More

    ಕೈತುಂಬಾ ಸಂಪಾದನೆ ಮಾಡುವ ನೀನೇ ಇಷ್ಟು ದೌರ್ಜನ್ಯ ಸಹಿಸಿಕೊಂಡರೆ ಉಳಿದವರ ಗತಿಯೇನಮ್ಮಾ?

    ಕೈತುಂಬಾ ಸಂಪಾದನೆ ಮಾಡುವ ನೀನೇ ಇಷ್ಟು ದೌರ್ಜನ್ಯ ಸಹಿಸಿಕೊಂಡರೆ ಉಳಿದವರ ಗತಿಯೇನಮ್ಮಾ?ನಾನು ವಿದ್ಯಾವಂತೆ ಹಾಗೂ ಒಳ್ಳೆಯ ಕೆಲಸದಲ್ಲಿ ಇದ್ದೇನೆ. ನಮ್ಮ ಮದುವೆ ಆಗಿ ನಾಲ್ಕು ವರ್ಷ ಆಗಿದೆ. ನನ್ನ ಗಂಡನಿಗೂ ಒಳ್ಳೆಯ ಕೆಲಸವಿದೆ. ನನ್ನ ಗಂಡ ಮದುವೆ ಆದಾಗಿಲಿನಿಂದಲೂ ನನ್ನನ್ನು ಹೀಯಾಳಿಸುತ್ತಾ, ಹೊಡೆಯುತ್ತಾ ಬಡೆಯುತ್ತಾ, ಅವಾಚ್ಯ ಶಬ್ದಗಳಲ್ಲಿ ಬಯ್ಯುತ್ತಾ ಬಂದಿದ್ದಾರೆ. ನನ್ನ ಸಂಪಾದನೆಯ ಹಣವನ್ನೆಲ್ಲಾ ಅವರ ಕೈಗೇ ಕೊಟ್ಟು ಬಸ್ಸು ಛಾರ್ಜಿಗೆ ಇಪ್ಪತ್ತು ರೂಪಾಯಿ ಕಾಡಿ ಬೇಡಿ ತೆಗೆದುಕೊಂಡು ಹೋಗಬೇಕು. ನಾನು ಅವರ ತಾಯಿಯ ಜೊತೆ ಹಳ್ಳಿಯಲ್ಲಿ ವಾಸ ಮಾಡಬೇಕು. ಮನೆ ಕೆಲಸವನ್ನೂ ಪೂರಾ ನಾನೇ ಮಾಡಬೇಕು. ಅತ್ತೆಯೂ ತುಂಬಾ ಕೆಟ್ಟ ಮಾತುಗಳಿಂದ ಬಯ್ಯುತ್ತಾರೆ. ಮೊನ್ನೆ ನನ್ನ ಗಂಡ ತುಂಬಾ ಹೊಡೆದದ್ದರಿಂದ ತವರಿಗೆ ಬಂದಿದ್ದೇನೆ.

    ಈಗ ದಿನಾ ಫೋನು ಮಾಡಿ ಅವರೂ ಅವರ ತಾಯಿಯೂ ಮನೆಗೆ ಬಂದು ಬೀಳುತ್ತೀಯೋ ಇಲ್ಲವೋ , ನಿನ್ನ ಮನೆಯವರ ಮಾನ ಹರಾಜು ಮಾಡುತ್ತೇವೆ ಎಂದು ಹೆದರಿಸುತ್ತಿದ್ದಾರೆ. ನಮ್ಮ ತಂದೆ ತಾಯಿ ಕುಟುಂಬದ ಮರ್ಯಾದೆಗೆ ಹೆದರಿ ಗಂಡನ ಮನೆಯಲ್ಲೇ ಹೊಂದಿಕೊಂಡು ಹೋಗು ಎನ್ನುತ್ತಿದ್ದಾರೆ. ನನಗೆ ಜೀವನದಲ್ಲಿ ಉತ್ಸಾಹವೇ ಇಲ್ಲದಂತೆ ಆಗಿದೆ. ಏನಾದರೂ ಒಳ್ಳೆಯ ಸಲಹೆ ಕೊಡಿ.

