ಒಡಿಶಾ ರೈಲು ದುರಂತ | ನೆರವಿನ ಹಸ್ತ ಚಾಚಿದ ರಿಲಯನ್ಸ್ ಫೌಂಡೇಶನ್

Foundation
Published on

ನವದೆಹಲಿ: ಅನೇಕ ವರ್ಷಗಳಿಂದ ವಿವಿಧ ದೇಶದ ಯಾವುದೇ ಭಾಗದಲ್ಲಿ ವಿಪತ್ತು ಸಂಭವಿಸಿದ ಸಂದರ್ಭದಲ್ಲಿ ಸಹಾಯದ ನೆರವು ನೀಡುತ್ತಾ ಬಂದಿರುವ ರಿಲಯನ್ಸ್ ಫೌಂಡೇಶನ್, ಇದೀಗ ಒಡಿಶಾದಲ್ಲಿ ನಡೆದ ರೈಲು ದುರಂತ ರಕ್ಷಣಾ ಕಾರ್ಯಾಚರಣೆ ಸಂದರ್ಭದಲ್ಲಿ ನೆರವು ನೀಡಿದೆ.

ಒಡಿಶಾದ ಬಾಲಸೋರ್‌ನಲ್ಲಿ ಸಂಭವಿಸಿದ ಭೀಕರ ರೈಲು ಅಪಘಾತದಲ್ಲಿ ಸಂತ್ರಸ್ತರಾದವರಿಗೆ ರಿಲಯನ್ಸ್ ಫೌಂಡೇಶನ್ ಸಹಾಯಹಸ್ತ ಚಾಚಿದೆ. ತೆರವು ಕಾರ್ಯಾಚರಣೆ ಸಂದರ್ಭದಲ್ಲಿ ರಕ್ಷಣಾ ಕಾರ್ಯಕ್ಕೆ ಒಗ್ಗಟ್ಟಿನಿಂದ ಸಹಾಯ ಮಾಡಿದ್ದು, ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂದು ರಿಲಯನ್ಸ್ ಫೌಂಡೇಶನ್ ಪ್ರಾರ್ಥಿಸಿದೆ.

ಸಂಕಷ್ಟದ ಸಮಯದಲ್ಲಿ ರಿಲಯನ್ಸ್ ಫೌಂಡೇಶನ್​​ನ ಸದಸ್ಯರು ದಣಿವರಿಯದೆ ಶ್ರಮಿಸಿದ್ದಾರೆ. ಜತೆಗೆ ಅಪಘಾತ ಸಂಭವಿಸಿದ ಸ್ಥಳದಲ್ಲಿ ಸಮುದಾಯ ಅಡುಗೆ ಮನೆ ತೆರೆಯುವ ಮೂಲಕ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿರುವ ಅಧಿಕಾರಿಗಳಿಗೆ ಆಹಾರ ಒದಗಿಸುವುದರೊಂದಿಗೆ ಅಗತ್ಯ ವಸ್ತುಗಳ ನೆರವು ನೀಡಿದೆ.

ರೈಲು ದುರಂತದಲ್ಲಿ ಗಾಯಗೊಂಡವರು ಶೀಘ್ರ ಗುಣಮುಖರಾಗುತ್ತಾರೆ. ಗಾಯಾಳುಗಳ ಪರವಾಗಿ ನಾವಿದ್ದೇವೆ. ಸಂತ್ರಸ್ತರನ್ನು ಗುಣಪಡಿಸಿ, ಅವರು ಮತ್ತೆ ಬದುಕು ಕಂಡುಕೊಳ್ಳಲು ಬೇಕಾದ ಸಹಾಯ ನೀಡಲು ಬದ್ಧರಾಗಿದ್ದೇವೆ ಎಂದು ರಿಲಯನ್ಸ್ ಫೌಂಡೇಶನ್ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net