More

    ಕಾರಣ ಏನೇ ಇರಬಹುದು ನೈತಿಕ ಪೊಲೀಸ್​ ಗಿರಿ ಹಕ್ಕು ಯಾರಿಗೂ ಇಲ್ಲ: ಸಂಯುಕ್ತಾ ಟ್ವೀಟ್​ಗೆ ರಮ್ಯಾ ರೀಟ್ವೀಟ್​!

    ಬೆಂಗಳೂರು: ಪಾರ್ಕ್​ನಲ್ಲಿ ತುಂಡುಡುಗೆ ತೊಟ್ಟು ವ್ಯಾಯಾಮ ಮಾಡುತ್ತಿದ್ದ “ಕಿರಿಕ್” ನಟಿ ಸಂಯುಕ್ತಾ ಹಾಗೂ ಫ್ರೆಂಡ್ಸ್​ ವಿರುದ್ಧ ಕಾಂಗ್ರೆಸ್​ ನಾಯಕಿ ಕವಿತಾ ರೆಡ್ಡಿ ನಡೆದುಕೊಂಡ ರೀತಿಯನ್ನು ಮಾಜಿ ಸಂಸದೆ ಹಾಗೂ ನಟಿ ರಮ್ಯಾ ಖಂಡಿಸಿದ್ದಾರೆ.

    ಸಂಯುಕ್ತಾ ಮಾಡಿರುವ ಟ್ವೀಟ್​ಗೆ ರೀಟ್ವೀಟ್​ ಮಾಡಿರುವ ರಮ್ಯಾ, ಪೂರ್ತಿ ವಿಡಿಯೋವನ್ನು ನಾನು ನೋಡಿದ್ದೇನೆ. ಸಂಯುಕ್ತಾ ಮತ್ತು ಆಕೆಯ ಫ್ರೆಂಡ್ಸ್​ ಅನ್ನು ನಡೆಸಿಕೊಂಡ ರೀತಿ ನೋಡಿ ನನಗೆ ಶಾಕ್​ ಆಯಿತು. ಕಾರಣ ಏನೇ ಇರಬಹುದು ಆದರೆ, ನೈತಿಕ ಪೊಲೀಸ್​ ಗಿರಿ, ಇನ್ನೊಬ್ಬರನ್ನು ನಿಂದಿಸುವ ಹಕ್ಕು ಯಾರಿಗೂ ಇಲ್ಲ ಎಂದಿದ್ದಾರೆ.

    ಮತ್ತೊಂದು ಟ್ವೀಟ್​ನಲ್ಲಿ ಕವಿತಾ ರೆಡ್ಡಿ ಅವರು ಕ್ಷಮೆ ಕೇಳುವುದಾಗಲಿ ಅಥವಾ ಹೆಸರು ಕರೆಯುವುದನ್ನು ಸಹ ಮಾಡಿಲ್ಲ. ಆದರೆ, ಯಾರಾದರೊಬ್ಬರು ಸಂಯಮವನ್ನು ಹೊಂದಿರಬೇಕಿತ್ತು. ಮಹಿಳೆಯರು ಒಟ್ಟಿಗೆ ಬಂದರೆ ಮಾತ್ರ ದುರ್ಬಳಕೆಯ ವಿರುದ್ಧ ಹೋರಾಟವನ್ನು ಮಾಡಬಹುದು. ಈ ರೀತಿಯ ಘಟನೆಗಳು ಮತ್ತೆ ಸಂಭವಿಸಬಾರದೆಂದು ಹೇಳಿದ್ದಾರೆ.

    ಇದನ್ನೂ ಓದಿ: ಎಮ್ಮೆ ಸತ್ತಿದೆ ಎಂದು ಸುಳ್ಳು ಹೇಳಿ ಜೆಸಿಬಿ ತರಿಸಿಕೊಂಡು ಗಂಡನ ಶವ ಹೂಳಿದ ಕಿರಾತಕಿ!

    ಇದಕ್ಕೂ ಮುನ್ನ ಟ್ವೀಟ್​ ಮಾಡಿದ್ದ ಸಂಯುಕ್ತಾ ಈಗ ಏನಾಗುತ್ತಿದೆಯೋ ಅದು ದೇಶದ ಭವಿಷ್ಯದ ಪ್ರತಿಬಿಂಬ. ನಮ್ಮನ್ನು ಕವಿತಾ ರೆಡ್ಡಿ ನಿಂದಿಸಿದ್ದಾರೆ…ಅಪಹಾಸ್ಯ ಮಾಡಿದ್ದಾರೆ ಎಂದು ಟ್ವೀಟ್ ಮಾಡಿದ್ದರು.

    ಸಂಸದೆ ಶೋಭಾ ಬೆಂಬಲ
    ಶೋಭಾ ಕರಂದ್ಲಾಜೆ ಸಹ ಸಂಯುಕ್ತಾ ಹೆಗ್ಡೆಗೆ ಬೆಂಬಲ ಸೂಚಿಸಿ, ಹೀಗೆಲ್ಲ ನಡೆಸಿಕೊಂಡಿದ್ದು ನಿಜಕ್ಕೂ ದುರದೃಷ್ಟಕರ. ಇಂಥ ನೈತಿಕ ಪೊಲೀಸ್​ಗಿರಿಗೆಲ್ಲ ಅವಕಾಶವಿಲ್ಲ. ಸಂಯುಕ್ತಾ ಮತ್ತು ಅವರ ಸ್ನೇಹಿತರನ್ನು ನಿಂದಿಸಿ, ಹಲ್ಲೆ ಮಾಡಿದ ಕವಿತಾ ರೆಡ್ಡಿ ವಿರುದ್ಧ ಪ್ರಕರಣ ದಾಖಲಾಗಿ, ಶಿಕ್ಷೆ ನೀಡಬೇಕು ಎಂದು ಟ್ವೀಟ್ ಮಾಡಿದ್ದಾರೆ.

    ‘ನೈತಿಕ ಪೊಲೀಸ್​ಗಿರಿಗೆ ಅವಕಾಶವಿಲ್ಲ..’: ಸಂಯುಕ್ತಾ ಹೆಗ್ಡೆಗೆ ಶೋಭಾ ಕರಂದ್ಲಾಜೆ ಬೆಂಬಲ

    ಪಾರ್ಕ್​ನಲ್ಲಿ ಕಿರಿಕ್​ ನಟಿಯ ‘ತುಂಡುಡುಗೆ’ ಕಸರತ್ತು; ಉದ್ಯಾನದಲ್ಲೇ ಲಾಕ್​ ಮಾಡಿದ ಸಾರ್ವಜನಿಕರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts