More

  ಬಲಿಷ್ಠ ಸರ್ಕಾರದಿಂದ ಮಾತ್ರ ಭಾರತದ ಹಿತರಕ್ಷಣೆ

  ನವದೆಹಲಿ: ಆರು ದಶಕಗಳ ಕಾಲ ಈ ದೇಶವನ್ನು ಆಳಿದ ಕಾಂಗ್ರೆಸ್ 370ನೇ ವಿಧಿ ಎಂಬ ಅಡ್ಡಗೋಡೆಯನ್ನು ನಿರ್ವಿುಸಿತ್ತು. ಆ ಅಡ್ಡಗೋಡೆ ಕೆಡವಿದರೆ ದೇಶದಲ್ಲಿ ಬೆಂಕಿ ಬೀಳುತ್ತೆ ಎಂದು ಹೆದರಿಸಿತು. ಆದರೆ, ಬಿಜೆಪಿಗೆ ರಾಷ್ಟ್ರದ ಹಿತವೇ ಮುಖ್ಯ. 370ನೇ ವಿಧಿಯನ್ವಯ ಜಮ್ಮು-ಕಾಶ್ಮೀರಕ್ಕೆ ನೀಡಿದ ವಿಶೇಷ ಸ್ಥಾನಮಾನವನ್ನು ಹಿಂಪಡೆದವು. ಈಗ ಜಮ್ಮು-ಕಾಶ್ಮೀರ ವಿಕಾಸದ ಹಾದಿಯಲ್ಲಿದೆ. ಶಾಂತಿ ನೆಲೆಸಿದೆ. ದುರ್ಬಲ ಮತ್ತು ಬಲಿಷ್ಠ ಸರ್ಕಾರಗಳ ನಡುವಿನ ವ್ಯತ್ಯಾಸ ಇದು ಎಂದ ಪ್ರಧಾನಿ ನರೇಂದ್ರ ಮೋದಿ, ದೇಶದಲ್ಲಿ ಬಲಿಷ್ಠ ಸರ್ಕಾರವಿದ್ದರೆ ಶತ್ರುಗಳು ಏನಾದರೂ ಮಾಡುವ ಮುನ್ನ ನೂರು ಬಾರಿ ಯೋಚಿಸುತ್ತಾರೆ ಎಂದರು.

  ಶನಿವಾರ ದೆಹಲಿ ಉತ್ತರ ಪೂರ್ವ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ರ‍್ಯಾಲಿ ಉದ್ದೇಶಿಸಿ ಮಾತನಾಡಿದ ಮೋದಿ, ಕಾಂಗ್ರೆಸ್ ವಿರುದ್ಧದ ವಾಗ್ದಾಳಿಯನ್ನು ಮತ್ತಷ್ಟು ತೀವ್ರಗೊಳಿಸಿದರು. ಕಾಂಗ್ರೆಸ್​ನ ನಾಲ್ಕು ಪೀಳಿಗೆಗಳು ದೆಹಲಿಯನ್ನು ಆಳಿವೆ. ಆದರೆ, ಇಂದು ದೆಹಲಿಯ ನಾಲ್ಕು ಕ್ಷೇತ್ರಗಳಲ್ಲಿ ಸ್ಪರ್ಧಿಸುವಷ್ಟೂ ಕಾಂಗ್ರೆಸ್​ಗೆ ಶಕ್ತಿ ಇಲ್ಲ. ‘10, ಜನಪಥ’ದಲ್ಲಿ ಕಾಂಗ್ರೆಸ್ ದರ್ಬಾರವಿತ್ತು. ಅಲ್ಲೂ ಈ ಪಕ್ಷಕ್ಕೆ ಸ್ಪರ್ಧಿಸಲಾಗುತ್ತಿಲ್ಲ ಎಂದು ಟೀಕಿಸಿದರು. ಗಾಂಧೀಜಿಯವರ ಮಾತಿನಂತೆ ಸ್ವಾತಂತ್ರ್ಯಪ್ತಾಪ್ತಿಯ ಬಳಿಕ ಕಾಂಗ್ರೆಸ್​ನ್ನು ವಿಸರ್ಜಿಸಿದ್ದರೆ, ದೇಶ ಇಂದು ಐದು ದಶಕಗಳಷ್ಟು ಮುಂದಿರುತ್ತಿತ್ತು ಎಂದರು.

  ಪಾಕಿಸ್ತಾನ ಮುಂಚೆ ಬಾಂಬ್​ಗಳನ್ನು ಕೈಯಲ್ಲಿ ಹಿಡಿದುಕೊಂಡು ಬರುತ್ತಿತ್ತು. ಆದರೆ, ಇಂದು ಪಾಕಿಸ್ತಾನ ಭಿಕ್ಷಾಪಾತ್ರೆ ಹಿಡಿದುಕೊಂಡು ಓಡಾಡುತ್ತಿದೆ. ದೇಶದಲ್ಲಿ ಬಲಿಷ್ಠ ಸರ್ಕಾರವಿದ್ದರೆ ಶತ್ರುಗಳು ಹೆದರುತ್ತಾರೆ ಎಂದರು.

  10 ವರ್ಷಗಳ ಟ್ರಾ್ಯಕ್ ರೆಕಾರ್ಡ್ ಹಾಗೂ ಮುಂದಿನ 25 ವರ್ಷಗಳ ನೀಲಿನಕ್ಷೆಯೊಂದಿಗೆ ನಾವು ಜನರ ಮುಂದೆ ಬಂದಿದ್ದೇವೆ. ಆದರೆ, ಇಂಡಿ ಒಕ್ಕೂಟದವರ ಬಳಿ ಏನಿದೆ? ಅವರಲ್ಲಿ ಎಷ್ಟು ಪಕ್ಷಗಳೋ ಅಷ್ಟು ನಾಯಕರು, ಅಷ್ಟು ಘೋಷಣೆಗಳು, ಅಷ್ಟು ಪ್ರಧಾನಿ ಅಭ್ಯರ್ಥಿಗಳು ಇದ್ದಾರೆ ಎಂದರು. ಇದಕ್ಕೂ ಮುನ್ನ ಹರಿಯಾಣದ ಅಂಬಾಲಾದಲ್ಲಿ ಚುನಾವಣಾ ಪ್ರಚಾರ ರ‍್ಯಾಲಿ ಉದ್ದೇಶಿಸಿ ಮಾತನಾಡಿದರು.

  ಈ ಬಾರಿ ಎನ್​ಡಿಎಗೆ ಲಾಭವಾಗಲಿದೆ: ಪ್ರಶಾಂತ್ ಕಿಶೋರ್

  ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್​ಡಿಎಗೆ ಬೃಹತ್ ಲಾಭವಾಗಲಿದೆ ಎಂದು ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಭವಿಷ್ಯ ನುಡಿದಿದ್ದಾರೆ. ಹೀಗಿದ್ದರೂ, ಬಿಜೆಪಿ ಹೇಳಿದಂತೆ 400 ಸ್ಥಾನ ದಾಟುವುದು ಸಾಧ್ಯವಿಲ್ಲ ಎಂದಿದ್ದಾರೆ.

  ಬಲಿಷ್ಠ ಸರ್ಕಾರದಿಂದ ಮಾತ್ರ ಭಾರತದ ಹಿತರಕ್ಷಣೆ

  ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ ಅವರು, ಬಿಜೆಪಿಯನ್ನು ಕೇಂದ್ರದಿಂದ ಹೊರಹಾಕಬೇಕಾದರೆ, ಉತ್ತರ ಮತ್ತು ಪಶ್ಚಿಮ ಭಾರತದಲ್ಲಿ ಪಕ್ಷ 100 ಲೋಕಸಭಾ ಸ್ಥಾನಗಳನ್ನು ಕಳೆದುಕೊಳ್ಳಬೇಕು. ಪೂರ್ವ ಮತ್ತು ದಕ್ಷಿಣದಲ್ಲಿ ಯಾವುದೇ ಲಾಭವನ್ನು ಪಡೆಯಬಾರದು ಎಂದು ಅಭಿಪ್ರಾಯಪಟ್ಟರು. ಬಿಹಾರ, ಪಶ್ಚಿಮ ಬಂಗಾಳ, ಅಸ್ಸಾಂ, ಒಡಿಶಾ, ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು ಮತ್ತು ಕೇರಳದಲ್ಲಿ ಕನಿಷ್ಠ 240 ಲೋಕಸಭಾ ಸ್ಥಾನಗಳಿವೆ. ಈ ಪೈಕಿ ಬಿಜೆಪಿ 50ಕ್ಕಿಂತ ಕಡಿಮೆ ಸ್ಥಾನಗಳನ್ನು ಹೊಂದಿದೆ. ಆದರೆ ಬಿಜೆಪಿ ಒಟ್ಟು 300 ಸ್ಥಾನಗಳನ್ನು ಪಡೆಯಲಿದೆ. ಏಕೆಂದರೆ ಉತ್ತರ ಮತ್ತು ಪಶ್ಚಿಮದಲ್ಲಿ ಬಿಜೆಪಿ ಈಗಾಗಲೇ 260-270 ಸ್ಥಾನಗಳನ್ನು ಗೆದ್ದಿದೆ. ಉತ್ತರ ಮತ್ತು ಪಶ್ಚಿಮದಲ್ಲಿ ಬಿಜೆಪಿ 80-100 ಸ್ಥಾನಗಳನ್ನು ಕಳೆದು ಕೊಳ್ಳದಿದ್ದರೆ ಲೋಕಸಭೆ ಚುನಾವಣೆಯಲ್ಲಿ ಸೋಲಲು ಸಾಧ್ಯವಿಲ್ಲ ಎಂದವರು ಹೇಳಿದ್ದಾರೆ.

  ದೇಶದ ಹಿತಾಸಕ್ತಿಯೊಂದಿಗೆ ಮಮತಾ ರಾಜಿ: ಜೆಪಿ ನಡ್ಡಾ

  ಕೊಲ್ಕತ್ತಾ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಮ್ಮ ಮತಬ್ಯಾಂಕ್​ಗಾಗಿ ರಾಷ್ಟ್ರದ ಹಿತಾಸಕ್ತಿಯೊಂದಿಗೆ ರಾಜಿ ಮಾಡಿಕೊಂಡಿದ್ದಾರೆ. ಅವರು ನುಸುಳುಕೋರರಿಗೆ ಆಶ್ರಯ ನೀಡುತ್ತಿದ್ದಾರೆ ಮತ್ತು ಅವರಿಗೆ ಗುರುತಿನ ಚೀಟಿ, ಪಡಿತರ ಚೀಟಿಗಳನ್ನು ನೀಡಿ ಮತದಾರರನ್ನಾಗಿ ಮಾಡಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಗಂಭೀರ ಆರೋಪ ಮಾಡಿದ್ದಾರೆ.

  ಕೊಲ್ಕತ್ತಾದಲ್ಲಿ ಶನಿವಾರ ಚುನಾವಣಾ ಪ್ರಚಾರ ರ್ಯಾಲಿಯಲ್ಲಿ ಮಾತನಾಡಿದ ಅವರು, ಪಶ್ಚಿಮ ಬಂಗಾಳ ಸರ್ಕಾರದ ಇಂತಹ ಕ್ರಮಗಳು ದೇಶವಿರೋಧಿ ಯಾಗಿದೆ. ಕಾನೂನು ಮತ್ತು ಸುವ್ಯವಸ್ಥೆ ರಾಜ್ಯದ ವಿಷಯವಾಗಿದೆ. ನಾವು (ಕೇಂದ್ರ) ರಾಜ್ಯವನ್ನು ಬೆಂಬಲಿಸಬಹುದು. ಆದರೆ ಮಮತಾ ಬ್ಯಾನರ್ಜಿ ಅವರ ಉದ್ದೇಶಗಳು ಸ್ಪಷ್ಟವಾಗಿಲ್ಲ. ಅವುಗಳು ಸಂಶಯಾಸ್ಪದವಾಗಿದೆ ಎಂದು ಕಿಡಿಕಾರಿದ್ದಾರೆ.

  ಭಾರತದ ಬಗ್ಗೆ ಶ್ವೇತಭವನ ಮೆಚ್ಚುಗೆ

  ವಾಷಿಂಗ್ಟನ್: ವಿಶ್ವದಲ್ಲಿ ಭಾರತಕ್ಕಿಂತ ಹೆಚ್ಚು ರೋಮಾಂಚಕ ಪ್ರಜಾಪ್ರಭುತ್ವಗಳಿಲ್ಲ. ಲೋಕಸಭೆ ಚುನಾವಣೆಯಲ್ಲಿ ಭಾರತದ ಜನರು ಉತ್ಸಾಹದಿಂದ ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದ್ದಕ್ಕಾಗಿ ಅಮೆರಿಕದ ಶ್ವೇತಭವನ ಮೆಚ್ಚುಗೆ ವ್ಯಕ್ತಪಡಿಸಿದೆ. ಶ್ವೇತಭವನದ ರಾಷ್ಟ್ರೀಯ ಭದ್ರತಾ ಸಂವಹನಗಳ ಸಲಹೆಗಾರ ಜಾನ್ ರ್ಕಿಬಿ ಭಾರತದ ಚುನಾವಣೆಗಳ ಪ್ರಶ್ನೆಗೆ ಪ್ರತಿಕ್ರಿಯಿಸಿ, 969 ಮಿಲಿಯನ್ ಜನರು ಒಂದು ಮಿಲಿಯನ್ ಮತಗಟ್ಟೆಗಳಲ್ಲಿ 544 ಸಂಸತ್ ಸದಸ್ಯರನ್ನು ಆಯ್ಕೆ ಮಾಡಲು ತಮ್ಮ ಹಕ್ಕನ್ನು ಚಲಾಯಿಸುತ್ತಿದ್ದಾರೆ ಎಂದರು.

  ಜೋ ಬೈಡೆನ್ ಆಡಳಿತದ ಕಳೆದ ಮೂರು ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾರತ-ಅಮೆರಿಕ ಸಂಬಂಧವು ಬಲಗೊಂಡಿದೆ ಮತ್ತು ಹತ್ತಿರವಾಗುತ್ತಿದೆ ಎಂದು ರ್ಕಿಬಿ ಹೇಳಿದ್ದಾರೆ.

  ಚಿನ್ನಸ್ವಾಮಿಯಲ್ಲಿ ಆರ್​ಸಿಬಿ-ಸಿಎಸ್​ಕೆ ಪಂದ್ಯ ವೀಕ್ಷಿಸಿದ ಸಿಎಂ ಸಿದ್ಧರಾಮಯ್ಯ, ನಟ ಶಿವರಾಜ್​ಕುಮಾರ್

  ದೇವರಾಜೇಗೌಡ ಮೆಂಟಲ್ ಕೇಸ್, ಆಸ್ಪತ್ರೆಗೆ ಸೇರಿಸಬೇಕು ಎಂದ ಡಿಸಿಎಂ ಡಿಕೆ ಶಿವಕುಮಾರ್

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts