More

    ಸ್ತ್ರೀಲೋಲ, ಮದ್ಯವ್ಯಸನಿ ಸಂಸದ ಪತಿಗೆ ಶಿಕ್ಷೆ ನೀಡಿ: ನಟಿಯಿಂದ ಕೇಸ್‌ ದಾಖಲು- ದೂರಲ್ಲಿ ಗಂಭೀರ ಆರೋಪ

    ಕಟಕ್: ಒಡಿಶಾದ ಆಡಳಿತ ಪಕ್ಷ ಬಿಜು ಜನತಾದಳದ (ಬಿಜೆಡಿ) ಸಂಸದ ಅನುಭವ್ ಮೊಹಂತಿ ಅವರ ಮೇಲೆ ಕೌಟುಂಬಿಕ ದೌರ್ಜನ್ಯದ ಆರೋಪ ಬಂದಿದೆ. ಇವರ ವಿರುದ್ಧ ಪತ್ನಿ ಕೇಸು ದಾಖಲು ಮಾಡಿದ್ದಾರೆ.

    ಒಡಿಯಾ ಚಲನಚಿತ್ರ ನಟಿ ವರ್ಷಾ ಪ್ರಿಯದರ್ಶಿನಿ ಅವರು ತಮ್ಮ ಪತಿ ವಿರುದ್ಧ ಕೌಟುಂಬಿಕ ದೌರ್ಜನ್ಯ ಮಾಡಿದ್ದು ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ಮೊಹಂತಿ ಕೂಡ ಚಿತ್ರನಟ. ಇವರ ವಿವಾಹ 2014ರಲ್ಲಿ ನಡೆದಿದೆ.

    ಪತ್ನಿ ವರ್ಷಾ ಸಬ್ ಡಿವಿಶನಲ್ ಜ್ಯುಡಿಶಿಯಲ್ ಮ್ಯಾಜಿಸ್ಟ್ರೇಟ್ ಕೋರ್ಟ‌ನಲ್ಲಿ ದೂರು ದಾಖಲಿಸಿದ್ದಾರೆ. ಮೊಹಂತಿ ವಿರುದ್ಧ ಕೌಟುಂಬಿಕ ಹಿಂಸಾಚಾರ ಆರೋಪದ ಮೇಲೆ ಮಹಿಳೆಯರ ಸಂರಕ್ಷಣಾ ಕಾಯ್ದೆಯ ಸೆಕ್ಷನ್ 12 ಅಡಿಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ.

    ತಮ್ಮ ಪತಿ ಮದ್ಯಪಾನ ವ್ಯಸನಿ. ತಮ್ಮ ಸ್ನೇಹಿತರ ಜತೆಗೂಡಿ ಬೆಡ್‌ರೂಮಿನಲ್ಲಿಯೇ ಮದ್ಯಪಾನ ಸೇವನೆ ಮಾಡುತ್ತಾರೆ. ಅವರು ಸ್ತ್ರೀಲೋಲ ಕೂಡ. ರಾತ್ರಿ ಅವೇಳೆಯಲ್ಲಿ ಮನೆಗೆ ಬರುತ್ತಾರೆ. ರಾತ್ರಿ ಊಟ ಮಾಡಲು ಅವರಿಗಾಗಿ ಕಾಯುತ್ತಿದ್ದರೆ, ಯಾವಾಗ ಬರುತ್ತಾರೋ ಹೇಳಲಾಗದು. ಅವರು ಮನೆಗೆ ಬರುವ ವೇಳೆ ನಶೆಯಲ್ಲಿ ಇರುತ್ತಾರೆ. ಮೈಮೇಲೆ ಜ್ಞಾನವೇ ಇರುವುದಿಲ್ಲ ಎಂದು ಆರೋಪಿಸಿದ್ದಾರೆ.  ತಾವು ಕಣ್ಣೀರಿನಲ್ಲಿಯೇ ಕೈತೊಳೆಯುವಂತಾಗಿದೆ ಎಂದಿದ್ದಾರೆ. ಈ  ಹಿನ್ನೆಲೆಯಲ್ಲಿ ಪತಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಅವರು ಕೋರಿದ್ದಾರೆ.

