

ಮುಂಬೈ: ಬಾಲಿವುಟ್ ನಟ ರಾಣಾ ದಗ್ಗುಬಾಟಿ ಅವರು, ಸ್ಟಾರ್ ನಾಯಕಿಯೊಬ್ಬಳ ಬಳಿ ಕ್ಷಮೆ ಕೇಳಿದ್ದಾರೆ. ಇತ್ತೀಚೆಗಷ್ಟೇ ನಾಯಕಿ ಬಗ್ಗೆ ರಾಣಾ ಹೇಳಿದ್ದು ಸಂಚಲನ ಮೂಡಿಸಿತ್ತು. ಈಗ ರಾಣಾ ಆ ನಾಯಕಿಯ ಬಳಿ ಕ್ಷಮೆ ಕೇಳಿರುವುದು ವೈರಲ್ ಆಗಿದೆ.
ನಡೆದಿದ್ದೇನು?: ಇತ್ತೀಚೆಗಷ್ಟೇ ರಾಣಾ ಪ್ರೀ ರಿಲೀಸ್ ಸಮಾರಂಭದಲ್ಲಿ ಅತಿಥಿಯಾಗಿ ಭಾಗವಹಿಸಿದ್ದರು. ದುಲ್ಕರ್ ಸಲ್ಮಾನ್ ಅಭಿನಯದ ಕಿಂಗ್ ಆಫ್ ಕೋಟಾ ಪ್ಯಾನ್ ಇಂಡಿಯಾ ಸಿನಿಮಾವಾಗಿ ಬಿಡುಗಡೆಯಾಗಲಿದೆ. ಈ ಸಿನಿಮಾದ ಪ್ರೀ ರಿಲೀಸ್ ಈವೆಂಟ್ ಹೈದರಾಬಾದ್ನಲ್ಲಿ ನಡೆದಿದೆ. ಈ ಕಾರ್ಯಕ್ರಮಕ್ಕೆ ನಾನಿ ಮತ್ತು ರಾಣಾ ಅತಿಥಿಗಳಾಗಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ರಾಣಾ, ದುಲ್ಕರ್ ಅವರನ್ನು ಹೊಗಳಿದರು. ದುಲ್ಕರ್ ಅವರ ಆಕ್ಷನ್ ಚಿತ್ರವನ್ನು ನೋಡಲು ನಾನು ತುಂಬಾ ಉತ್ಸುಕನಾಗಿದ್ದೇನೆ. ದುಲ್ಕರ್ ತುಂಬಾ ಡೌನ್ ಟು ಅರ್ಥ್ ಎಂಬುದಕ್ಕೆ ಉದಾಹರಣೆಯಾಗಿ...ಬಾಲಿವುಡ್ನಲ್ಲಿ ದುಲ್ಕರ್ ನಟಿಸಿದ್ದರು. ಆ ಸಿನಿಮಾದ ನಿರ್ಮಾಪಕರು ನನ್ನ ಸ್ನೇಹಿತರಾಗಿದ್ದರಿಂದ ಆ ಸಿನಿಮಾದ ಶೂಟಿಂಗ್ಗೆ ಹೋಗಿದ್ದೆ. ಶಾಟ್ ಮಧ್ಯೆ ನಾಯಕಿ ಫೋನಿನಲ್ಲಿ ಪತಿಯೊಂದಿಗೆ ಶಾಪಿಂಗ್ ಬಗ್ಗೆ ಮಾತನಾಡುತ್ತಿದ್ದಳು. ದುಲ್ಕರ್ ತಾಳ್ಮೆಯಿಂದ ಬಿಸಿಲಲ್ಲಿ ನಿಂತಿದ್ದರು ಎಂದರು. ಈ ಕಾಮೆಂಟ್‌ಗಳು ವೈರಲ್ ಆಗಿವೆ.
ಸೋನಂ ಕಪೂರ್ ನಾಯಕಿ ಎಂದು ಕೆಲವರು ಟ್ರೋಲ್ ಮಾಡಲು ಆರಂಭಿಸಿದರು. ದುಲ್ಕರ್ ಮತ್ತು ಸೋನಂ ಸಿನಿಮಾವೊಂದರಲ್ಲಿ ಒಟ್ಟಿಗೆ ನಟಿಸಿದ್ದು ಗೊತ್ತೇ ಇದೆ. ರಾಣಾ ಅವರ ಕಾಮೆಂಟ್‌ಗಳು ವೈರಲ್ ಆದ ನಂತರ, ರಾಣಾ ಅವರಲ್ಲಿ ಕ್ಷಮೆಯಾಚಿಸಿದರು. ಈ ಬಗ್ಗೆ ಟ್ವೀಟ್ ಮಾಡಿದ ರಾಣಾ, ಸೋನಂ ಮತ್ತು ದುಲ್ಕರ್ ಬಳಿ ಕ್ಷಮೆಯಾಚಿಸಿದ್ದಾರೆ.
ರಾಣಾ ದಗ್ಗುಬಾಟಿ ಸ್ಪಷ್ಟನೆ: ‘ನನ್ನ ಕಾಮೆಂಟ್‌ಗಳಿಂದಾಗಿ ಸೋನಂ ಟೀಕೆಗೆ ಒಳಗಾಗಿದ್ದಾರೆ. ನಾನು ಹೇಳಿದ್ದು ಸತ್ಯವಲ್ಲ. ಅದನ್ನು ನಾನು ಗಂಭೀರವಾಗಿ ಹೇಳಿರಲಿಲ್ಲ. ನಾವು ಆಗಾಗ ತಮಾಷೆ ಮಾಡುತ್ತಾ ಇರುತ್ತೇವೆ. ನನ್ನ ಮಾತುಗಳನ್ನು ತಪ್ಪಾಗಿ ಅರ್ಥೈಸಲಾಗಿದೆ. ಸೋನಂ ಮತ್ತು ದುಲ್ಕರ್‌ಗೆ ನಾನು ಕ್ಷಮೆ ಕೇಳುತ್ತೇನೆ. ಅವರಿಬ್ಬರನ್ನೂ ನಾನು ಬಹಳವಾಗಿ ಗೌರವಿಸುತ್ತೇನೆ. ಈ ಸ್ಪಷ್ಟೀಕರಣ ಎಲ್ಲಾ ತಪ್ಪು ತಿಳುವಳಿಕೆಯನ್ನು ಕೊನೆಗೊಳಿಸುತ್ತದೆ ಎಂದು ನಾನು ಭಾವಿಸುತ್ತೇನೆ. ನೀವು ಅರ್ಥಮಾಡಿಕೊಂಡಿದ್ದಕ್ಕೆ ಧನ್ಯವಾದಗಳು’ ಎಂದು ರಾಣಾ ಬರೆದುಕೊಂಡಿದ್ದಾರೆ.