ಎಮ್ಮೆ ಸತ್ತಿದೆ ಎಂದು ಸುಳ್ಳು ಹೇಳಿ ಜೆಸಿಬಿ ತರಿಸಿಕೊಂಡು ಗಂಡನ ಶವ ಹೂಳಿದ ಕಿರಾತಕಿ!

JCB
Published on

ಬೆಳಗಾವಿ: ಎಮ್ಮೆ ಸತ್ತಿದೆ ಎಂದು ಸುಳ್ಳು ಹೇಳಿ ಜೆಸಿಬಿ ತರಿಸಿಕೊಂಡ ಮಹಿಳೆಯೊಬ್ಬಳು ಗಂಡನ ಶವವನ್ನು ಹೂಳಿರುವ ಘಟನೆ ನಿಪ್ಪಾಣಿ ತಾಲೂಕಿನ ಹಂಚಿನಾಳ ಕೆ.ಎಸ್.ಗ್ರಾಮದಲ್ಲಿ ನಡೆದಿದೆ.

ಸಚಿನ್ ಸದಾಶಿವ ಭೋಪಳೆ (35) ಪತ್ನಿಯಿಂದಲೇ ಕೊಲೆಯಾದ ದುರ್ದೈವಿ. ಅನಿತಾ ಸಚಿನ್ ಭೋಪಳೆ(35) ಕೊಲೆ ಆರೋಪಿ. ಜೆಸಿಬಿ ತರಿಸಿ ರಾತ್ರೋರಾತ್ರಿ ಗಂಡನ ಶವವನ್ನು ಹೂತ್ತಿದ್ದಾಳೆ ಎಂಬ ಆರೋಪ ಕೇಳಿಬಂದಿದೆ.

ಗಂಡನ ಮಾನಸಿಕ ಮತ್ತು ದೈಹಿಕ ಕಿರುಕುಳಕ್ಕೆ ಬೇಸತ್ತು ಕೊಲೆ ಮಾಡಿದ್ದು, ಎಮ್ಮೆ ಸತ್ತಿದೆ ಎಂದು ನಾಟಕವಾಡಿ ಜೆಸಿಬಿ ತರಿಸಿಕೊಂಡು ಯಾರಿಗೂ ತಿಳಿಯದಂತೆ ಶವವನ್ನು ಹೂಳಲು ಪ್ರಯತ್ನಿಸಿದ್ದಾಳೆ. ತನ್ನ ಸಹೋದರರ ಜತೆ ಸೇರಿ ಕೃತ್ಯ ಎಸಗಿದ್ದಾಳೆನ್ನಲಾಗಿದೆ.

ಇದೀಗ ಆರೋಪಿಯ ಅಸಲಿಯತ್ತು ಬಯಲಾಗಿದ್ದು, ಪೊಲೀಸರು ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಹೂತಿದ್ದ ಶವ ಮತ್ತೆ ಹೊರತೆಗೆದಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ನಿಪ್ಪಾಣಿ ಠಾಣಾ ಪೊಲೀಸರು ತಲೆ ಮರೆಸಿಕೊಂಡಿರುವ ಪತ್ನಿ ಹಾಗೂ ಆಕೆಯ ಸಹೋದರರಿಗಾಗಿ ಬಲೆ ಬೀಸಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net