ಟಾಲಿವುಡ್‌ನಲ್ಲಿ ನೇಹಾ ಮಿಂಚು; ಸೈಮಾ ಅತ್ಯುತ್ತಮ ನಟಿ ಸ್ಪರ್ಧೆಯ ಅಂತಿಮ ಸುತ್ತಿನಲ್ಲಿ ಕನ್ನಡತಿ

neha shetty
Published on

ಮಾಡೆಲಿಂಗ್ ಕ್ಷೇತ್ರದಲ್ಲಿ ಮಿಂಚಿ, ಕನ್ನಡದ ‘ಮುಂಗಾರು ಮಳೆ 2’ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಹುಡುಗಿ ನೇಹಾ ಶೆಟ್ಟಿ. ನಂತರ 2018ರಲ್ಲಿ ‘ಮೆಹಬೂಬಾ’ ಮೂಲಕ ಟಾಲಿವುಡ್‌ಗೆ ಹಾರಿದ ಅವರು ‘ಗಲ್ಲಿ ರೌಡಿ’, ‘ಮೋಸ್ಟ್ ಎಲಿಜಿಬಲ್ ಬ್ಯಾಚುಲರ್’ ಚಿತ್ರಗಳಲ್ಲಿ ನಟಿಸಿದ್ದಾರೆ. ಕಳೆದ ವರ್ಷ ರಿಲೀಸ್ ಆಗಿದ್ದ ‘ಡಿಜೆ ಟಿಲ್ಲು’ ಚಿತ್ರದಲ್ಲಿ ನೇಹಾ ಸಿದ್ದು ಜೊನ್ನಲಗದ್ದಗೆ ನಾಯಕಿಯಾಗಿದ್ದರು. ಅವರ ನಟನೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು.

ಇದೀಗ ಸೈಮಾ ಅತ್ಯುತ್ತಮ ನಾಯಕ ನಟಿ ಪ್ರಶಸ್ತಿಗೂ ನೇಹಾ ಆಯ್ಕೆಯಾಗಿದ್ದಾರೆ. ಸಮಂತಾ, ಮೃನಾಲ್ ಠಾಕೂರ್, ನಿತ್ಯಾ ಮೆನನ್, ಮೀನಾಕ್ಷಿ ಚೌಧರಿ ಜತೆ ಮತ್ತೊಬ್ಬ ಕನ್ನಡತಿ ಶ್ರೀಲೀಲಾ ಜತೆಗೆ ಸೈಮಾ ಅತ್ಯುತ್ತಮ ನಟಿ ಪ್ರಶಸ್ತಿಯ ಅಂತಿಮ ಸುತ್ತಿನ ಸ್ಪರ್ಧೆಯಲ್ಲಿದ್ದಾರೆ ನೇಹಾ. ಸದ್ಯ ಅವರು ಕಾರ್ತಿಕೇಯ ಜತೆ ‘ಬೆದುರುಲಂಕ 2012’ ವಿಶ್ವಾಕ್ ಸೇನ್‌ಗೆ ನಾಯಕಿಯಾಗಿ ‘ಗ್ಯಾಂಗ್ಸ್ ಆಫ್ ಗೋದಾವರಿ’ ಹಾಗೂ ಕಿರಣ್ ಅಬ್ಬಾವರಂಗೆ ಜೋಡಿಯಾಗಿ ‘ರೂಲ್ಸ್ ರಂಜನ್’ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.

ಹೀಗೆ ಕನ್ನಡದ ಹುಡುಗಿಯರಾದ ನೇಹಾ ಶೆಟ್ಟಿ ಮತ್ತು ಶ್ರೀಲೀಲಾ, ತೆಲುಗು ಚಿತ್ರಗಳ ಮೂಲಕ ಸದ್ದು ಮಾಡುತ್ತಿರುವುದು ವಿಶೇಷವೇ ಸರಿ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net