'ಡೆವಿಲ್' ಸಿನಿಮಾ ಅಧಿಕೃತ ಮಾಹಿತಿ ಕೊಟ್ಟ ನಟ ದರ್ಶನ್​!

darshan
Published on

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್' ದರ್ಶನ್ ಅಭಿನಯದ 'ಕಾಟೇರ' ಸಿನಿಮಾ ಕಳೆದ ಡಿಸೆಂಬರ್ 29ರಂದು ತೆರೆಕಂಡು, ಬಾಕ್ಸ್ ಆಫೀಸ್‌ನಲ್ಲಿ ಭಾರೀ ಸದ್ದು ಮಾಡಿತ್ತು. ಕಾಟೇರ ಸಿನಿಮಾದ ಸಕ್ಸಸ್‌ನಿಂದ 'ಡಿ ಬಾಸ್' ಅಭಿಮಾನಿಗಳು ಕೂಡ ಸಖತ್ ಖುಷಿಯಾಗಿದ್ದಾರೆ. ಸದ್ಯ ಅಭಿಮಾನಿಗಳ ಗಮನವೆಲ್ಲಾ 'ಡೆವಿಲ್' ಸಿನಿಮಾದ ಮೇಲಿದೆ. ದರ್ಶನ್ ಮುಂದಿನ ಸಿನಿಮಾಗೆ 'ಡೆವಿಲ್' ದಿ ಹಿರೋ ಅಂತ ಹೆಸರಿಡಲಾಗಿದೆ. ಈ ಸಿನಿಮಾ ಕುರಿತು ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ.

ಈ ಮಾತು ಸತ್ಯವೇ ನೋಡಿ. ಯಾವುದೇ ಗಾಸಿಪ್ ಇದು ಅಲ್ವೇ ಅಲ್ಲ. ಸೋಷಿಯಲ್ ಮೀಡಿಯಾದಲ್ಲಿ ಹರಿದಾಡ್ತಿರೋ ಸುದ್ದಿನೂ ಇದಲ್ಲ. ಸ್ವಃತ ದರ್ಶನ್​ ಅವರೇ ಈ ಒಂದು ಸುದ್ದಿಯನ್ನ ಅಧಿಕೃತವಾಗಿಯೇ ಕೊಟ್ಟಿದ್ದಾರೆ.

ಫೆಬ್ರವರಿ 16 ರಂದು ದರ್ಶನ್‌ ಹುಟ್ಟುಹಬ್ಬ. ಆ ಹಿಂದಿನ ದಿನ ಅಂದರೆ ಫೆ.15 ರಂದು ರಾತ್ರಿ "ಡೆವಿಲ್‌- ದಿ ಹೀರೋ" ಸಿನಿಮಾದ ಫಸ್ಟ್‌ ಲುಕ್‌ ಟೀಸರ್‌ ಬಿಡುಗಡೆಯಾಗಲಿದೆ.

ದರ್ಶನ್​ ತೂಗುದೀಪ ಎಕ್ಸ್​ ಖಾತೆಯಿಂದ ಮಾಹಿತಿ ನೀಡಿದ್ದಾರೆ. ನಮ್ಮ ಮುಂದಿನ ಚಿತ್ರ #DevilTheHero ಫಸ್ಟ್ ಲುಕ್ ಟೀಸರ್ ಇದೇ ಫೆಬ್ರವರಿ 15 ರಾತ್ರಿ 11:59ಕ್ಕೆ ಬಿಡುಗಡೆಯಾಗಲಿದೆ. ನಿಮ್ಮ ಪ್ರೀತಿ-ಪ್ರೋತ್ಸಾಹಕ್ಕೆ ಈ ದಾಸ ಸದಾ ಆಭಾರಿ. ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.
ಸರಿಗಮ ಕನ್ನಡ ಯೂಟ್ಯೂಬ್ ಚಾನಲ್​ನಲ್ಲಿ ರಿಲೀಸ್ ಆಗುತ್ತಿದೆ. ಈ ಒಂದು ಲುಕ್ ಅಲ್ಲಿ ದರ್ಶನ್ ಹೇಗೆ ಕಾಣಿಸುತ್ತಾರೆ ಅನ್ನೋ ಕುತೂಹಲ ಈಗಲೇ ಮೂಡಿದೆ.

ಕಾಟೇರ ಬಳಿಕ ಮಾಡುತ್ತಿರೋ ಈ ಚಿತ್ರದಲ್ಲಿ ಏನೆಲ್ಲ ಇರುತ್ತದೆ. ದರ್ಶನ್ ಇಲ್ಲಿ ಹೀರೋನಾ ಇಲ್ಲ ವಿಲನ್ನಾ ಅನ್ನೋ ಪ್ರಶ್ನೆನೂ ಹುಟ್ಟಿಕೊಂಡಿದೆ ಅಂತಲೇ ಹೇಳಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net