ಎಣ್ಣೆ ಪ್ರಿಯರ ಜೇಬಿಗೆ ಕತ್ತರಿ; ಬಿಯರ್​​ ಮೇಲಿನ ಅಬಕಾರಿ ಸುಂಕ ಶೇಕಡ 10ರಷ್ಟು ಹೆಚ್ಚಳ

alcohol
Published on

ಬೆಂಗಳೂರು:  ಸಿಎಂ ಸಿದ್ದರಾಮಯ್ಯ 14ನೇ ಬಜೆಟ್  ಮಂಡನೆ ಮಾಡುತ್ತಿದ್ದಾರೆ. ಹಲವು ಜನಪರ ಕಾರ್ಯಕ್ರಮದ ಜತೆಗೆ ರಾಜ್ಯ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾದ ಬಜೆಟ್‌ನ್ನು ಮುಖ್ಯಮಂತ್ರಿಗಳು ಮಡಿಸುತ್ತಾರೆಂಬ  ನಿರೀಕ್ಷೆಗಳ ಮಧ್ಯೆ ಈ ಬಜೆಟ್​ ಮದ್ಯ ಪ್ರಿಯರಿಗೆ ಶಾಕ್​​ ನೀಡಿದೆ.

ನೂತಕ ಕಾಂಗ್ರೆಸ್ ಸರ್ಕಾರದ ಮೊದಲ ಬಜೆಟ್​ನಲ್ಲಿ ಅಬಕಾರಿ ತೆರಿಗೆ ಹೆಚ್ಚಿಸಿದೆ. ಇದರಿಂದ ಎಣ್ಣೆ ಪ್ರಿಯರ ಜೇಬಿಗೆ ಕತ್ತರಿ ಬೀಳಲಿದೆ. ಅಬಕಾರಿ ತೆರಿಗೆ ಶೇಕಡಾ 20ರಷ್ಟು ಹೆಚ್ಚಳವಾಗಿದೆ. ಬಿಯರ್​ ಮೇಲಿನ ಅಬಕಾರಿ ಸುಂಕ ಶೇಕಡಾ 10ರಷ್ಟು ಹೆಚ್ಚಿಸಲಾಗಿದೆ.

ವಿಧಾನಸಭೆ ಚುನಾವಣೆ ವೇಳೆ ಕಾಂಗ್ರೆಸ್ ಘೋಷಿಸಿದ್ದ 5 ಗ್ಯಾರಂಟಿಗಳನ್ನು ಅನುಷ್ಠಾನಕ್ಕೆ ತಂದಿರುವ ಸಿಎಂ ಸಿದ್ದರಾಮಯ್ಯ, ಈ ಯೋಜನೆಗಳಿಗೆ ಹಣ ಹೊಂದಿಸಲು ಭಾರೀ ಕಸರತ್ತು ನಡೆಸುತ್ತಿದ್ದಾರೆ.  2023-24ನೇ ಸಾಲಿನ ಬಜೆಟ್ ಗಾತ್ರ 3.35ಲಕ್ಷ ಕೋಟಿ ರೂಪಾಯಿ ದಾಟುವ ಅಂದಾಜು ಮಾಡಲಾಗಿದೆ. ಸಿದ್ದರಾಮಯ್ಯನವರ ಗ್ಯಾರಂಟಿ ಬಜೆಟ್​ನಲ್ಲಿ ಕೆಲವು ಕೊಡುಗೆಗಳನ್ನು ಘೋಷಣೆ ಮಾಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net