ಕಲಾ ಚಟುವಟಿಕೆಗಳಿಂದ ಉತ್ತಮ ಭವಿಷ್ಯ : ಸಂಭ್ರಮ-2025 ಉದ್ಘಾಟಿಸಿ ಕುದ್ರೋಳಿ ಗಣೇಶ್ ಹೇಳಿಕೆ

blank

ಉಳ್ಳಾಲ: ವ್ಯಕ್ತಿತ್ವ ನಿರ್ಮಾಣದಲ್ಲಿ ಶಿಕ್ಷಣ ಸಂಸ್ಥೆಗಳ ಪಾತ್ರ ಮಹತ್ವದ್ದು, ಓದಿನೊಂದಿಗೆ ಸಂಗೀತ, ನೃತ್ಯ, ಯಕ್ಷಗಾನದಂತಹ ಕಲಾ ಚಟುವಟಿಕೆಗಳಲ್ಲಿಯೂ ತೊಡಗಿಸಿಕೊಂಡರೆ ಭವಿಷ್ಯದಲ್ಲಿ ಯಶಸ್ಸು ಸಾಧ್ಯ ಎಂದು ಕುದ್ರೋಳಿ ಗಣೇಶ್ ಹೇಳಿದರು.

ಮಂಗಳೂರು ವಿವಿಯ ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶನಾಲಯದ ವತಿಯಿಂದ ಮೂರು ದಿನ ನಡೆಯಲಿರುವ ಸಂಭ್ರಮ-2025 ಕಾರ್ಯಕ್ರಮ ಬುಧವಾರ ಮಂಗಳಾ ಸಭಾಂಗಣದಲ್ಲಿ ಉದ್ಘಾಟಿಸಿ ಮಾತನಾಡಿದರು.

ಎರಡನೇ ಮಹಾಯುದ್ಧದಲ್ಲಿ ಜಪಾನ್ ಸರ್ವನಾಶವಾಗಿದ್ದರೂ ನಂತರದ ದಿನಗಳಲ್ಲಿ ಆ ದೇಶ ಎದ್ದು ನಿಲ್ಲಲು ಅಲ್ಲಿನ ಪ್ರಜೆಗಳು ಕಾರಣ. ಅದರಲ್ಲೂ ವಿದ್ಯಾರ್ಥಿ ಸಮುದಾಯದ ಪರಿಶ್ರಮ ಮಹತ್ವದ್ದು. ವಿದ್ಯಾರ್ಥಿಗಳ ಜೀವನದಲ್ಲಿ ಜವಾಬ್ದಾರಿ ಅನ್ನೋದು ಗಟ್ಟಿಯಾಗಿ ಹೋದರೆ ಮುಂದೆ ಬಹಳ ಶ್ರೇಷ್ಠ ದೇಶ ಕಟ್ಟಲು ಸಾಧ್ಯ ಎಂದರು.

ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಲ್.ಧರ್ಮ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ವಿವಿ ಕುಲಸಚಿವ ಕೆ.ರಾಜು ಮೊಗವೀರ, ವಿದ್ಯಾರ್ಥಿ ಪರಿಷತ್ ಪದಾಧಿಕಾರಿಗಳಾದ ಮದನ್ ಕುಮಾರ್, ಕಾರ್ತಿಕ್ ಬಿ., ರಾಮಪ್ರಸಾದ್, ಜಿ.ಎನ್.ಪಾವನ, ಮಹೇಶ್ ಕೂರ್ಗಿ, ಮೀರಜ್ ಮೊದಲಾದವರು ಉಪಸ್ಥಿತರಿದ್ದರು. ಡಾ.ಪ್ರಶಾಂತ್ ನಾಯ್ಕ ಸ್ವಾಗತಿಸಿದರು. ಜಿ.ಎನ್.ಪಾವನ ವಂದಿಸಿದರು.

ವಿದ್ಯಾರ್ಥಿಗಳು ಕ್ಯಾಂಪಸ್‌ನಲ್ಲಿ ಎರಡು ವರ್ಷ ಕಳೆದ ಕ್ಷಣಗಳು ಬದುಕಿಗೆ ಪಾಠವಾಗಿ ಇಡೀ ಬದುಕನ್ನೇ ಸಂಭ್ರಮಿಸಬೇಕು. ವಿವಿಯಿಂದ ಉತ್ತಮ ನೆನಪುಗಳೊಂದಿಗೆ ದೇಶಕ್ಕೆ ನಮ್ಮದೇ ಆದ ಕೊಡುಗೆ ನೀಡಬೇಕು.

ಪ್ರೊ.ಪಿ.ಎಲ್.ಧರ್ಮ, ಕುಲಪತಿ, ಮಂಗಳೂರು ವಿವಿ

ಮೋದಿ ಫ್ಯಾನ್ಸ್‌ನಿಂದ ವಿಶೇಷ ಪೂಜೆ: ಕೇಂದ್ರ ಸರ್ಕಾರದ 11ನೇ ವರ್ಷಾಚರಣೆ

ಹಾನಿಯಾದ ರಸ್ತೆ ದುರಸ್ತಿಗೆ ಪಟ್ಟು

Share This Article

ಒಂದು ತಿಂಗಳು ಸಕ್ಕರೆ ಮತ್ತು ಉಪ್ಪು ಬಿಟ್ಟರೆ ದೇಹದಲ್ಲಾಗುವ ಬದಲಾವಣೆ ಏನು ಗೊತ್ತಾ? | Sugar

Sugar: ಸಾಮಾನ್ಯವಾಗಿ ಮನುಷ್ಯನ ದೇಹ ಅನಾರೋಗ್ಯಕ್ಕೊಳಗಾದಾಗ ಆಹಾರದಲ್ಲಿ ಸಕ್ಕೆರೆ ಮತ್ತು ಉಪ್ಪುನಂತಹ ಅಂಶಗಳನ್ನು ತ್ಯಜಿಸಬೇಕಾಗುತ್ತದೆ. ಇದರಿಂದ…

ಹೃದ್ರೋಗ ದೂರ, ಮೆದುಳಿನ ಆರೋಗ್ಯಕ್ಕೆ ಬಲ: ಟ್ಯೂನ ಮೀನಿನಲ್ಲಿದೆ ಹಲವು ಆರೋಗ್ಯ ಪ್ರಯೋಜನಗಳು! Tuna Fish Benefits

Tuna Fish Benefits: ಮೀನು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ಸಾಮಾನ್ಯವಾಗಿ ಹೇಳಲಾಗುತ್ತದೆ. ಮೀನಿನಲ್ಲಿ ಹಲವು…