ಮತ್ತೆ ಮೈಕ್ರೋ ಬಿಕಿನಿ ಫೋಟೋ ಹರಿಬಿಟ್ಟ ಕಿರಿಕ್​ ಬ್ಯೂಟಿ: ಫೋಟೋ, ವಿಡಿಯೋ ವೈರಲ್​

Samyuktha hegde
Published on

ಚೆನ್ನೈ: ಕಿರಿಕ್​ ಪಾರ್ಟಿ ಚಿತ್ರದ ಮೂಲಕ ಕನ್ನಡಿಗರಿಗೆ ಪರಿಚಯವಾದ ನಟಿ ಸಂಯುಕ್ತಾ ಹೆಗ್ಡೆ ಪಡ್ಡೆ ಹುಡುಗರ ಫೇವರಿಟ್​ ಎಂಬುದರಲ್ಲಿ ಸಂಶಯವೇ ಇಲ್ಲ. ಕನ್ನಡ ಚಿತ್ರರಂಗದಲ್ಲಿ ಅವಕಾಶಗಳು ಕಡಿಮೆಯಾದ ಬೆನ್ನಲ್ಲೇ ತಮಿಳು ಚಿತ್ರರಂಗದಲ್ಲಿ ಬೀಡು ಬಿಟ್ಟಿರುವ ಸಂಯುಕ್ತಾ, ತಮ್ಮ ಬೋಲ್ಡ್​ ಪಾತ್ರಗಳ ಮೂಲಕವೇ ಹೆಚ್ಚು ಸದ್ದು ಮಾಡುತ್ತಿದ್ದಾರೆ.

ಜಯಂ ರವಿ ಅಭಿನಯಯದ ಕೋಮಲಿ ಸಿನಿಮಾ ಮೂಲಕ ಸಂಯುಕ್ತಾ, ಕಾಲಿವುಡ್​ಗೆ ಪದಾರ್ಪಣೆ ಮಾಡಿದರು. ಅದಾದ ಬಳಿಕ ಪಪ್ಪಿ, ಥೇಲ್ ಹಾಗೂ ಮನ್ಮಥ ಲೀಲೆ ಸಿನಿಮಾದಲ್ಲಿ ನಟಿಸಿದ್ದಾರೆ. ಮಾನಾಡು ಖ್ಯಾತಿಯ ವೆಂಕಟ್​ ಪ್ರಭು ನಿರ್ದೇಶನದ ಮನ್ಮಥ ಲೀಲೆ ಚಿತ್ರದಲ್ಲಿ ತಮ್ಮ ಬೋಲ್ಡ್​ ಪಾತ್ರದ ಮೂಲಕವೇ ಸಂಯುಕ್ತಾ ಕಾಲಿವುಡ್​ನಲ್ಲಿ ಭಾರೀ ಸದ್ದು ಮಾಡಿದ್ದಾರೆ. ಇನ್ನಷ್ಟು ಚಿತ್ರಗಳು ಅವರ ಕೈಯಲ್ಲಿವೆ.

ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುವ ಸಂಯುಕ್ತಾ ಆಗಾಗಾ ಹಾಟ್​ ಫೋಟೋಗಳನ್ನು ಹರಿಬಿಡುವ ಮೂಲಕ ಪಡ್ಡೆ ಹುಡುಗರ ಮೈ ಬಿಸಿಯೇರಿಸುತ್ತಿರುತ್ತಾರೆ. ಇದೇ ಕಾರಣಕ್ಕೆ ಆಗಾಗ ಟ್ರೋಲ್​ ಸಹ ಆಗುತ್ತಿರುತ್ತಾರೆ. ಸದ್ಯ ಮಾಲ್ಡೀವ್ಸ್​ನ ರಜೆಯ ಮಜದಲ್ಲಿರುವ ಸಂಯುಕ್ತಾ ನೀಲಿ ಬಣ್ಣದ ಮೈಕ್ರೋ ಬಿಕಿನಿ ತೊಟ್ಟು ಬೀಚ್​ನಲ್ಲಿ ಮಿಂದೆದ್ದಿದ್ದಾರೆ.

ಸಂಯುಕ್ತಾ ಬಿಕಿನಿಯಲ್ಲಿ ಕ್ಯಾಮೆರಾಗೆ ಪೋಸ್​​ ನೀಡಿದ್ದು, ಅದಕ್ಕೆ ಸಂಬಂಧಿಸಿದ ಫೋಟೋ ಮತ್ತು ವಿಡಿಯೋಗಳನ್ನು ತಮ್ಮ ಇನ್​ಸ್ಟಾಗ್ರಾಂನಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಪ್ರತ್ಯೇಕ ದ್ವೀಪದಲ್ಲೊಂದು ಅನ್ವೇಷಣೆ, ಹೊಸ ಸ್ನೇಹಿತರು, ಸ್ಕೂಬಾ ಡೈವಿಂಗ್​, ಮರ ಏರಿದ್ದು ಮತ್ತು ಬಿಸಿಲಿಗೆ ಟ್ಯಾನ್​ ಆಗಿದ್ದು ಎಂದು ಬರೆದುಕೊಂಡಿದ್ದಾರೆ.

ಸಾಗರವು ತುಂಬಾ ಆಳವಾಗಿದೆ ಮತ್ತು ಅಪಾಯಕಾರಿಯಾಗಿದೆ. ಪ್ರತಿಯೊಬ್ಬರೂ ಧುಮುಕಲು ಸಾಧ್ಯವಿಲ್ಲ. ಆದರೆ, ಸಾಹಸ ಮಾಡಿ ಧುಮುಕುವವರು ಸಂಪೂರ್ಣ ಹೊಸ ಜಗತ್ತನ್ನೇ ಅನ್ವೇಷಿಸುತ್ತಾರೆ. ಸಂಪೂರ್ಣ ಹೊಸ ಜೀವನವನ್ನು ಅನುಭವಿಸುತ್ತಾರೆ ಮತ್ತು ಅಂತಿಮವಾಗಿ ಅದರ ಆಳವು ಜ್ಞಾನವಾಗಿರುತ್ತದೆ ಮತ್ತು ಅದರ ಅಪಾಯವು ಉತ್ಸಾಹವಾಗಿ ಬದಲಾಗುತ್ತದೆ ಎಂದು ಸಮುದ್ರದಲ್ಲಿ ಈಜುತ್ತಿರುವ ವಿಡಿಯೋಗೆ ಅಡಿಬರವನ್ನು ಬರೆದುಕೊಂಡಿದ್ದಾರೆ.

ಸಂಯುಕ್ತಾ ಹಾಟ್​ ಫೋಟೋ ಸಿಕ್ಕಾಪಟ್ಟೆ ವೈರಲ್​ ಆಗಿದ್ದು, ನೆಟ್ಟಿಗರು ಕಾಮೆಂಟ್​ಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net