    ಇದನ್ನೂ ಓದಿ: ಹಣ್ಣುಗಳಿಂದ ಸಂಗೀತ ಹೊರಹೊಮ್ಮುವುದೆಂದರೆ ನಂಬುವಿರಾ? ಇಲ್ಲಿದೆ ನೋಡಿ ಅಚ್ಚರಿ…

    ತಿಂಗಳ ಬಾಡಿಗೆ 20 ಸಾವಿರ ರೂಪಾಯಿ, ನಿರ್ವಹಣಾ ವೆಚ್ಚ 50 ಸಾವಿರ ರೂಪಾಯಿ, ನಿರ್ವಹಣಾ ವೆಚ್ಚ 13 ಕೋಟಿ ರೂಪಾಯಿ ಹಾಗೂ ಇತರ ವೆಚ್ಚದ ರೂಪದಲ್ಲಿ 2 ಕೋಟಿ ರೂಪಾಯಿ ಪರಿಹಾರ ನೀಡಲು ತಮ್ಮ ಪತಿಗೆ ಆದೇಶಿಸುವಂತೆ ವರ್ಷಾ ಕೋರ್ಟ್‌ ಅನ್ನು ಕೋರಿದ್ದಾರೆ. .ಇದರ ವಿಚಾರಣೆ ನಾಳೆ (ಸೆ.7) ನಡೆಯಲಿರುವ ಸಾಧ್ಯೆ ಇದೆ. ಈ ಕುರಿತು ಮಾಹಿತಿ ನೀಡಿರುವ ವರ್ಷಾ ಪರ ವಕೀಲ ಆರ್‌.ಕೆ.ರಾಥ್ ನ್ಯಾಯಾಯವು ಸೋಮವಾರ ಪ್ರಾಥಮಿಕ ವಿಚಾರಣೆಗೆ ನಿಗದಿಪಡಿಸಿದೆ ಎಂದಿದ್ದಾರೆ.

    ಆದರೆ ತಮಗೆ ಕೋರ್ಟ್‌ನಿಂದ ಯಾವುದೇ ರೀತಿಯ ನೋಟಿಸ್‌ ಬಂದಿಲ್ಲ, ಈ ಬಗ್ಗೆ ನನಗೆ ಮಾಹಿತಿ ಇಲ್ಲ. ನೋಟಿಸ್‌ ಬಂದರೆ ಮುಂದಿನ ಕ್ರಮ ತೆಗೆದುಕೊಳ್ಳುವೆ ಎಂದು ಅನುಭವ್‌ ಮೊಹಂತಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಮೊಹಂತಿ ಅವರು ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರ ಆಪ್ತರಾಗಿದ್ದು, ಕೌಟುಂಬಿಕ ದೌರ್ಜನ್ಯದಂಥ ಗಂಭೀರ ಆರೋಪ ಎದುರಾಗಿರುವ ಕಾರಣ, ಡಳಿತಾರೂಢ ಬಿಜೆಡಿ ತೀವ್ರ ಮುಜುಗರಕ್ಕೀಡಾಗಿದೆ.

    ಲಾಕ್‌ಡೌನ್‌ ಸಂದರ್ಭದಲ್ಲಿ ಎಲ್ಲರೂ ಮನೆಯಲ್ಲಿರಬೇಕಾದ ಪರಿಸ್ಥಿತಿ ಇರುವ ಕಾಣ, ಕೌಟುಂಬಿಕ ದೌರ್ಜನ್ಯಗಳು ಆಗದಂತೆ ಎಚ್ಚರ ವಹಿಸಿಬೇಕು, ಈ ನಿಟ್ಟಿನಲ್ಲಿ ಎಲ್ಲರೂ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು. ದೌರ್ಜನ್ಯ ಎಸಗುವವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಪಟ್ನಾಯಕ್‌ ಎಚ್ಚರಿಸಿದ್ದ ಬೆನ್ನಲ್ಲೇ, ಅವರದೇ ಪಕ್ಷದ ಸಂಸದನ ವಿರುದ್ಧ ಈ ಆರೋಪ ಕೇಳಿಬಂದಿದೆ.

    ಓರ್ವ ಯುವತಿಗಾಗಿ 535 ಕಿ.ಮೀ. ಚಲಿಸಿತು ರೈಲು- ಅಧಿಕಾರಿಗಳು, ಸಿಬ್ಬಂದಿ ಸುಸ್ತೋ ಸುಸ್ತು!

    ಪುಟ್ಟ ತೈವಾನ್‌ನಿಂದ ಚೀನಾಕ್ಕಾಯ್ತಾ ಮುಖಭಂಗ? ಜಾಲತಾಣಗಳಲ್ಲಿ ಕೋಲಾಹಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts