More

    ನನ್ನ ಮಗುವನ್ನು ನೋಡಲು ಪತ್ನಿ ಬಿಡುತ್ತಿಲ್ಲ- ಕೋರ್ಟ್‌ಗೆ ಹೋಗಬಹುದಾ? ಹೋಗದೇ ಬಗೆಹರಿಸಿಕೊಳ್ಳಬಹುದಾ?

    ನನ್ನ ಮಗುವನ್ನು ನೋಡಲು ಪತ್ನಿ ಬಿಡುತ್ತಿಲ್ಲ- ಕೋರ್ಟ್‌ಗೆ ಹೋಗಬಹುದಾ? ಹೋಗದೇ ಬಗೆಹರಿಸಿಕೊಳ್ಳಬಹುದಾ?ನನ್ನ ಮಗಳನ್ನು ನನ್ನ ಹೆಂಡತಿಯೇ ಇಟ್ಟುಕೊಂಡಿದ್ದಾಳೆ. ನಮ್ಮ ಮನೆಗೂ ಬರುತ್ತಿಲ್ಲ. ನನ್ನನ್ನೂ ಅವಳ ತವರು ಮನೆಗೆ ಹೋದರೆ ಒಳಗೆ ಸೇರಿಸುತ್ತಿಲ್ಲ. ಮಗಳಿಗೆ ಈಗ ಎರಡು ವರ್ಷ. ಕೋರ್ಟ್‌ಗೆ ಹೋದರೆ ನನಗೆ ನ್ಯಾಯ ಸಿಗುತ್ತಾ? ಕೋರ್ಟ್‌ ಅಲೆದಾಟವಿಲ್ಲದೇ ನಾನು ಮಗಳನ್ನು ನೋಡಲು ಏನಾದರೂ ಉಪಾಯವಿದೆಯೇ ತಿಳಿಸಿ.

    ಉತ್ತರ: ಸಾಮಾನ್ಯವಾಗಿ ಐದು ವರ್ಷಗಳ ಒಳಗಿನ ವಯಸ್ಸಿನ ಮಗುವಿನ ಕಸ್ಟಡಿಯನ್ನು ತಾಯಿಗೇ ಕೊಡುತ್ತಾರೆ .ನೀವು ನ್ಯಾಯಾಲಯದಲ್ಲಿ ಜಿ. ಅಂಡ್‌. ಡಬ್ಲ್ಯೂಸಿ ಪ್ರಕರಣ ದಾಖಲಿಸಿ, ಅದರಲ್ಲಿ ಮಧ್ಯಂತರ ಅರ್ಜಿ ಹಾಕಿ. ತಿಂಗಳಲ್ಲಿ ಇಷ್ಟು ಬಾರಿ ನನಗೆ ಯಾವುದಾದರೂ ತಟಸ್ಥ ಸ್ಥಳದಲ್ಲಿ ಮಗುವನ್ನು ನೋಡಲು , ಅದರೊಡನೆ ಕಾಲ ಕಳೆಯಲು ಅವಕಾಶ ಮಾಡಿಕೊಡಿ ಎಂದು ಅರ್ಜಿ ಹಾಕಿ.

    ನ್ಯಾಯಾಲಯ ನಿಮ್ಮ ಅರ್ಜಿಯನ್ನು ಸಾಮಾನ್ಯವಾಗಿ ಪುರಸ್ಕರಿಸುತ್ತದೆ. ಕೋರ್ಟಿಗೆ ಹೋಗುವುದು ಬೇಡ ಎನ್ನಿಸಿದರೆ, ನಿಮ್ಮ ತಾಲ್ಲೂಕಿನ ನ್ಯಾಯಾಲಯದಲ್ಲಿರುವ ʼಮಧ್ಯಸ್ಥಿಕಾ ಕೇಂದ್ರಕ್ಕೆʼ ನಿಮ್ಮಿಬ್ಬರ ಮಧ್ಯೆ ಇರುವ ಸಮಸ್ಯೆಯನ್ನು , ʼವ್ಯಾಜ್ಯ ಪೂರ್ವ ಮಧ್ಯಸ್ಥಿಕೆʼ ಮೂಲಕ ಪರಿಹರಿಸಿಕೊಡಿ ಎಂದು ಅರ್ಜಿ ಸಲ್ಲಿಸಿ. ಅಲ್ಲಿ ಇಬ್ಬರನ್ನೂ ಕರೆಯಿಸಿ ಮಾತಾಡಿ, ನಿಮ್ಮ ಸಮಸ್ಯೆ ಪರಿಹಾರವಾಗಲು ಸಹಾಯ ಮಾಡುತ್ತಾರೆ. ಆಗಲೂ ಪರಿಹಾರ ಸಿಗದಿದ್ದರೆ , ಆ ನಂತರ ಕೋರ್ಟಿನಲ್ಲಿ ಪ್ರಕರಣ ದಾಖಲಿಸಿ.

    ಕಾನೂನಿಗೆ ಸಂಬಂಧಿಸಿದ ಇತರ ಪ್ರಶ್ನೋತ್ತರಗಳಿಗಾಗಿ ಈ ಲಿಂಕ್​ ಕ್ಲಿಕ್ಕಿಸಿ:

    https://www.vijayavani.net/category/%e0%b2%a8%e0%b3%8d%e0%b2%af%e0%b2%be%e0%b2%af%e0%b2%a6%e0%b3%87%e0%b2%b5%e0%b2%a4%e0%b3%86/

    ಅಮ್ಮನಿಗೆ ತವರಿನಿಂದ ಬಂದ ಆಸ್ತಿಯಲ್ಲಿ ಮಕ್ಕಳಿಗೆ ಯಾವಾಗ, ಎಷ್ಟು ಭಾಗ ಪಾಲು ಸಿಗುತ್ತದೆ?

    ಗಂಡ ಬದುಕಿರುವಾಗಲೇ ಪತ್ನಿ ಆಸ್ತಿಯ ಪಾಲು ಕೇಳುವಂತಿಲ್ಲ ಎನ್ನೋದು ನಿಜನಾ? ಕಾನೂನು ಏನು ಹೇಳುತ್ತದೆ?

    ಮೊದಲ ಮದುವೆ ಮುಚ್ಚಿಟ್ಟು ವಿವಾಹವಾಗಿದ್ದರೂ ಇಂಥ ಕೇಸ್‌ಗಳಲ್ಲಿ ಅದು ತಪ್ಪೂ ಅಲ್ಲ, ಪತ್ನಿಗೆ ಆಸ್ತಿನೂ ಸಿಗುತ್ತೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts