

ಮುಂಬೈ: ಟಾಲಿವುಡ್ ಮತ್ತು ಕಾಲಿವುಡ್ ಚಿತ್ರರಂಗದ ನಟಿ, ತಮಿಳು ಬಿಗ್ಬಾಸ್ ರಿಯಾಲಿಟಿ ಶೋ ಸ್ಪರ್ಧಿ ಸಂಯುಕ್ತಾ ಶಾನ್ ಇದೀಗ ತಮ್ಮ ದಾಂಪತ್ಯ ಜೀವನದಲ್ಲಿ ನಡೆದ ಕಹಿ ಘಟನೆಗಳ ಬಗ್ಗೆ ಮನಬಿಚ್ಚಿ ಮಾತನಾಡಿದ್ದು, ಹಲವು ಸಂಗತಿಗಳನ್ನು ಬಹಿರಂಗಪಡಿಸಿದ್ದಾರೆ.
ಇದನ್ನೂ ಓದಿ: ದೇಶದ ಗಡಿ ಕಾಯುವುದು ಹೆಮ್ಮೆಯ ವಿಷಯ
ಬಿಗ್ ಬಾಸ್ ತಮಿಳಿನ ರಿಯಾಲಿಟಿ ಶೋನ ನಾಲ್ಕನೇ ಸೀಸನ್‌ನಲ್ಲಿ ಕಾಣಿಸಿಕೊಂಡ ನಟಿ ಸಂಯುಕ್ತಾ, ದಳಪತಿ ವಿಜಯ್ ನಟನೆಯ 'ವರಿಸು', 'ತುಘಲಕ್', 'ದರ್ಬಾರ್ ಮೊದಲಾದ ಚಿತ್ರಗಳಲ್ಲಿ ಅಭಿನಯಿಸುವ ಮುಖೇನ ಸಾಕಷ್ಟು ಜನಪ್ರಿಯತೆ ಗಳಿಸಿದ್ದಾರೆ.
ಇತ್ತೀಚೆಗೆ ನಡೆದ ಸಂದರ್ಶನದಲ್ಲಿ ತಮ್ಮ ದಾಂಪತ್ಯ ಜೀವನದಲ್ಲಿ ನಡೆದ ಕಹಿ ಘಟನೆ ಬಗ್ಗೆ ಮಾತನಾಡಿದ ನಟಿ, "ನನ್ನ ಪತಿ, ದುಬೈನಲ್ಲಿ ಕೆಲಸ ಮಾಡುವ ಉದ್ಯಮಿ, ನಾಲ್ಕು ವರ್ಷಗಳಿಂದ ಬೇರೊಬ್ಬ ಮಹಿಳೆಯೊಂದಿಗೆ ವಾಸಿಸುತ್ತಿದ್ದಾರೆ. ಈ ಸಂಗತಿ ನನಗೆ ಲಾಕ್‌ಡೌನ್ ವೇಳೆ ಗೊತ್ತಾಯಿತು" ಎಂದು ಹೇಳಿದರು.
"ನನ್ನ ಪತಿ ನಾಲ್ಕು ವರ್ಷಗಳಿಂದ ದುಬೈನಲ್ಲಿ ಬೇರೊಬ್ಬರೊಂದಿಗೆ ವಾಸಿಸುತ್ತಿದ್ದಾರೆಂದು ಕೋವಿಡ್ ಸಮಯದಲ್ಲಿ ನಾನು ತಿಳಿದುಕೊಂಡೆ. ತುಂಬ ನೋವಿನಲ್ಲಿದ್ದ ನನಗೆ ಏನು ಮಾಡಬೇಕೆಂದು ತಿಳಿಯಲಿಲ್ಲ. ಆಗ ಲಾಕ್‌ಡೌನ್‌ನಿಂದಾಗಿ ನಾನು ಎಲ್ಲಿಯೂ ಪ್ರಯಾಣಿಸಲು ಸಾಧ್ಯವಾಗಲಿಲ್ಲ. ಈ ಸಮಯದಲ್ಲಿ ಭಾವನಾ ಬಾಲಕೃಷ್ಣನ್ ಅವರು ನಮ್ಮ ಅಪಾರ್ಟ್‌ಮೆಂಟ್‌ನಲ್ಲಿದ್ದರು. ಕಾರಣ ಅವರ ಅತ್ತೆ ಆಗಾಗ್ಗೆ ಭೇಟಿ ನೀಡುತ್ತಿದ್ದರು" ಎಂದು ಹೇಳಿದರು.
"ನನ್ನ ಮತ್ತು ಭಾವನಾ ನಡುವೆ ಆತ್ಮೀಯ ಸಂಬಂಧ ಇರಲಿಲ್ಲ. ಕೇವಲ ಹಾಯ್, ಬೈ ಸ್ನೇಹವಾಗಿತ್ತು ಅಷ್ಟೇ. ಒಂದು ದಿನ ಅವರು ನನ್ನ ಗಂಡ ಮತ್ತು ಕುಟುಂಬದ ಬಗ್ಗೆ ಕೇಳಿದಾಗ, ದುಃಖ ಆವರಿಸಿ ಎಲ್ಲವನ್ನೂ ಭಾವನಾ ಮುಂದೆ ಹೇಳಿಕೊಂಡೆ. ನಾವಿಬ್ಬರು ಅಷ್ಟು ಹತ್ತಿರವಾಗದಿದ್ದರೂ ಕೂಡ ಅವರು ನನಗೆ ಸಾಂತ್ವನ ಹೇಳಿ, ಧೈರ್ಯ ತುಂಬಿದರು" ಎಂದು ನಟಿ ಹೇಳಿದರು.
"ನನ್ನ 8ನೇ ವಿವಾಹ ವಾರ್ಷಿಕೋತ್ಸವ ದಿನದಂದು ತೀವ್ರ ನೋವು ಆವರಿಸಿಕೊಂಡಿತ್ತು. ಈ ಸಮಯದಲ್ಲಿ ಭಾವನಾ ಅವರ ಸಹಾಯ ಪಡೆದೆ. ಆಗ ಅವರು ನನ್ನ ಮುಂದಿನ ಕೆಲಸಗಳತ್ತ ಸಾಗುವ ಬಗ್ಗೆ ತಿಳಿಸಿಕೊಟ್ಟರು. ವಿಶೇಷವಾಗಿ ನನಗೆ ಆರೈಕೆ ಮಾಡಲು ಮಗುವಿತ್ತು. ಬಿಗ್ಬಾಸ್ನಲ್ಲಿ ಸ್ಪರ್ಧಿಸಲು ಹೇಳಿ, ನನ್ನ ಹೆಸರನ್ನು ಆ ತಂಡಕ್ಕೆ ಸೂಚಿಸಿದರು. ಇಂದು ಸಂಯುಕ್ತಾ ಯಾರೆಂದು ಜಗತ್ತಿಗೆ ತಿಳಿದಿದ್ದರೆ, ಅದು ಭಾವನಾ ಅವರಿಂದಾಗಿ" ಎಂದು ನಟಿ ಹೇಳಿಕೊಂಡಿದ್ದಾರೆ.