

ನವದೆಹಲಿ: ಚಿತ್ರರಂಗದಿಂದ ಬಹುತೇಕ ದೂರ ಉಳಿದಿರುವ 'ಗಾಳಿಪಟ' ಸಿನಿಮಾ ನಟಿ ಡೈಸಿ ಬೋಪಣ್ಣ, ಇದೀಗ ಥಾಯ್ಲೆಂಡ್ ಪ್ರವಾಸದಲ್ಲಿದ್ದಾರೆ. ಸದ್ಯ ಎಂಜಾಯ್ ಮೂಡ್ನಲ್ಲಿರುವ ನಟಿ, ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ಶೇರ್ ಮಾಡಿದ್ದಾರೆ.
ಇನ್ಸ್ಟಾಗ್ರಾಂನಲ್ಲಿ ಸದಾ ಆ್ಯಕ್ಟೀವ್ ಆಗಿರುವ ನಟಿ ಡೈಸಿ ಬೋಪಣ್ಣ, ಆಗಾಗ್ಗೇ ರೀಲ್ಸ್, ಡ್ಯಾನ್ಸ್, ವರ್ಕೌಟ್ ಹಾಗೂ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಥಾಯ್ಲೆಂಡ್ ಪ್ರವಾಸದಲ್ಲಿ ಹಸಿರು ಬಣ್ಣದ ಬಿಕಿನಿ ಧರಿಸಿರುವ ಗ್ಲಾಮರಸ್ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಈ ಫೋಟೋಗಳು ವೈರಲ್ ಆಗುತ್ತಿದ್ದು, ಫ್ಯಾನ್ಸ್ ಕಮೆಂಟ್ ಮಾಡುತ್ತಿದ್ದಾರೆ.
ಕವಿತಾ ಲಂಕೇಶ್‍ರ 'ಬಿಂಬ' ಸಿನಿಮಾ ಮೂಲಕ ಚಿತ್ರರಂಗ ಪ್ರವೇಶಿಸಿದ ಕೊಡಗಿನ ಕುವರಿ ಡೈಸಿ ಬೋಪಣ್ಣ, ರಾಮ ಶಾಮ ಭಾಮ, ಕ್ರೇಜಿ ಲೋಕ, ಐಶ್ವರ್ಯ, ತವರಿನ ಸಿರಿ, ಗಾಳಿಪಟ, ಜಾಕ್‌ಪಾಟ್, ಸತ್ಯವಾನ್ ಸಾವಿತ್ರಿ ಸೇರಿದಂತೆ ಬಾಲಿವುಡ್ ಸಿನಿಮಾದಲ್ಲೂ ನಟಿಸಿದ್ದಾರೆ. ಅಲ್ಲದೆ 150ಕ್ಕೂ ಅಧಿಕ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ. ಯೋಗರಾಜ್ ಭಟ್ ನಿರ್ದೇಶನ ಗಾಳಿಪಟ ಸಿನಿಮಾ ಡೈಸಿ ಬೋಪಣ್ಣಾಗೆ ಸಾಕಷ್ಟು ಹೆಸರು ತಂದುಕೊಟ್ಟಿತು.
2012ರಲ್ಲಿ ತೆರೆಕಂಡಿದ್ದ 'ಕ್ರೇಜಿ ಲೋಕ' ಸಿನಿಮಾದ ಬಳಿಕ ಡೈಸಿ ಬೋಪಣ್ಣ ಚಿತ್ರರಂಗದಿಂದ ದೂರವಾಗಿದ್ದಾರೆ. ಬಾಲಿವುಡ್ ಸಿನಿಮಾ ರಂಗ ಪ್ರವೇಶಿಸಿದ ನಂತರ, ಅಮಿತ್ ಎಂಬುವರೊಂದಿಗೆ ಮದುವೆಯಾದರು. ಇದೀಗ ಸಿನಿಮಾ ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ.
ಥಾಯ್ಲೆಂಡ್ನ ಕಾಡಿನ ಮಧ್ಯದ ನೀರಿನ ಹರಿವಿನಲ್ಲಿ ಎಂಜಾಯ್ ಮಾಡುತ್ತಾ ಡೈಸಿ ಬೋಪಣ್ಣಾ ರಿಲ್ಯಾಕ್ಸ್ ಮೂಡಿಗೆ ಜಾರಿದ್ದಾರೆ. 'ಕಾಡಿನ ಮಧ್ಯದಲ್ಲಿ ಎಲ್ಲೋ ಇದ್ದೀನಿ. ವಿಶ್ವದ ಪ್ರತಿಯೊಂದು ಸ್ಥಳವೂ ಹೀಗೆ ಇರಲಿ ಎಂದು ಆಶಿಸುತ್ತೇನೆ' ಎಂದು ಇನ್ಸ್ಟಾಗ್ರಾಂನಲ್ಲಿ ನಟಿ ಬರೆದುಕೊಂಡಿದ್ದಾರೆ.