ಆಂಧ್ರದ ಮಾಜಿ ಸಿಎಂ ಎನ್​. ಚಂದ್ರಬಾಬು ನಾಯ್ಡು ಪ್ರಯಾಣಿಸುತ್ತಿದ್ದ ಕಾರು ಅಪಘಾತ

Car Accident
Published on

ವಿಜಯವಾಡ: ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್​. ಚಂದ್ರಬಾಬು ನಾಯ್ಡು ಅವರು ಭೀಕರ ರಸ್ತೆ ಅಪಘಾತದಲ್ಲಿ ಸ್ವಲ್ಪದರಲ್ಲೇ ಬಚಾವ್​ ಆಗಿರುವ ಘಟನೆ ಶನಿವಾರ ನಡೆದಿದೆ.

ನಾಯ್ಡು ಅವರು ವಿಜಯವಾಡದಿಂದ ಹೈದರಾಬಾದ್​ಗೆ ತೆರಳುವಾಗ ಘಟನೆ ನಡೆದಿದೆ. ಮಾರ್ಗ ಮಧ್ಯೆ ಬಿಡಾಡಿ ದನವೊಂದು ದಿಢೀರನೆ ರಸ್ತೆಗೆ ಅಡ್ಡಲಾಗಿ ಬಂದಿದ್ದರಿಂದ ದನಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಎಸ್ಕಾರ್ಟ್​ ವಾಹನದ ಚಾಲಕ ತಕ್ಷಣ ಬ್ರೇಕ್​ ಹಾಕಿದ್ದಾರೆ.

ಈ ವೇಳೆ ಹಿಂಬದಿಯಿದ್ದ ಬೆಂಗಾವಲು ವಾಹನ ಒಂದಕ್ಕೊಂದು ಡಿಕ್ಕಿ ಹೊಡೆದಿದ್ದು, ಕಾರಿನ ಬಾನೆಟ್​ ಸಂಪೂರ್ಣ ಜಖಂಗೊಂಡಿರುವುದನ್ನು ಮೇಲಿನ ಚಿತ್ರದಲ್ಲಿ ಕಾಣಬಹುದಾಗಿದೆ.

ಅದೃಷ್ಟವಶಾತ್​ ನಾಯ್ಡು ಅವರು ಯಾವುದೇ ಗಾಯಗಳಾಗದೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net