ಮಿಲನ ಬಯಸಿದಾಗ ಬಗೆಬಗೆ ಹಾಡು ಹೇಳುವ ಲಕ್ಷ ಕೆ.ಜಿ ತೂಕದ ನೀಲಿ ತಿಮಿಂಗಲ ಪತ್ತೆ!

bluewhale
Published on

ಸಿಡ್ನಿ: ಸಂಗಾತಿಯಿಂದ ಮಿಲನ ಬಯಸಿದಾಗ ಇವು ಸಿಳ್ಳೆಯ ಮೂಲಕ ಹಾಡು ಹೇಳುತ್ತವೆ, ಒಂದೇ ರೀತಿಯ ಹಾಡು ಕೇಳಿ ಸಂಗಾತಿಗೆ ಬೇಸರವಾಯಿತು ಎನ್ನಿಸಿದರೆ, ಸಿಳ್ಳೆ ಊದುವ ರೀತಿಯನ್ನು ಬದಲಿಸಿ ಬೇರೆ ಬೇರೆ ರೀತಿ ಹಾಡು ಹೇಳುತ್ತವೆ...

ಇದೇ ನೀಲಿ ತಿಮಿಂಗಲ. 80ಕ್ಕೂ ಅಧಿಕ ಪ್ರಭೇದಗಳು ತಿಮಿಂಗಲಗಳಲ್ಲಿ ಇದ್ದು, ಇವುಗಳ ಪೈಕಿ ಭಾರಿ ತೂಕದ ತಿಮಿಂಗಲ ಎಂದು ಪ್ರಸಿದ್ಧಿ ಪಡೆದಿರುವುದು ನೀಲಿ ತಿಮಿಂಗಲ, ಇವುಗಳ ನಾಲಗೆಯೇ ಆನೆಯಷ್ಟು ತೂಕ ತೂಗುತ್ತದಂತೆ!

ಇಂಥದ್ದೊಂದು ಅಪರೂಪದ ತಿಮಿಂಗಲವೀಗ ಅಳಿವಿನ ಅಂಚಿನಲ್ಲಿದೆ. ಆದರೆ ಕೆಲ ದಿನಗಳ ಹಿಂದೆ ಸಿಡ್ನಿಯ ಕರಾವಳಿಯಲ್ಲಿ ನೀಲಿ ತಿಮಿಂಗಲ ಕಾಣಿಸಿಕೊಂಡು ಅಚ್ಚರಿ ಮೂಡಿಸಿದೆ. ಒಂದು ಲಕ್ಷ ಕೆ.ಜಿಗೂ ಅಧಿಕ ಭಾರದ ತಿಮಿಂಗಲ ಇದು ಎನ್ನಲಾಗಿದೆ. ಕಳೆದ 100 ವರ್ಷಗಳಲ್ಲಿ ಈ ಗಾತ್ರದ ತಿಮಿಂಗಲ ಇದು ಮೂರನೆಯ ಬಾರಿ ಪತ್ತೆಯಾಗಿರುವುದು. ಆದರೆ ಹಿಂದೆ ಎರಡು ಬಾರಿ ಪತ್ತೆಯಾಗಿರುವ ತಿಮಿಂಗಲಗಳಿಗಿಂತಲೂ ಇದು ಅಧಿಕ ತೂಗುತ್ತದೆ ಎಂದಿದ್ದಾರೆ ತಜ್ಞರು.

ಇದನ್ನೂ ಓದಿ: ಸ್ತ್ರೀಲೋಲ, ಮದ್ಯವ್ಯಸನಿ ಸಂಸದ ಪತಿಗೆ ಶಿಕ್ಷೆ ನೀಡಿ: ನಟಿಯಿಂದ ಕೇಸ್‌ ದಾಖಲು- ದೂರಲ್ಲಿ ಗಂಭೀರ ಆರೋಪ

ನ್ಯೂ ಸೌತ್ ವೇಲ್ಸ್ ರಾಷ್ಟ್ರೀಯ ಉದ್ಯಾನಗಳು ಮತ್ತು ವನ್ಯಜೀವಿ ಸೇವೆಯ (ಎನ್‌ಪಿಡಬ್ಲ್ಯುಎಸ್) ಅಧಿಕಾರಿಗಳ ಪ್ರಕಾರ, ತಿಮಿಂಗಿಲವು 25 ಮೀಟರ್‌ಗಿಂತ (82 ಅಡಿ) ಹೆಚ್ಚು ಉದ್ದವಿದೆ ಮತ್ತು 100 ಟನ್‌ಗಳಷ್ಟು (ಒಂದು ಲಕ್ಷ ಕೆಜಿ) ತೂಕವಿರಬಹುದು.

ಅತಿ ದೊಡ್ಡ ಸಸ್ತನಿ ಎಂದೇ ಪ್ರಸಿದ್ಧಿ ಪಡೆದಿರುವ ನೀಲಿ ತಿಮಿಂಗಲದ ಜೀವನವೂ ರೋಚಕವಾಗಿದೆ. ಕೆಲವೊಮ್ಮೆ ಸಾಗರದಡಿಗೆ ಬಂದು ಸಾಯುವ ಈ ಸಸ್ತನಿಗಳು ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುತ್ತವೆ ಎನ್ನುತ್ತಾರೆ ತಜ್ಞರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net