More

  ಟ್ರಾಫಿಕ್ ಪೊಲೀಸ್ ಕೈ ಕಚ್ಚಿದ ದ್ವಿಚಕ್ರ ವಾಹನ ಸವಾರ! ವಿಡಿಯೋ ವೈರಲ್​

  ಬೆಂಗಳೂರು: ಬೆಂಗಳೂರಿನ ವಿಲ್ಸನ್ ಗಾರ್ಡನ್ ಬಳಿ ಹೆಲ್ಮೆಟ್ ಹಾಕದೆ ಬೈಕ್‌ ಚಲಾಯಿಸುತ್ತಿದ್ದ ವ್ಯಕ್ತಿಯನ್ನು ತಡೆದು ನಿಲ್ಲಿಸಿದ ಟ್ರಾಫಿಕ್ ಪೊಲೀಸರು ಬೈಕ್‌ನಿಂದ ಕೀ ಕಸಿದುಕೊಂಡಿದ್ದಾರೆ. ಈ ವೇಳೆ ಪೊಲೀಸರ ಕೈಯನ್ನೇ ವಾಹನ ಸವಾರ ಕಚ್ಚಿದ ಘಟನೆ ನಡೆದಿದೆ. ಈ ವಿಡಿಯೋ ವೈರಲ್​ ಆಗಿದೆ.

  ಇದನ್ನೂ ಓದಿ:ಎಎಪಿ: ಮನೀಶ್ ಸಿಸೋಡಿಯಾಗೆ 3 ದಿನಗಳ ಮಧ್ಯಂತರ ಜಾಮೀನು!

  ಈ ಘಟನೆ ಬೆಂಗಳೂರು ವಿಲ್ಸನ್ ಗಾರ್ಡನ್ 10 ನೇ ಕ್ರಾಸ್ ನಲ್ಲಿ ನಡೆದಿದೆ. ವಿಲ್ಸನ ಗಾರ್ಡನ್ ವ್ಯಾಪ್ತಿಯಲ್ಲಿ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ವ್ಯಕ್ತಿಯನ್ನು ತಡೆದ ಸಂಚಾರಿ ಪೊಲೀಸರು ವಾಹನದ ಕೀ ಕಿತ್ತುಕೊಂಡಿದ್ದಾರೆ. ಸವಾರ ನಾನು ತುರ್ತು ಕೆಲಸವಿದ್ದ ಕಾರಣ ನಾನು ಹೋಗಬೇಕಿದೆ ಕೀ ಕೊಡಿ ಎಂದು ಕೇಳಿದ್ದಾನೆ. ಇದನ್ನು ಪೊಲೀಸರು ನಿರಾಕರಿಸಿದ್ದಾರೆ. ಇದರಿಂದ ಆಕ್ರೋಶಗೊಂಡ ಸವಾರ ಪೊಲೀಸರ ಕೈ ಕಚ್ಚಿದ್ದಾನೆ.

  ಇದನ್ನು ಮತ್ತೊಬ್ಬ ಸಂಚಾರಿ ಪೊಲೀಸರು ವಿಡಿಯೋ ಮಾಡಿದ್ದಾರೆ. ನೀನು ಕೈ ಕಚ್ಚಿದ ವಿಡಿಯೋ ಆಗುತ್ತಿದೆ, ದೂರು ದಾಖಲಾದರೆ ವಿಡಿಯೋ ವೈರಲ್ ಆಗುತ್ತದೆ ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಆಯ್ತು, ಅದೇನ್ ವೈರಲ್ ಮಾಡ್ತೀರೋ ಮಾಡ್ಕೊಳಿ, ನನ್ನ ದ್ವಿಚಕ್ರ ವಾಹನದ ಕೀ ಕೊಡಿ ಎಂದು ಪೊಲೀಸರ ಬಳಿ ಕೇಳಿಕೊಂಡಿದ್ದಾನೆ.

  ದ್ವಿಚಕ್ರ ವಾಹನ ಸವಾರ ವಿಲ್ಸನ್ ಗಾರ್ಡನ್ ಸಂಚಾರಿ ಪೊಲೀಸರ ಕೈಗೆ ಕಚ್ಚಿದ್ದಾನೆ. ಕೂಡಲೇ ಹೊಯ್ಸಳ ಸಿಬ್ಬಂದಿ ಕರೆಸಿ, ಬೈಕ್ ಸವಾರನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಕರ್ತವ್ಯನಿರತ ಸಂಚಾರಿ ಪೊಲೀಸರ ಕೈ ಕಚ್ಚಿದ್ದರಿಂದ ವಾಹನ ಸವಾರನ ಮೇಲೆ ಸಂಚಾರಿ ಪೊಲೀಸರು ದೂರು ದಾಖಲಿಸಿದ್ದಾರೆ. ಪೊಲೀಸರ ದೂರಿನ ಹಿನ್ನೆಲೆಯಲ್ಲಿ ವಿಡಿಯೋ ಸಾಕ್ಷಿಯ ಆಧಾರದ ಮೇಲೆ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

  ಮಾರಿಷಸ್‌, ಶ್ರೀಲಂಕಾನಲ್ಲಿಯೂ UPI ಸೇವೆ: ಪ್ರಧಾನಿ ಮೋದಿ ಚಾಲನೆ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts