

ಬೆಳಗಾವಿ: ಕರ್ನಾಟಕದಲ್ಲಿ ಕಾಂಗ್ರೆಸ್ ಜನತೆಗೆ ಸುಳ್ಳು ಆಶ್ವಾಸನೆ ನೀಡುವ ಮೂಲಕ ಅಧಿಕಾರಕ್ಕೆ ಬಂದಿದೆ ಎಂದು ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಸಂಜಯ್ ಪಾಟೀಲ್ ಆರೋಪಿಸಿದ್ದಾರೆ.
ಈ ಕುರಿತು ಮಾತನಾಡಿದ ಸಂಜಯ್ ಪಾಟೀಲ್ ಕಾಂಗ್ರೆಸ್ ಜನತೆಗೆ ಸುಳ್ಳು ಹೇಳಿ ಮೋಸ ಮಾಡುವ ಮೂಲಕ ಅಧಿಕಾರಕ್ಕೆ ಬಂದಿದೆ ಎಂದು ಹರಿಹಾಯ್ದಿದ್ಧಾರೆ.
ಜನರಿಗೆ ಮೋಸ ಮಾಡುವ ಪರಂಪರೆ ಹೊಂದಿರುವ ಕಾಂಗ್ರೆಸ್ ಚುನಾವಣೆಗೂ ಮುನ್ನ ಅಧಿಕಾರಕ್ಕೆ ಬಂದಲ್ಲಿ ಐದು ಗ್ಯಾರಂಟಿಗಳನ್ನು ಜಾರಿಗೆ ತರಲಾಗುವುದು ಎಂದು ಹೇಳಿತ್ತು. ಮೊದಲಿಗೆ 200 ಯೂನಿಟ್ ಉಚಿತ ವಿದ್ಯುತ್ ಕೊಡ್ತೀವಿ ಎಂದು ಘೋಷಿಸಿದ್ದರು.
ಗೃಹಜ್ಯೋತಿ ಯೋಜನೆ ಮೂಲಕ 200 ಯೂನಿಟ್ ಉಚಿತ ವಿದ್ಯುತ್ ಕೊಡುವ ನೆಪದಲ್ಲಿ ಕರೆಂಟ್ ಬಿಲ್ ಏರಿಸಿ ಜನತೆಗೆ ಶಾಕ್ ಕೊಟ್ಟಿದ್ದಾರೆ. ಕಾಂಗ್ರೆಸ್ನವರು ಕಳೆದ 70 ವರ್ಷಗಳಿಂದ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತ ಬಂದಿದ್ದಾರೆ. ಮುಂದಿನ ದಿನಗಳಲ್ಲಿ ಮತದಾರರು ಇದಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹರಿಹಾಯ್ದಿದ್ಧಾರೆ.
ಸಿಎಂ ಸಿದ್ದರಾಮಯ್ಯ 13-14 ಬಾರಿ ಬಜೆಟ್ ಮಂಡಿಸಿದ್ದಾರೆ. ಮುಖ್ಯಮಂತ್ರಿಯಾಗಿ ಇದು ಅವರ ಕೊನೆಯ ಅವಧಿ ಎಂದು ಗೊತ್ತಿದೆ. ಮುಂದಕ್ಕೆ ನಾನು ಸಿಎಂ ಆಗುವುದಿಲ್ಲ ಎಂದು ಅರಿತಿರುವ ಅವರು ನಾಡು ಹಾಳಾದರೇನು ಬಿಟ್ಟರೇನು ಎಂದು ಈ ರೀತಿ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಜನತೆಗೆ ಸುಳ್ಳು ಹೇಳಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಕರ್ನಾಟಕದ ಹೆಸರನ್ನು ಹಾಳು ಮಾಡಲು ಹೊರಟಿದೆ. ಜನತೆ ಬುದ್ದಿವಂತರಿದ್ದಾರೆ ಒಮ್ಮ ಮೋಸ ಹೋದವರು ಮತ್ತೊಮ್ಮೆ ಈಗಾಗದಂತೆ ನೋಡಿಕೊಳ್ಳುತ್ತಾರೆ ಮುಂದಿನ ದಿನಗಳಲ್ಲಿ ನಿಮಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದ್ದಾರೆ.
ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂ. ಹಾಕುವ ವಿಚಾರವಾಗಿ ಪ್ರತಿಕ್ರಿಯಿಸಿ ಮೊದಲಿಗೆ ಕಾಂಗ್ರೆಸ್ನವರಿಗೆ ಮೋದಿ ಅವರ ಭಾಷಣವನ್ನು ಸರಿಯಾಗಿ ಕೇಳುವುದಕ್ಕೆ ಹೇಳಿ ಅವರಿಗೆ ಬಹುಶಃ ಹಿಂದಿ ಬರುವುದಿಲ್ಲ ಎಂದು ಕಾಣುತ್ತದೆ. 15 ಲಕ್ಷ ರೂ. ಕೊಡ್ತೀನಿ ಎಂದು ಎಲ್ಲೂ ಕೂಡ ಹೇಳಿಲ್ಲ.
ಕಾಂಗ್ರೆಸ್ನವರಿಗೆ ಹಿಂದಿ ಬರುವುದಿಲ್ಲ ಎಂದರೆ ನಾನು ಅವರಿಗೆ ಚೆನ್ನಾಗಿಯೇ ಅರ್ಥ ಮಾಡಿಸುತ್ತೇನೆ. ನಂದು ಕನ್ನಡ ಡಮ್ಮಿ ಇರಬಹುದು ಆದರೆ, ಹಿಂದಿಯಲ್ಲಿ ಚೆನ್ನಾಗಿ ಮಾತನಾಡಿ ಅವರಿಗೆ ಅರ್ಥ ಮಾಡಿಸುತ್ತೇನೆ ಎಂದು ಬೆಳಗಾವಿಇಯಲ್ಲಿ ಮಾಜಿ ಶಾಸಕ ಸಂಜಯ್ ಪಾಟೀಲ್ ಹೇಳಿದ್ದಾರೆ.