, ಚಾಮರಾಜನಗರದ ವಿರಕ್ತ ಮಠಕ್ಕೆ ಭೇಟಿ ಕೊಟ್ಟು ಗದ್ದುಗೆಗೆ ಪೂಜೆ ಸಲ್ಲಿಸಿದ್ದಾರೆ. ಬಳಿಕ ಮಾಧ್ಯಮವರೊಂದಿಗೆ ಮಾತನಾಡಿದ ಅವರು, ಚಾಮರಾಜನಗರ ಜಿಲ್ಲೆ ನನ್ನ ಹುಟ್ಟೂರು. ತಾಯಿಯ ಊರು‌ ಹೆಗ್ಗೋಠಾರ. ನಾನು ಹುಟ್ಟಿದ್ದು ಹಾಗೂ ಒಂಭತ್ತು ತಿಂಗಳು ಬೆಳೆದದ್ದು ಇದೇ ಜಿಲ್ಲೆಯಲ್ಲಿ. ಬಾಲ್ಯದ ನೆನಪು ಈಗಲೂ ಹಾಗೇ ಇದೆ ಎಂದು ತಿಳಿಸಿದರು.

    ಇಂದು ಚಾಮರಾಜನಗರಕ್ಕೆ ಭೇಟಿ ನೀಡಿದ ಅವರು, ನಗರದ ಸಿದ್ದಮಲ್ಲೇಶ್ವರ ವಿರಕ್ತ ಮಠಕ್ಕೆ ತೆರಳಿ ಸಿದ್ದಬಸವರಾಜಸ್ವಾಮೀಜಿ ಗದ್ದುಗೆ ದರ್ಶನ ಪಡೆದರು. ಇದೇ ವೇಳೆ ಸಂಘ ಸಂಸ್ಥೆ ಹಾಗೂ ಅಭಿಮಾನಿಗಳು ಕಾರ್ತಿಕ್‌ಗೆ ಸನ್ಮಾನಿಸಿ ಅಭಿನಂದಿಸಿದರು. ಈ ವೇಳೆ ಕಾರ್ತಿಕ್ ಜೊತೆ ಸೆಲ್ಫಿ ತೆಗೆದುಕೊಳ್ಳಲು ಯುವಕ, ಯುವತಿಯರು ಮುಗಿಬಿದ್ದರು.

    ನಾನು ಹುಟ್ಟಿದ್ದು ಚಾಮರಾಜನಗರದ ಹೆಗ್ಗೋಠಾರ ಗ್ರಾಮದಲ್ಲಿ. ಹಾಗಾಗಿ ಬಾಲ್ಯ ಕಳೆಯಲು ಇಲ್ಲಿಗೆ ಬರುತ್ತಿದ್ದೆ. ಇಲ್ಲಿಗೆ ಬಂದರೆ ನನಗೆ ತುಂಬಾ ಖುಷಿಯಾಗುತ್ತದೆ. ನನ್ನ ಗೆಲುವು ನನ್ನ ಕುಟುಂಬ ಹಾಗು ಅಭಿಮಾನಿಗಳಿಂದ ಸಾಧ್ಯವಾಗಿದ್ದು, ಹುಟ್ಟೂರು ಹಾಗೂ ಬೆಳೆದು ಬಂದ ದಾರಿ ಎಂದಿಗೂ ಮರೆಯಬಾರದು. ಬಿಗ್‌ಬಾಸ್ ಗೆದ್ದ ನಂತರ ಒಳ್ಳೆಯ ಆಫರ್‌ಗಳು ಬರುತ್ತಿವೆ. ಮುಂದೆ ದೊಡ್ಡ ಹೆಜ್ಜೆಯಿಡುವ ಯೋಚನೆಯಿದೆ ಎಂದರು.

    ವಿವಾದದ ನಡುವೆ ಮತ್ತೆರಡು ಫೋಟೊ ಹಂಚಿಕೊಂಡ ಪವಿತ್ರಾಗೌಡ! ನಟ ದರ್ಶನ್​ ಫ್ಯಾನ್ಸ್​ ಹೇಳಿದ್ದೇನು?  

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts