

ಬೆಂಗಳೂರು: ನಟಿ ಸಂಯುಕ್ತಾ ಹೆಗ್ಡೆ ತಮ್ಮ ಹಾಟ್ ಫೋಟೋಗಳ ಮೂಲಕವಾಗಿ ಅದೆಷ್ಟೋ ಬಾರಿ ಪಡ್ಡೆ ಹುಡುಗರ ನಿದ್ದೆಗೆ ಕನ್ನ ಹಾಕಿದ್ದಾರೆ. ಆದರೆ ಈ ಬಾರಿ ಫೋಟೋ ನೋಡಿ ಸಂಯುಕ್ತಾ ಹೆಗ್ಡೆ ರೆಂಜೆ ಬೇರೆ ಎನ್ನುತ್ತಿದ್ದಾರೆ ಫ್ಯಾನ್ಸ್.
ಸದಾ ಒಂದಲ್ಲಾ ಒಂದು ವಿಚಾರವಾಗಿ ಸುದ್ದಿಯಲ್ಲಿರುವ ನಟಿ ಇದೀಗ ಟಾಪ್ಲೆಸ್ ವೀಡಿಯೋವೊಂದನ್ನ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ನಿಮ್ಮ ದೇಹ, ನಿಮ್ಮ ಆಸ್ತಿ. ನೀವು ಯಾವುದೇ ಸಾಮಾಜಿಕ ಮಾನದಂಡಗಳ ಮಾಲಿಕತ್ವ ಹೊಂದಿಲ್ಲ. ಮಹಿಳೆಯರು ಫ್ರಿಡಮ್, ಆತ್ಮವಿಶ್ವಾಸಕ್ಕೆ ಅವಕಾಶವಿದೆ. ಶಕ್ತಿ ಎನ್ನುವುದು ಪುರುಷ ಮತ್ತು ಸ್ತ್ರಿ ಎನ್ನುವುದು ಅಲ್ಲ ಎಂದು ಸಂಯುಕ್ತಾ ಹೆಗ್ಡೆ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಈ ವಿಡಿಯೋ ಮೂಲಕವಾಗಿ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದಾರೆ.
ಕೆಲವು ತಿಂಗಳುಗಳ ಹಿಂದೆ ಸಿನಿಮಾವೊಂದರ ಚಿತ್ರೀಕರಣದಲ್ಲಿ ಸಂಯುಕ್ತಾ ಕಾಲಿಗೆ ಪೆಟ್ಟಾಗಿತ್ತು. 5 ತಿಂಗಳ ಬೆಡ್ ರೆಸ್ಟ್ ನಂತರ ಮತ್ತೆ ಸಿನಿಮಾಗಳಲ್ಲಿ ಆಕ್ಟೀವ್ ಆಗಿದ್ದಾರೆ.
ನಟಿ ರಕ್ಷಿತ್ ಶೆಟ್ಟಿ ಜೊತೆ ಸೂಪರ್ ಹಿಟ್ 'ಕಿರಿಕ್ ಪಾರ್ಟಿ' ಚಿತ್ರದ ಮೂಲಕ ಸಿನಿರಂಗಕ್ಕೆ ಪದಾರ್ಪಣೆ ಮಾಡಿದರು. ಕನ್ನಡದಲ್ಲಿ ಅತ್ಯುತ್ತಮ ಪೋಷಕ ನಟಿಗಾಗಿ ಫಿಲ್ಮ್ಫೇರ್ ಪ್ರಶಸ್ತಿಯನ್ನು ಪಡೆದರು.
ಜಯರಾಮ್ ರವಿ ಮತ್ತು ಕಾಜಲ್ ಅಗರ್ವಾಲ್ ಅವರೊಂದಿಗೆ 'ಕೋಮಾಲಿ' ಸಿನಿಮಾದಲ್ಲಿ ನಟಿಸುವ ಮೂಲಕ ತಮಿಳಿಗೆ ಪದಾರ್ಪಣೆ ಮಾಡಿದರು. ನಟನ ಮೂಲಕವಾಗಿ ತಮ್ಮದೇ ಆಗಿರುವ ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದಾರೆ.