VIDEO | ಹಳಿಯಲ್ಲಿ ಕಲ್ಲುಗಳು ಪತ್ತೆ; ತುರ್ತು ನಿಲುಗಡೆಯಾದ ವಂದೇ ಭಾರತ್ ರೈಲು

Untitled design - 2023-10-02T163605.459
Published on

ರಾಜಸ್ಥಾನ: ಸೋಮವಾರ ಉದಯಪುರ-ಜೈಪುರ ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಲೊಕೊಮೊಟಿವ್ ಪೈಲಟ್‌ಗಳು ಹಳಿಗಳ ಮೇಲೆ ಕಲ್ಲುಗಳನ್ನು ಕಂಡ ಕೂಡಲೇ ತುರ್ತು ನಿಲುಗಡೆ ಮಾಡಿದ್ದು, ಭಾರೀ ಅನಾಹುತವನ್ನು ತಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಎಂದಿನಂತೆ ಇದೇ ಮಾರ್ಗದಲ್ಲಿ ಚಲಿಸುವ ವಂದೇ ಭಾರತ್​ ಎಕ್ಸ್​ಪ್ರೆಸ್​ ರೈಲಿನ ಹಳಿಯ ಮೇಲೆ ಕಲ್ಲುಗಳು ಮತ್ತು ರಾಡ್​ ಪೀಸ್​ ಇರುವುದನ್ನು ದೂರದಿಂದಲೇ ಗಮನಿಸಿದ ಲೊಕೊ ಪೈಲಟ್‌ಗಳು, ಕೂಡಲೇ ತುರ್ತು ನಿಲುಗಡೆಯನ್ನು ಮಾಡುವ ಮುಖೇನ ಎದುರಾಗುತ್ತಿದ್ದ ಅಪಘಾತವನ್ನು ತಪ್ಪಿಸಿದ್ದಾರೆ.

ಘಟನೆಯ ವಿಡಿಯೋ ಇದೀಗ ಸೋಷಿಯಲ್​ ಮೀಡಿಯಾದಲ್ಲಿ ವ್ಯಾಪಕವಾಗಿ ಹರಿದಾಡಿದ್ದು, ಗಂಗಾರಾರ್-ಸೋನಿಯಾನಾ ವಿಭಾಗದಲ್ಲಿ ಟ್ರ್ಯಾಕ್‌ನ ಜೋಗಲ್ ಪ್ಲೇಟ್‌ ಮೇಲೆ ಕಲ್ಲುಗಳು ಮತ್ತು ರಾಡ್‌ಗಳು ಇರುವುದು ಕಂಡುಬಂದಿದೆ. ಘಟನೆ ಬೆಳಗ್ಗೆ 9.55ರ ಸುಮಾರಿಗೆ ನಡೆದಿದ್ದು, ರೈಲ್ವೆ ಪೊಲೀಸರು ಮತ್ತು ಸ್ಥಳೀಯ ಪೊಲೀಸರು ಸದ್ಯ ತನಿಖೆಗೆ ಮುಂದಾಗಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net