

ರಾಯಚೂರು ನಗರದ ಮಹಾನಗರ ಪಾಲಿಕೆಯ ಸಭಾಂಗಣದಲ್ಲಿ ಪಾಲಿಕೆ ಅಧ್ಯಕ್ಷೆ ನರಸಮ್ಮ ಮಾಡಗಿರಿ ಅಧ್ಯಕ್ಷತೆಯಲ್ಲಿ ಬುಧವಾರ ದಸರಾ ಹಬ್ಬದ ಪೂರ್ವಭಾವಿ ಸಿದ್ದತಾ ಸಭೆ ನಡೆಯಿತು.
ಸಭೆಯಲ್ಲಿ ಪಾಲಿಕೆಯ ಸದಸ್ಯ ಜಯಣ್ಣ ಹಾಗೂ ಈ.ಶಶಿರಾಜ ಮಾತನಾಡಿ, ಸ್ಥಳೀಯ, ಜಿಲ್ಲಾ, ರಾಜ್ಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಅಕರ್ಷಣೀಯ ಕಲಾ ತಂಡಗಳು ದಸರಾ ಹಬ್ಬದಲ್ಲಿ ಭಾಗವಹಿಸುವಂತೆ ಕ್ರಮವಹಿಸಬೇಕು.ಮೆಕ್ಕಾ ದರವಾಜದಲ್ಲಿ ಕವಿಗೋಷ್ಠಿಯ ಅಂಗವಾಗಿ ಹೆಸರಾಂತ ಕವಿಗಳನ್ನುಣ ಸಾಹಿತಿಗಳನ್ನು ಕರೆಯಿಸಿ ವಿಜೃಂಭಣೆಯಿಂದ ಜರುಗಿಸಲು ಒಮ್ಮತದ ನಿರ್ಣಯ ಕೈಗೊಳ್ಳಲಾಯಿತು.
ಈ ಸಂದರ್ಭದಲ್ಲಿ ಪಾಲಿಕೆ ಉಪಾಧ್ಯಕ್ಷ ಸಾಜೀದ್ ಸಮೀರ, ಸದಸ್ಯರಾದ ದರೂರು ಬಸವರಾಜ ಪಾಟೀಲ, ವಿ.ನಾಗರಾಜ, ಮುನಿಯಪ್ಪ, ಮಹ್ಮದ್ ಫಿರೋಜ್, ವೆಂಕಟೇಶ, ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯ ನರಸಿಂಹಲು ಮಾಡಿಗಿರಿ, ಉಪ ಆಯುಕ್ತೆ ಸಂತೋಷಿ ರಾಣಿ, ವಲಯ ಆಯುಕ್ತ ಬಸವರಾಜ ಹೆಬ್ಬಾಳ, ಮಲ್ಲಿಕಾರ್ಜುನ ಎಂ.ಬಿ ಸೇರಿ ಅನೇಕರು ಇದ್ದರು.