48ರ ಪ್ರಾಯದಲ್ಲಿ ಬಿಕಿನಿ ಧರಿಸಿ ಪೋಸ್ ನೀಡಿದ ಶಿಲ್ಪಾ ಶೆಟ್ಟಿ; ನಿಮ್ಮ ವಯಸ್ಸಿನ ಗುಟ್ಟೇನು ಎಂದ ಫ್ಯಾನ್ಸ್!

SHILPA SHETTY
Published on

ನವದೆಹಲಿ: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಸಿನಿಮಾ ಹೊರತಾಗಿ ಫ್ಯಾಷನ್, ಯೋಗ, ಫಿಟ್ನೆಸ್ ಕಾರಣಕ್ಕೆ ಆಗಾಗ್ಗೇ ಸುದ್ದಿಯಾಗುತ್ತಿರುತ್ತಾರೆ. ಫ್ಯಾಷನ್ ಪ್ರಿಯೆ ಆಗಿರುವ ನಟಿ ತಮ್ಮ ವಿಭಿನ್ನ ಶೈಲಿಯ ಉಡುಪಿನಿಂದ ಬಹುತೇಕ ಸಂದರ್ಭದಲ್ಲಿ ಗಮನ ಸೆಳೆಯುತ್ತಾರೆ. ಮುಖ್ಯವಾಗಿ ಫಿಟ್ನೆಸ್ ಪ್ರಿಯರ ನೆಚ್ಚಿನ ಐಕಾನ್ ಆಗಿ ಗುರುತಿಸಿಕೊಂಡಿದ್ದಾರೆ.

ತಮ್ಮ 48ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಲು ನಟಿ ಶಿಲ್ಪಾ ಶೆಟ್ಟಿ ಲಂಡನ್​ಗೆ ತೆರಳಿದ್ದರು. ವಿದೇಶದಲ್ಲಿಯೇ ಹುಟ್ಟುಹಬ್ಬ ಆಚರಿಸಿಕೊಂಡಿರುವ ನಟಿಗೆ ಚಿತ್ರರಂಗದವರು, ಅಭಿಮಾನಿಗಳು ಶುಭಾಶಯ ತಿಳಿಸಿದ್ದರು. ವಯಸ್ಸು 45 ದಾಟಿದ್ದರೂ ಶಿಲ್ಪಾ ಶೆಟ್ಟಿ ಮಾತ್ರ ಯೋಗ, ವ್ಯಾಯಾಮ ಮೂಲಕ ಉತ್ತಮ ಆರೋಗ್ಯ ಮತ್ತು ಸೌಂದರ್ಯ ಕಾಪಾಡಿಕೊಂಡಿದ್ದಾರೆ.

ಲಂಡನ್​ನಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡಿರುವ ಶಿಲ್ಪಾ ಶೆಟ್ಟಿ, ಅಲ್ಲಿಂದ ಸಾಟರ್ನಿಯಾದ ನೈಸರ್ಗಿಕ ಉಷ್ಣ ಬುಗ್ಗೆ(ಬಿಸಿ ನೀರಿನ ಕೊಳ) ಇರುವಲ್ಲಿಗೆ ತೆರಳಿದ್ದಾರೆ. ನೈಸರ್ಗಿಕವಾಗಿ ಭೂಮಿಯಿಂದ ಬರುವ ಬಿಸಿ ನೀರಿನಲ್ಲಿ ಮಿಂದೆದ್ದಿದ್ದಾರೆ. ಇದೀಗ ಅಲ್ಲಿನ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. 48ನೇ ವಯಸ್ಸಿನಲ್ಲಿ ಬಿಕಿನಿ ಧರಿಸಿ ಶಿಲ್ಪಾ ಶೆಟ್ಟಿ ಫೋಸ್ ನೀಡಿದ್ದಾರೆ. ಫೋಟೋ ನೋಡಿದ ಅಭಿಮಾನಿಗಳು ನೆಚ್ಚಿನ ನಟಿಯ ವಯಸ್ಸಿನ ಗುಟ್ಟೇನು ಎಂದು ಪ್ರಶ್ನಿಸುತ್ತಿದ್ದಾರೆ.

ಬಿಕಿನಿ ಧರಿಸಿ ಫೋಟೋ ಹಂಚಿಕೊಂಡಿರುವ ಶಿಲ್ಪಾ ಶೆಟ್ಟಿ, ಸಾಟರ್ನಿಯಾದ ನೈಸರ್ಗಿಕ ಉಷ್ಣ ಸ್ನಾನಗೃಹಗಳಿಗೆ ಜೀವಿತಾವಧಿಯಲ್ಲಿ ಒಮ್ಮೆಯಾದರೂ ಭೇಟಿ ನೀಡಬೇಕು. ಈ ಸ್ಥಳವು ದೈವಿಕವಾಗಿದ್ದು, ಇಲ್ಲಿನ ನೀರು ಪವಿತ್ರವಾಗಿದೆ ಎಂಬುದು ಜನರ ನಂಬಿಕೆ. 3000 ವರ್ಷಗಳಿಂದ ಬಿಸಿನೀರಿನ ಬುಗ್ಗೆಯು ಭೂಮಿಯ ಮಧ್ಯಭಾಗದಿಂದ ಉಕ್ಕುತ್ತಿದ್ದು, ಅಗಾಧವಾದ ಆರೋಗ್ಯ ಪ್ರಯೋಜನಗಳನ್ನು ಈ ನೀರಿನಿಂದ ಪಡೆಯಬಹುದು. ಇದನ್ನು ಅನುಭವಿಸಿ ಹೊಸ ಚೈತನ್ಯ ಪಡೆದುಕೊಳ್ಳಿ ಎಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net