ಕಾಸರಗೋಡು: ಪ್ರಧಾನಿ ನರೇಂದ್ರ ಮೋದಿ ಪ್ರಮಾಣ ವಚನ ಸ್ವೀಕರಿಸಿದ ದಿನಾಂಕದಿಂದ ತೊಡಗಿ, ವಿವಿಧ ಕಾರ್ಯಕ್ರಮಗಳಲ್ಲಿ ಮುಂಚೂಣಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ‘ಮೋದಿ ಫ್ಯಾನ್ಸ್ ಕಾಸರಗೋಡು’ ವತಿಯಿಂದ ವಿಶೇಷ ಕಾರ್ತಿಕ ಪೂಜೆ ಕಾಸರಗೋಡು ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಜರುಗಿತು.
ನರೇಂದ್ರ ಮೋದಿ ಅವರ ಹೆಸರಿನಲ್ಲಿ ಕಳೆದ 11 ವರ್ಷದಿಂದ ಪ್ರತಿ ತಿಂಗಳು ವಿಶೇಷ ಕಾರ್ತಿಕ ಪೂಜೆ ನಡೆಸಲಾಗುತ್ತಿದ್ದು, ಕೇಂದ್ರದಲ್ಲಿ 11 ವರ್ಷ ಪೂರೈಸಿದ ಸಂದರ್ಭ ಸೋಮವಾರ ದೇವರಿಗೆ ವಿಶೇಷ ಕಾರ್ತಿಕ ಪೂಜೆ ಆಯೋಜಿಸಲಾಗಿತ್ತು.
ಕ್ಷೇತ್ರದ ಪ್ರಧಾನ ಅರ್ಚಕ ಶಿವಶಂಕರ ಅಡಿಗ ಪೂಜೆ ನೆರವೇರಿಸಿದರು. ಜಯಶಂಕರ ಅಡಿಗ ವಿಶೇಷ ಪ್ರಾರ್ಥನೆ ಮಾಡಿದರು. ಕಾಸರಗೋಡು ಬಿಜೆಪಿ ಜಿಲ್ಲಾ ಅಧ್ಯಕ್ಷೆ ಅಶ್ವಿನಿ ಎಂ.ಎಲ್. ಮತ್ತು ಕಾರ್ಯದರ್ಶಿ ಸುನೀಲ್ ಪಿ. ಅವರನ್ನು ಗೌರವಿಸಲಾಯಿತು. ಕಾಸರಗೋಡು ನಗರ ಸಭಾ ಸದಸ್ಯೆ ಶ್ರೀಲತಾ, ವರಪ್ರಸಾದ್ ಕೋಟೆಕಣಿ, ಪಿ.ರಮೇಶ್, ಕಾಸರಗೋಡು ಬಿಜೆಪಿ ನಗರ ಸಮಿತಿ ಅಧ್ಯಕ್ಷ ಪುರುಷೋತ್ತಮ, ಪ್ರಮುಖರಾದ ಡಾ.ಕೆ.ಎನ್.ವೆಂಕಟ್ರಮಣ ಹೊಳ್ಳ, ರಮೇಶ್, ಸತೀಶ್, ಗುಣಪಾಲ ಅಮೈ, ಕಿಶೋರ್ ಕುಮಾರ್, ಕೆ.ಎನ್.ರಾಮಕೃಷ್ಣ ಹೊಳ್ಳ, ರವಿ ಕೇಸರಿ, ಶಂಕರನಾರಾಯಣ ಹೊಳ್ಳ, ನವೀನ್ ಬಟ್ಟಂಪಾರೆ, ತುಕರಾಮ ಆಚಾರ್ಯ ಕೆರೆಮನೆ, ಪ್ರಮೋದ್ ಕುಮಾರ್, ನಾಮದೇವ ಪೈ, ಸಾಯಿನಾಥ್ ರಾವ್, ಶಾರದಾ, ಸೌಮ್ಯಾ, ಸವಿತಾ, ಜೀತಾ, ಜಿತಿನ್, ಪ್ರೇಮಾ, ಗೀತಾ ಮೊದಲಾದವರಿದ್ದರು. ಶ್ರೀ ವೆಂಕಟರಮಣ ಬಾಲಗೋಕುಲದ ಮಕ್ಕಳಿಂದ ಭಜನೆ ನಡೆಯಿತು.
ಕುಡುಪು ಕ್ಷೇತ್ರದಲ್ಲಿ ನಿತ್ಯ ಬಲಿ ಉತ್ಸವ ಸಮಾಪ್ತಿ : ದೇವಸ್ಥಾನದೊಳಗೆ ಜೋಡುಬಲಿ : ದೀಪಾವಳಿಗೆ ಮತ್ತೆ ಆರಂಭ
ಮಾವೇಲಿ ಮತ್ತು ಮಲಬಾರ್‌ಎಕ್ಸ್‌ಪ್ರೆಸ್‌ಗೆ ಹೆಚ್ಚುವರಿ ಸ್ಲೀಪರ್ ಕ್ಲಾಸ್ ಬೋಗಿ ಅಳವಡಿಕೆ