ವೇದಿಕೆಗಳಲ್ಲಿ ಕಣ್ಣೀರಿಡುವ ಕುರಿತು ಸೌತ್​​ ಬ್ಯೂಟಿ ಸ್ಪಷ್ಟನೆ; ಸಮಂತಾ ಹೇಳಿದ್ದಿಷ್ಟು.. | Samantha Ruth Prabhu

Untitled design - 2025-02-09T182612.760
Published on

ಮುಂಬೈ: ಸೌತ್‌ ಬ್ಯೂಟಿ ಸಮಂತಾ ರುತ್ ಪ್ರಭು(Samantha Ruth Prabhu) ಅವರು ಇತ್ತೀಚೆಗೆ ಸಿನಿಮಾಗಿಂತಲೂ ವೈಯಕ್ತಿಕ ವಿಚಾರಕ್ಕೆ ಹೆಚ್ಚು ಸುದ್ದಿಯಲ್ಲಿರುತ್ತಾರೆ. ವೈಯಕ್ತಿಕ ಜೀವನದಲ್ಲಿನ ವಿಚ್ಛೇದನದಿಂದ ಅನಾರೋಗ್ಯದವರೆಗೆ ವಿಷಯಗಳಲ್ಲಿ ಹೆಚ್ಚು ಟ್ರೋಲ್​​ಗೆ ಒಳಗಾಗಿದ್ದಾರೆ. ಕೆಲವೊಂದು ವಿಚಾರಕ್ಕೆ ಪ್ರತಿಕ್ರಿಯಿಸಿದರು ಮತ್ತೆ ಕೆಲವು ವಿಚಾರಕ್ಕೆ ಸಮಂತಾ ಸ್ಪಂದಿಸುವುದಿಲ್ಲ.

ಹಲವು ವರ್ಷಗಳು ತೆರೆಮರೆಯಲ್ಲೇ ಪ್ರೀತಿಸಿ 2017ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಸಮಂತಾ ಮತ್ತು ನಾಗಚೈತನ್ಯ 2021ರಲ್ಲಿ ವಿಚ್ಛೇದನ ಪಡೆದರು. ಈ ಬಗ್ಗೆ ನಾಗ ಚೈತನ್ಯ ಪರಸ್ಪರ ಒಪ್ಪಿಗೆಯಿಂದಲೇ ದೂರವಾಗಿದ್ದೇವೆ ಎಂದು ಹಲವು ಬಾರಿ ಹೇಳಿದ್ದಾರೆ. ಈ ಕುರಿತು ಕೇಳುವ ಪ್ರೆಶ್ನಗೆ ಜಾಣರಾಗಿ ಉತ್ತರಿಸುತ್ತಾರೆ ನಟಿ ಸಮಂತಾ. ಇತ್ತೀಚೆಗೆ ಸೋಭಿತಾ ಧೂಳಿಪಾಲ ಅವರನ್ನು ನಾಗ ಚೈತನ್ಯ ವಿವಾಹವಾದದ್ದು ಎಲ್ಲರಿಗೂ ತಿಳಿದಿದೆ.

ವಿಚ್ಛೇದನದ ನಂತರ ಸಮಂತಾ ಅವರ ಜೀವನದಲ್ಲಿ ಅನೇಕ ಬದಲಾವಣೆಗಳು ಸಂಭವಿಸಿವೆ. ಅವರು ಆರಂಭದಲ್ಲಿ ಟ್ರೋಲ್​​ಗೆ ಒಳಗಾದರೆ ಬಳಿಕ ಅವರ ಕಾಯಿಲೆ ಕುರಿತು ಸುದ್ದಿಯಾಯಿತು. ಇನ್ನೂ ಆ ಸಮಯದಲ್ಲೇ ಸಮಂತಾ ಭಾವನಾತ್ಮಕವಾಗಿ ಕುಸಿದಿದ್ದಾರೆ ಆದ್ದರಿಂದಲೇ ಅವರು ಸಮಾರಂಭದ ವೇದಿಕೆಗಳಲ್ಲಿ ಅಳುತ್ತಾರೆ ಎಂಬ ಕೆಲವು ಟೀಕೆಗಳು ಹರಿದಾಡಿದವು. ಈ ವಿಚಾರಕ್ಕೆ ನಟಿ ಸಮಂತಾ ಇತ್ತೀಚಿನ ಸಂದರ್ಶನವೊಂದರಲ್ಲಿ ಪ್ರತಿಕ್ರಿಯಿಸಿದ್ದಾರೆ.

ಸಮಂತಾ ಅವರು ಸುಲಭವಾಗಿ ಅಳುತ್ತಾರೆ ಎಂಬ ಪ್ರಶ್ನೆಯನ್ನು ಕೇಳಲಾಯಿತು. ಇದಕ್ಕೆ ಉತ್ತರಿಸಿದ ಸಮಂತಾ ಈ ಪ್ರಶ್ನೆ ಕೇಳಿದ್ದಕ್ಕೆ ಧನ್ಯವಾದಗಳು. ನನ್ನ ಕಣ್ಣುಗಳು ಸ್ವಲ್ಪ ಸೂಕ್ಷವಾಗಿದ್ದು, ಹೆಚ್ಚು ಲೈಟ್​ ಬೆಳಕು ಬೀಳುತ್ತಿದ್ದಂತೆ ಕಣ್ಣೀರು ಬರುತ್ತದೆ. ಅದನ್ನು ನೋಡಿ ಜನರು ನಾನು ಪ್ರತಿ ಬಾರಿಯೂ ಎಮೋಷನಲ್​​ ಆಗುತ್ತೇನೆ ಎಂದು ಕೊಳ್ಳುತ್ತಾರೆ. ನೋ.. ಐ ಆ್ಯಮ್​ ನಾಟ್​ ಡಿಪ್ರೆಸ್ ಎಂದು ಹೇಳಿದ್ದಾರೆ.

ಸ್ವಲ್ಪ ದಿನಗಳ ಹಿಂದೆ ಸಮಂತಾ ಅವರ ಡೇಟಿಂಗ್​ ವಿಚಾರ ದೊಡ್ಡ ಸುದ್ದಿಯಾಗಿತ್ತು. ಸಹ ನಿರ್ದೇಶಕ ರಾಜ್ ನಿಡಿಮೋರು ಅವರೊಂದಿಗೆ. ಪಿಕಲ್‌ಬಾಲ್ ಪಂದ್ಯಾವಳಿಯ ಸಮಯದಲ್ಲಿನ ಪೋಟೋಗಳು ಹಿಂದೆ ಇದ್ದಂತಹ ವದಂತಿಗೆ ಪುಷ್ಟಿಕೊಡುವಂತಿತ್ತು. ಆದರೆ ಇಲ್ಲಿಯವರೆಗೆ ಈ ಇಬ್ಬರು ಅವರ ಸಂಬಂಧದ ಬಗ್ಗೆ ಯಾವುದೇ ದೃಢೀಕರಣ ಅಥವಾ ನಿರಾಕರಣೆ ಮಾಡಿಲ್ಲ.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net