ಶಾರುಖ್ ಖಾನ್ ಸೇರಿದಂತೆ ಮೂವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ ಸಮೀರ್ ವಾಂಖೆಡೆ| Bollywood

untitled-design-2025-09-25t171448606-68d52b4d4f67b
Published on

Bollywood: ಆರ್ಯನ್ ಖಾನ್ ನಿರ್ದೇಶನದ ವೆಬ್ ಸರಣಿಯಲ್ಲಿ ಪ್ರಚಾರವಾದ ಪಾತ್ರದ ಬಗ್ಗೆ ನೆಟ್‌ಫ್ಲಿಕ್ಸ್ ಸರಣಿ, ದಿ ಬ್ಯಾ***ಡ್ಸ್ಆಫ್ ಬಾಲಿವುಡ್ ಮತ್ತು ಶಾರುಖ್ ಖಾನ್ ವಿರುದ್ಧ ಮಾದಕವಸ್ತು ನಿಯಂತ್ರಣ ಬ್ಯೂರೋದ(ಎನ್​ಸಿಬಿ) ಮಾಜಿ ಅಧಿಕಾರಿ ಸಮೀರ್ ವಾಂಖೆಡೆ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ಆರೋಪ ಏನು?

ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಒಳಗೊಂಡ ಉನ್ನತ ಮಟ್ಟದ ಮಾದಕವಸ್ತು ತನಿಖೆಯ ನೇತೃತ್ವ ವಹಿಸಿದ್ದ ವಾಂಖೆಡೆ, ಈ ಸರಣಿಯನ್ನು ಉದ್ದೇಶಪೂರ್ವಕವಾಗಿ ಕಲ್ಪಿಸಲಾಗಿದ್ದು, ಅವರ ವೈಯಕ್ತಿಕ ಮತ್ತು ವೃತ್ತಿಪರ ಖ್ಯಾತಿಗೆ ಕಳಂಕ ತರುವ ಉದ್ದೇಶದಿಂದ ನಿರ್ಮಿಸಲಾಗಿದೆ ಎಂದು ಆರೋಪಿಸಿದ್ದಾರೆ.

ಬೇಡಿಕೆ ಇಟ್ಟ ಪರಿಹಾರ ಎಷ್ಟು?

ನೆಟ್‌ಫ್ಲಿಕ್ಸ್ ಸರಣಿ "ಬ್ಯಾ***ಡ್ಸ್  ಆಫ್ ಬಾಲಿವುಡ್" ನಲ್ಲಿ ಪ್ರಸಾರವಾದ ಸಂಚಿಕೆ "ಸುಳ್ಳು, ದುರುದ್ದೇಶಪೂರಿತ ಮತ್ತು ಮಾನನಷ್ಟಕರ" ಚಿತ್ರಣವಾಗಿದೆ ಎಂದು ಆರೋಪಿಸಿದ ವಾಂಖೆಡೆ 2 ಕೋಟಿ ರೂ.ಗಳ ಪರಿಹಾರವನ್ನು ಕೋರಿದ್ದು, ಅದನ್ನು ಕ್ಯಾನ್ಸರ್​ ರೋಗಿಗಳ ಚಿಕಿತ್ಸೆಗಾಗಿ ಟಾಟಾ ಮೆಮೋರಿಯಲ್ ಆಸ್ಪತ್ರೆಗೆ ದೇಣಿಗೆ ನೀಡುವುದಾಗಿ ತಿಳಿಸಿದ್ದಾರೆ.

ಸಮೀರ್​ ಹೇಳಿಕೆ ಏನು

ರೆಡ್ ಚಿಲ್ಲೀಸ್ ನಿರ್ಮಿಸಿದ ಮತ್ತು ನೆಟ್‌ಫ್ಲಿಕ್ಸ್ ತನ್ನ ದೂರದರ್ಶನ ಸರಣಿಯಾದ 'ದಿ ಬ್ಯಾ***ಡ್ಸ್ ಆಫ್ ಬಾಲಿವುಡ್' ನ ಭಾಗವಾಗಿ ಪ್ರಸಾರ ಮಾಡಿದ ಸಂಚಿಕೆಯು ಸುಳ್ಳು, ದುರುದ್ದೇಶಪೂರಿತ ಮತ್ತು ಮಾನನಷ್ಟಕರ ವಿಡಿಯೋದಿಂದ ನಾನು ನೊಂದಿದ್ದೇನೆ. ಈ ಸರಣಿಯು ಮಾದಕವಸ್ತು ವಿರೋಧಿ ಜಾರಿ ಸಂಸ್ಥೆಗಳ ತಪ್ಪುದಾರಿಗೆಳೆಯುವ ಮತ್ತು ನಕರಾತ್ಮಕ ಚಿತ್ರಣವನ್ನು ಪ್ರಸಾರ ಮಾಡುತ್ತಿದೆ. ಇದರಿಂದ ಕಾನೂನು ಜಾರಿ ಸಂಸ್ಥೆಗಳ ಮೇಲಿನ ಸಾರ್ವಜನಿಕರ ವಿಶ್ವಾಸ ಕುಸಿಯುತ್ತಿದೆ. ಇನ್ನು ಈ ಸರಣಿಯು ನನ್ನ ಹೆಸರಿನ ಖ್ಯಾತಿಗೆ ಕಳಂಕ ತರುವ ಉದ್ದೇಶದಿಂದ ಕಾರ್ಯಗತಗೊಳಿಸಲಾಗಿದೆ ಎಂದು ವಾಂಖೆಡೆ ಹೇಳಿಕೆ ನೀಡಿದ್ದಾರೆ.

ಸರಣಿಯಲ್ಲಿರುವುದೇನು?

ದಿ ಬ್ಯಾ***ಡ್ಸ್ಆಫ್ ಬಾಲಿವುಡ್ ನ ಮೊದಲ ಕಂತಿನಲ್ಲಿ, ಸಮೀರ್ ವಾಂಖೆಡೆ ಅವರಿಂದ ಹೆಚ್ಚು ಪ್ರೇರಿತವಾದ ಪಾತ್ರವೊಂದು ಬಾಲಿವುಡ್ ಪಾರ್ಟಿಯ ಹೊರಗೆ ಬಂದು ಡ್ರಗ್ಸ್​ ಸೇವಿಸುತ್ತಿರುವಂತ ಜನರನ್ನು ಹುಡುಕುತ್ತಿರುವ ದೃಶ್ಯ ಬಿಡುಗಡೆಯಾಗಿದ್ದು, ಇದಕ್ಕೆ ವ್ಯಾಪಕವಾದಂತಹ ಕಮೆಂಟ್​ಗಳು ಬಂದಿವೆ.

ಭಾರತದ ರಾಷ್ಟ್ರೀಯ ಲಾಂಛನದ ಭಾಗವಾಗಿರುವ ಸತ್ಯಮೇವ ಜಯತೇ ಎಂಬ ರಾಷ್ಟ್ರೀಯ ಘೋಷಣೆಯನ್ನು ಉಚ್ಚರಿಸಿದ ತಕ್ಷಣ, ಪಾತ್ರವೊಂದು ಅಶ್ಲೀಲ ಸನ್ನೆ ಮಾಡುವ ದೃಶ್ಯದ ಬಗ್ಗೆ ಅರ್ಜಿಯು ಆಕ್ಷೇಪಣೆಯನ್ನು ಎತ್ತಿ ತೋರಿಸಿದೆ. ಈ ಕೃತ್ಯವು 1971 ರ ರಾಷ್ಟ್ರೀಯ ಗೌರವಕ್ಕೆ ಅವಮಾನಗಳ ತಡೆಗಟ್ಟುವಿಕೆ ಕಾಯ್ದೆಯ ಗಂಭೀರ ಉಲ್ಲಂಘನೆಯಾಗಿದೆ ಮತ್ತು ಭಾರತೀಯ ಕಾನೂನಿನ ಅಡಿಯಲ್ಲಿ ಶಿಕ್ಷಾರ್ಹವಾಗಿದೆ ಎಂದಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net