More

    ಗದಗ: ವೈದ್ಯಕೀಯ ವಿಜ್ಞಾನ ಸಂಸ್ಥೆ ಸಭಾಂಗಣದಲ್ಲಿ ವಿಶ್ವ ಫಾರ್ಮಸಿಸ್ಟ್ ದಿನಾಚರಣೆ

    ಗದಗ

    ಸರ್ಕಾರಿ ಫಾರ್ಮಸಿ ಅಧಿಕಾರಿಗಳ ಸಂಘ ಜಿಲ್ಲಾ ಘಟಕ ಹಾಗೂ ಕರ್ನಾಟಕ ರಾಜ್ಯ ಔಷಧ ವಿಜ್ಞಾನ ಪರಿಷತ್ತು ಸಹಯೋಗದಲ್ಲಿ ಸೋಮವಾರ ಗದಗ ವೈದ್ಯಕೀಯ ವಿಜ್ಞಾನ ಸಂಸ್ಥೆ ಸಭಾಂಗಣದಲ್ಲಿ ವಿಶ್ವ ಫಾರ್ಮಸಿಸ್ಟ್ ದಿನಾಚರಣೆ-2023 ಹಾಗೂ ವೈಜ್ಞಾನಿಕ ಕಾರ್ಯಾಗಾರ ಜರುಗಿತು.

    ಕಾರ್ಯಕ್ರಮ ಉದ್ಘಾಟನೆ ನೆರವೇರಿಸಿದ ಮಾತನಾಡಿದ ರಾಜ್ಯ ಔಷಧ ನಿಯಂತ್ರಣ ವಿಭಾಗದ ಉಪ ಔಷಧ ನಿಯಂತ್ರಕ ಡಾ. ಭಾಸ್ಕರನ್ ಜೆ ಅವರು, ಔಷಧ ತಜ್ಞರಾಗಿ, ಫಾರ್ಮಸಿ ಅಧಿಕಾರಿಗಳು ಸಾಮಾನ್ಯ ಜನರ ಆರೋಗ್ಯ ಮತ್ತು ಸ್ವಾಸ್ಥವನ್ನು ಕಾಪಾಡುವಲ್ಲಿ ಪರಿಣಾಮಕಾರಿ, ಸುರಕ್ಷಿತ ಮತ್ತು ಗುಣಮಟ್ಟದ ಔಷಧಗಳು ಮತ್ತು ಸೇವೆಗಳನ್ನು ಒದಗಿಸುವ ಜವಾಬ್ದಾರಿಯನ್ನು ಹೊಂದಿರುತ್ತಾರೆ. ಅವರ ಶಿಸ್ತು ಮತ್ತು ನವೀಕೃತ ಜ್ಞಾನದಲ್ಲಿ ಇಡೀ ಸಾರ್ವಜನಿಕ ಆರೋಗ್ಯ ವ್ಯವಸ್ಥೆಗೆ ಬಹು ಮುಖ್ಯ ಆಧಾರ ಸ್ಥಂಭವಾಗಿ ಫಾರ್ಮಸಿ ಅಧಿಕಾರಿಗಳು ಜವಾಬ್ದಾರಿ ನಿರ್ವಹಿಸುತ್ತಾರೆ ಎಂದರು.

    ಹೆಚ್ಚು ಬೆಲೆ ಇರುವ ಔಷಧಗಳ ಬಳಕೆಯಿಂದಾಗುವ ಆರ್ಥಿಕ ಸಂಕಷ್ಟಗಳಿಂದ ಸಾಮಾನ್ಯ ಜನ ಆರ್ಥಿಕ ದುರ್ಬಲರಾಗುತ್ತಿದ್ದಾರೆ. ಜನರಿಹೆ ಬೆಲೆ ಕಡಿಮೆ ಇರುವ ಇತರೆ ಔಷಧಗಳನ್ನು ಸೂಚಿಸುವ ಮುಖಾಂತರ ವೈದ್ಯಕೀಯ ಉತ್ಪನ್ನಗಳು ಮತ್ತು ಆಧುನಿಕ ತಂತ್ರಜ್ಞಾನಗಳ ತರ್ಕಬದ್ಧ ಬಳಕೆ ಮಾಡಬೇಕು ಎಂದು ತಿಳಿಸಿದರು.

    ವಿಮೆಯಿಂದ ಒಳಗೊಳ್ಳುವ ಔಷಧಿಗಳನ್ನು ಸೂಚಿಸುವಲ್ಲಿ ಫಾರ್ಮಸಿ ಅಧಿಕಾರಿಗಳ ಪರಿಣತಿ ಬಹುದೊಡ್ಡ ಸಾಮಾಜಿಕ ಕೊಡುಗೆಯಾಗಿದೆ ಎಂದು ಡಾ. ಬಾಸ್ಕರನ್ ಜೆ ತಿಳಿಸಿದರು.

    ರಾಜ್ಯ ಸರ್ಕಾರಿ ಫಾರ್ಮಸಿ ಅಧಿಕಾರಿಗಳ ಸಂಘದ ರಾಜ್ಯಾದ್ಯಕ್ಷ ವಿ ಪ್ರಭಾಕರ್ ಉಪನ್ಯಾಸ ನೀಡಿ ಮಾತನಾಡಿ, ವೈದ್ಯಕೀಯ ವಿಜ್ಞಾನದಲ್ಲಿ ಫಾರ್ಮಸಿ ಅಧಿಕಾರಿಗಳ ಪಾತ್ರ ಅತ್ಯಂತ ಗಮನಾರ್ಹ ಮತ್ತು ಜವಾಬ್ದಾರಿಯಿಂದ ಕೂಡಿರುತ್ತದೆ. ಡ್ರಗ್ಸ್ ಅಂಡ್ ಕಾಸ್ಮೆಟಿಕ್ ಕಾಯಿದೆ 1948ರ ವ್ಯಾಪ್ತಿಯಲ್ಲಿ ಹಾಗೂ ಅಬಕಾರಿ ನಿಯಮಗಳ ಅಡಿಯಲ್ಲಿ ಬರುವ ಮನುಷ್ಯರ ಬಳಕೆಯ ಔಷಧಗಳನ್ನು ಸಂಗ್ರಹಿಸಿ ವಿತರಿಸುವ ಕಾರ್ಯಗಳನ್ನು ಫಾರ್ಮಾಸಿಸ್ಟ್ ಮಾಡಬೇಕಾಗುತ್ತದೆ. ಔಷಧ ವಿತರಣೆಯ ದಾಖಲೆಗಳ ಪಾರದರ್ಶಕ ಕ್ರೋಢೀಕರಿಸುವುದು ಬಹುದೊಡ್ಡ ಜವಾಬ್ದಾರಿಯನ್ನು ಫಾರ್ಮಸಿ ಅಧಿಕಾರಿಗಳು ನಿರ್ವಹಿಸಬೇಕಾಗಿದೆ ಎಂದರು.

    ಪ್ರತಿ ಔಷಧಗಳಿಗೂ ತನ್ನದೇ ಆದ ಸಂಯೋಜನೆಯ ಮಾನದಂಡವಿದೆ. ಈ ಮಾನದಂಡವನ್ನು ಇಂಡಿಯನ್ ಫಾರ್ಮಕೋಪಿಯ, ಬ್ರಿಟಿಷ್ ಫಾರ್ಮಕೋಪಿಯ, ಯುನಿಟೈಟ್ ಸ್ಟೇಟಸ್ ಫಾರ್ಮಕೋಪಿಯ ಮತ್ತು ಇತರೆ ಪ್ರಾಮಾಣಿಕೃತ ಸಂಯೋಜನೆಗಳ ಆಧಾರದಲ್ಲಿ ಔಷಧಗಳ ತಯಾರಿಕೆ ಆಗಿರುತ್ತವೆ. ಈ ಹಿನ್ನೆಲೆ ಔಷಧಗಳನ್ನು ವಿತರಿಸುವ ಸಂದರ್ಭದಲ್ಲಿ ಫಾರ್ಮಸಿ ಅಧಿಕಾರಿಗಳದ್ದು ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಬೇಕು ಎಂದು ಪ್ರಭಾಕರ್ ತಿಳಿಸಿದರು.

    ಬಳ್ಳಾರಿಯ ಪ್ರಾದೇಶಿಕ ಔಷದ ಪರೀಕ್ಷಣಾ ಪ್ರಯೋಗಾಲಯ ವಿಷಯ ತಜ್ಞ ಡಾ. ಎನ್. ಶ್ರೀನಿವಾಸ ರೆಡ್ಡಿ ಮಾತನಾಡಿ,ಬ
    ಕೋವಿಡ್ ನಂತಹ ವೈದ್ಯಕೀಯ ತುರ್ತು ಪರಿಸ್ಥಿತಿಯಲ್ಲಿ ಫಾರ್ಮಸಿಸ್ಟ್ ಪಾತ್ರ ಶ್ಲಾಘನೀಯ. ಕೋವಿಡ್ ಲಸಿಕೆಯ ಅವಿಷ್ಕಾರದಿಂದ ಹಿಡಿದು ಅದರ ಸಮರ್ಪಕವಾದ ವಿತರಣೆ ಹಾಗೂ ರೋಗಿಗಳಿಗೆ ಸರಿಯಾದ ಸಮಯದಲ್ಲಿ ತಲುಪಿಸಲು ಫಾರ್ಮಸಿಸ್ಟರು ನಿರ್ವಹಿಸಿದ ಕಾರ್ಯ ಅತ್ಯಂತ ಶ್ಲಾಘನೀಯ.
    ಹೊಸ ವೈದ್ಯಕೀಯ ಉತ್ಪನ್ನಗಳ, ಲಸಿಕೆಗಳ ಬಳಸಿ ಬಿಸಾಡಬಹುದಾದ ವೈದ್ಯಕೀಯ ಸಲಕರಣೆಗಳ ತಂತ್ರಜ್ಞಾನ ವನ್ನು ಫಾರ್ಮಸಿ ಅಧಿಕಾರಿಗಳು ನಿರಂತರ ಅಭ್ಯಾಸದ ಮುಖಾಂತರ ಕಲಿತಿದ್ದಾರೆ. ರೋಗಿಯ ಆರೋಗ್ಯವನ್ನು ಕಾಪಾಡಲು ವೈದ್ಯಕೀಯ ಉತ್ಪನ್ನಗಳು, ಸಾಧನಗಳು ಮತ್ತು ಲಸಿಕೆಗಳ ಪರಿಣಾಮಕಾರಿತ್ವ, ಸಮಗ್ರತೆ ಮತ್ತು ಭದ್ರತೆಯನ್ನು ಖಾತ್ರಿಪಡಿಸುವ ಜವಾಬ್ದಾರಿಯನ್ನು ನಿರ್ವಹಿಸುವಲ್ಲಿ ಪ್ರಮುಖ ಪಾತ್ರ ಫಾರ್ಮಸಿ ಅಧಿಕಾರಿಗಳದ್ದಾಗಿರುತ್ತದೆ ಎಂದರು.

    ರವಿ ಕುಮಾರ್ ಎಸ್.ಎನ್. ಅಧ್ಯಕ್ಷತೆ ವಹಿಸಿದ್ದರು. ಡಿ.ಎನ್. ಪಾಟೀಲ, ವಿಶ್ವನಾಥ ವನಕಿಯವರ, ಬಸವರಾಜ ಶಬರದ ಅರುಣಕುಮಾರ್ ನವಲೆ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts