

ಮಲಯಾಳಂ ನಟಿ ಸಂಯುಕ್ತಾ ಮೆನನ್, ಸದ್ಯ ದಣ ಭಾರತದ ಎಲ್ಲ ಚಿತ್ರರಂಗಗಳಲ್ಲೂ ಮಿಂಚುತ್ತಿದ್ದಾರೆ. ಮಾಲಿವುಡ್ನಲ್ಲಿ 10ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿರುವ ಅವರು ಈಗಾಗಲೇ ಕೆಲವು ತಮಿಳು ಹಾಗೂ ತೆಲುಗು ಚಿತ್ರಗಳಲ್ಲಿ ನಟಿಸಿದ್ದಾರೆ. ಕಳೆದ ವರ್ಷ "ಗಾಳಿಪಟ 2' ಚಿತ್ರದ ಮೂಲಕ ಕನ್ನಡಕ್ಕೂ ಪದಾರ್ಪಣೆ ಮಾಡಿದ ಅವರು, ದಿಗಂತ್ಗೆ ಜೋಡಿಯಾಗಿದ್ದರು.
2022ರಲ್ಲಿ ಪವನ್ ಕಲ್ಯಾಣ್ ಅಭಿನಯದ "ಭೀಮ್ಲಾ ನಾಯಕ್' ಮೂಲಕ ಟಾಲಿವುಡ್ಗೆ ಎಂಟ್ರಿ ಕೊಟ್ಟ ಅವರು, ಬಳಿಕ "ಬಿಂಬಿಸಾರ' ಚಿತ್ರದಲ್ಲಿ ನಟಿಸಿದ್ದರು. ಏಪ್ರಿಲ್ನಲ್ಲಿ ಬಿಡುಗಡೆಯಾದ "ವಿರೂಪಾಕ್ಷ' ಚಿತ್ರದ ಸಕ್ಸಸ್ ಬಳಿಕ ಸಂಯುಕ್ತಾಗೆ ಟಾಲಿವುಡ್ನಲ್ಲಿ ಬೇಡಿಕೆ ಹೆಚ್ಚಿದೆ. ಈಗಾಗಲೇ ನಂದಮೂರಿ ಕಲ್ಯಾಣ್ ನಾಯಕನಾಗಿರುವ "ಡೆವಿಲ್' ಚಿತ್ರಕ್ಕೆ ಅವರು ಆಯ್ಕೆಯಾಗಿದ್ದು, ಅದರ ಬೆನ್ನಲ್ಲೇ "ಕಾರ್ತಿಕೇಯ', "ಸ್ಪೆ$' ಖ್ಯಾತಿಯ ನಟ ನಿಖಿಲ್ ಸಿದ್ಧಾರ್ಥ್ ನಟಿಸುತ್ತಿರುವ "ಸ್ವಯಂಭೂ' ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.
ಇದನ್ನೂ ಓದಿ : ಸ್ಟಾರ್ ಹೀರೋಯಿನ್ ಬಳಿ ಕ್ಷಮೆ ಕೇಳಿದ ನಟ ರಾಣಾ ದಗ್ಗುಬಾಟಿ
ಈಗಾಗಲೇ ಚಿತ್ರತಂಡದ ಜತೆ ಮಾತುಕತೆ ಮುಗಿದಿದ್ದು, ಅಧಿಕೃತವಾಗಿ ಘೋಷಣೆ ಮಾಡುವುದೊಂದೇ ಬಾಕಿ ಎಂಬ ಮಾತುಗಳು ಟಾಲಿವುಡ್ ಅಂಗಳದಲ್ಲಿ ಕೇಳಿಬರುತ್ತಿವೆ. ಭರತ್ ಕೃಷ್ಣಮಾಚಾರಿ ನಿರ್ದೇಶಿಸುತ್ತಿರುವ ಈ ಚಿತ್ರದ ಚಿತ್ರೀಕರಣ ಇದೇ ಶುಕ್ರವಾರದಿಂದ (ಆ.18) ಪ್ರಾರಂಭವಾಗಲಿದೆ.
-ಏಜೆನ್ಸೀಸ್