    ಉತ್ತರ: ವಿದ್ಯಾವಂತರಾಗಿದ್ದು, ಒಳ್ಳೆಯ ಕೆಲಸದಲ್ಲಿ ಇರುವ ನಿಮ್ಮಂತಹ ಹೆಣ್ಣು ಮಕ್ಕಳೇ ಗಂಡ ಮತ್ತು ಅವರ ಮನೆಯವರು ನಿಮ್ಮ ಮೇಲೆ ಕೌಟುಂಬಿಕ ಹಿಂಸೆ ಮಾಡಿದರೂ ಸಹಿಸಿಕೊಂಡು ಬಂದರೆ ಇನ್ನು ಅಮಾಯಕ ಹೆಣ್ಣು ಮಕ್ಕಳ ಗತಿ ಏನಾಗ ಬೇಕು. ಮದುವೆಯಾದ ಮಾತ್ರಕ್ಕೆ ಹೆಂಡತಿಯನ್ನು ಬಯ್ಯುವ ಹೊಡೆಯುವ ಅಧಿಕಾರ ಬರುವುದಿಲ್ಲ. ಧೈರ್ಯವಾಗಿ ನಿಮ್ಮ ಪತಿಯ ಮತ್ತು ಅವರ ತಾಯಿಯ ವಿರುದ್ಧ ಪೋಲೀಸು ಠಾಣೆಯಲ್ಲಿ ದೂರು ಸಲ್ಲಿಸಿ.

    ಕೌಟುಂಬಿಕ ಹಿಂಸೆಯಿಂದ ಮಹಿಳೆಯರನ್ನು ರಕ್ಷಣೆ ಮಾಡುವ ಕಾನೂನಿನ ಕೆಳಗೆ ಪ್ರಕರಣ ದಾಖಲಿಸಿ. ನಿಮ್ಮ ತವರಿನವರು ನಿಮಗೆ ಮಾನಸಿಕವಾಗಿಯಾದರೂ ಸಹಾಯ ಕೊಡಬೇಕು. ಅವರು ಒಪ್ಪದಿದ್ದರೂ ನೀವು ಹೊಡೆತ ಬಡೆತ ಮಾಡುವ ಅವ್ಯಾಚ್ಯ ಶಬ್ದಗಳಿಂದ ಬಯ್ಯುವ ಗಂಡನ ಜೊತೆ ಸಂಸಾರ ಮಾಡಬೇಕಾಗಿಲ್ಲ. ನಿಮ್ಮ ಪತಿಯ ದೌರ್ಜನ್ಯವನ್ನು ಸಹಿಸಿಕೊಂಡು ಹೋದರೆ ನೀವು ಸ್ತ್ರೀಕುಲಕ್ಕೇ ಅವಮಾನ ಮಾಡಿದಂತೆ ಆಗುತ್ತದೆ. ನಾಯಿ ಬೆಕ್ಕನ್ನೂ ಹೊಡೆಯಬಾರದು ಎನ್ನುವ ಚಿಂತನೆ ಇರುವ ಈ ಕಾಲದಲ್ಲಿ ಹೆಂಡತಿಯನ್ನು ಹೊಡೆಯುವುದನ್ನು ಸಹಿಸಿಕೊಂಡು ಬದುಕಲೇ ಬಾರದು.ನಿಮ್ಮ ಕಾಲಿನ ಮೇಲೆ ನೀವು ನಿಲ್ಲುವ ಸಾಮರ್ಥ್ಯ ನಿಮಗಿದೆ. ಧೈರ್ಯವಾಗಿ ಕಾನೂನು ಕ್ರಮ ಜರುಗಿಸಿ.

    ಮಾತುಮಾತಿಗೂ ಕೇಸ್‌ ಹಾಕಿ ಪಾಪರ್‌ ಮಾಡ್ತೇನೆ ಎಂತಿದ್ದಾಳೆ ಹೆಂಡ್ತಿ: ಅವಳ ವಿರುದ್ಧ ನಾನು ಏನು ಮಾಡಬಹುದು?

    ನನ್ನ ಮಗುವನ್ನು ನೋಡಲು ಪತ್ನಿ ಬಿಡುತ್ತಿಲ್ಲ- ಕೋರ್ಟ್‌ಗೆ ಹೋಗಬಹುದಾ? ಹೋಗದೇ ಬಗೆಹರಿಸಿಕೊಳ್ಳಬಹುದಾ?

    ಗಂಡ ಬದುಕಿರುವಾಗಲೇ ಪತ್ನಿ ಆಸ್ತಿಯ ಪಾಲು ಕೇಳುವಂತಿಲ್ಲ ಎನ್ನೋದು ನಿಜನಾ? ಕಾನೂನು ಏನು ಹೇಳುತ್ತದೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts