More

    ‘ಚಂದ್ರಮುಖಿ 2’ ಬೆನ್ನಲ್ಲೇ ಮತ್ತೊಂದು ಚಿತ್ರದ ಬಗ್ಗೆ ಮಾಹಿತಿ ಕೊಟ್ಟ ನಟಿ ಕಂಗನಾ ರಣಾವತ್!​

    ಮುಂಬೈ: ನಟ ರಾಘವ್​ ಲಾರೆನ್ಸ್​ ಮತ್ತು ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಕಂಗನಾ ರಣಾವತ್​ ಮುಖ್ಯಭೂಮಿಕೆಯಲ್ಲಿ ನಟಿಸಿದ ‘ಚಂದ್ರಮುಖಿ 2’ ಸಿನಿಮಾ ನಿರೀಕ್ಷಿಸಿದಂತೆ ಬಾಕ್ಸ್​ ಆಫೀಸ್​ನಲ್ಲಿ ಅಬ್ಬರಿಸದೇ ಹೋದರೂ, ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಸದ್ಯ ಈ ಚಿತ್ರದ ಬೆನ್ನಲ್ಲೇ ಇದೀಗ ನಟಿ ತಾವು ಅಭಿನಯದ ಮತ್ತೊಂದು ಸಿನಿಮಾದ ರಿಲೀಸ್​ ದಿನಾಂಕವನ್ನು ಬಹಿರಂಗಪಡಿಸಿದ್ದಾರೆ.

    ಇದನ್ನೂ ಓದಿ: ರಾಜಸ್ಥಾನದಲ್ಲಿ ಪ್ರಧಾನಿ ಮೋದಿ: 7,000 ಕೋಟಿ ರೂ. ಮೌಲ್ಯದ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ

    ಸಾಮಾಜಿಕ ಜಾಲತಾಣಗಳಲ್ಲಿ ಸದಾ ಒಂದಲ್ಲ ಒಂದು ವಿಚಾರಗಳಿಗೆ ನೇರವಾಗಿ ನೆಟ್ಟಿಗರ ಕಂಗಣ್ಣಿಗೆ ಗುರಿಯಾಗುವ ಕಂಗನಾ ರಣಾವತ್, ತಮ್ಮ ಮುಂಬರುವ ‘ತೇಜಸ್’​ ಚಿತ್ರದ ಬಿಡುಗಡೆ ದಿನಾಂಕವನ್ನು ಅಧಿಕೃತವಾಗಿ ಘೋಷಿಸಿದ್ದಾರೆ. ಸರ್ವೇಶ್ ಮೇವಾರ ನಿರ್ದೇಶನದ ಈ​ ಚಿತ್ರದಲ್ಲಿ ಕಂಗನಾ ತೇಜಸ್ ಗಿಲ್ ಎಂಬ ಏರ್ ಫೋರ್ಸ್ ಪೈಲಟ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

    ‘ತೇಜಸ್’ ಇದೇ ಅಕ್ಟೋಬರ್ 27 ರಂದು ಬಹುತೇಕ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದ್ದು, ಅಕ್ಟೋಬರ್​ 08, ಏರ್​ ಫೋರ್ಸ್​ ದಿನದಂದು ಚಿತ್ರದ ಟ್ರೇಲರ್​ ರಿಲೀಸ್​ ಆಗಲಿದೆ,(ಏಜೆನ್ಸೀಸ್).

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts