

ಮುಂಬೈ: ಪ್ರೇಮಿಗಳ ದಿನಾಚರಣೆ ಸಂಭ್ರಮಿಸಲು ಇನ್ನು ಕೇವಲ ನಾಲ್ಕು ದಿನಗಳಷ್ಟೇ ಬಾಕಿ ಇದೆ. ಫೆಬ್ರವರಿ 14 ರಂದು ಆಚರಿಸುವ ಪ್ರೇಮಿಗಳ ದಿನದಂದು(Valentine's day) ಕೆಲವರು ತಮ್ಮ ಪ್ರೀತಿಯನ್ನು ಹೇಳುವ ಮೂಲಕ ಸಕ್ಸಸ್ ಕಂಡರೆ ಮತ್ತೆ ಕೆಲವರು ನೋವನ್ನು ಅನುಭವಿಸುತ್ತಾರೆ. ಇಷ್ಟಪಡುವ ವ್ಯಕ್ತಿ ತಮ್ಮಿಂದ ದೂರಾಗುತ್ತಾರೆ ಎಂದರೆ ಯಾರಿಗೆ ನೋವಿರುವುದಿಲ್ಲ ಹೇಳಿ. ಆದರೆ ಈ ನೋವಿನಿಂದ ಹೊರಬರುವುದು ಹೇಗೆ ಎಂಬುದನ್ನು ಬಾಲಿವುಡ್ ಭಾಯಿಜಾನ್ ಸಲ್ಮಾನ್ ಖಾನ್ ಸಲಹೆ ನೀಡಿದ್ದಾರೆ.
ಸಲ್ಮಾನ್ ಖಾನ್ , ಸಿನಿಮಾಗಳ ಜೊತೆಗೆ ವೈಯಕ್ತಿಕ ಜೀವನದಿಂದಲೂ ಸದಾ . ಐಶ್ವರ್ಯಾ ರೈ, ಸೋಮಿ ಅಲಿ, ಕತ್ರಿನಾ ಕೈಫ್ ಮತ್ತು ಇನ್ನೂ ಅನೇಕ ಬಾಲಿವುಡ್ ನಟಿಯರೊಂದಿಗೆ ಅವರ ಹೆಸರು ತಳುಕು ಹಾಕಿಕೊಂಡಿದೆ. ಆದರೆ ಇಷ್ಟೆಲ್ಲಾ ಇದ್ದರೂ ಸಲ್ಮಾನ್ ಖಾನ್ ಇನ್ನೂ ಬ್ರಹ್ಮಚಾರಿ. ಅವರು ಆಗಾಗ್ಗೆ ಸಂಬಂಧಗಳ ಬಗ್ಗೆ ಮಾತನಾಡುತ್ತಾರೆ.
ಇತ್ತೀಚೆಗೆ ಅವರು ತಮ್ಮ ಸಹೋದರನ ಮಗ ಅರ್ಹಾನ್ ಖಾನ್ ನಡೆಸುತ್ತಿರುವ ಡಂಬ್ ಬಿರಿಯಾನಿ ಪಾಡ್ಕಾಸ್ಟ್ನಲ್ಲಿ ಭಾಗಿಯಾಗಿದ್ದರು. ಮಗನೊಂದಿಗೆ ಬಾಲಿವುಡ್ ಭಾಯಿಜಾನ್ ಅನೇಕ ವಿಚಾರಗಳ ಕುರಿತು ಮಾತನಾಡಿದರು. ತಮ್ಮ ಮನೆ, ವೃತ್ತಿ ಮತ್ತು ಇತರ ಹಲವು ವಿಷಯಗಳ ಬಗ್ಗೆ ಚರ್ಚಿಸಿದರು. ಇದೇ ಸಮಯದಲ್ಲಿ ಬ್ರೇಕಪ್ ಆದ ಬಳಿಕ ಅದರಿಂದ ಹೇಗೆ ಹೊರಬರಬೇಕು ಎಂಬುದಕ್ಕೆ ಸಲಹೆಯನ್ನು ನೀಡಿದ್ದಾರೆ.
ಅರ್ಹಾನ್‌ಗೆ ಸಂಬಂಧದಲ್ಲಿ ಬ್ರೇಕಪ್ ಆದಾಗ ಹೇಗೆ ನಿಭಾಯಿಸಬೇಕು ಎಂದು ವಿವರಿಸಿದರು. ಯಾರಾದರೂ ಅವನನ್ನು ಬಿಡಲು ಸಿದ್ಧವಾಗಿದ್ದರೆ ಅವರನ್ನು ಹೋಗಲು ಬಿಡಬೇಕು. ಬಳಿಕ ರೂಂ ಒಳಗೆ ಹೋಗಿ ಸ್ವಲ್ಪ ಅತ್ತು ನಂತರ ಏನೂ ಆಗಿಲ್ಲ ಎಂಬಂತೆ ಮುಂದುವರಿಯಬೇಕು ಎಂದು ಸಲಹೆ ನೀಡಿದರು.
ನಿಮ್ಮ ಗೆಳತಿ ನಿಮ್ಮಿಂದ ದೂರವಾದರೆ ನೀವು ಅವಳನ್ನು ಹೋಗಲು ಬಿಡಬೇಕು ಎಂದು ಸಲ್ಮಾನ್ ಖಾನ್ ಹೇಳಿದರು. ಇದಕ್ಕೆ ಒಂದು ಉದಾಹರಣೆ ನೀಡಿದ ಅವರು ನಿಮ್ಮ ಗಾಯದಿಂದ ಬ್ಯಾಂಡೇಜ್ ತೆಗೆಯಬೇಕಾದಾಗ, ನೀವು ಅದನ್ನು ಹೇಗೆ ಮಾಡುತ್ತೀರಿ? ಕ್ರಮೇಣ? ಇಲ್ಲ ಬೇಗ ಅದೇ ರೀತಿ, ಒಂದು ಕೋಣೆಗೆ ಹೋಗಿ ತುಂಬಾ ಅತ್ತು ಇಡೀ ವಿಷಯವನ್ನು ಮುಗಿಸಿ. ಹೊರಗೆ ಬಂದು 'ಏನಾಗುತ್ತಿದೆ?' ಅಂತ ಹಾಗೂ ವಿಷಯಗಳು ಹೇಗೆ ನಡೆಯುತ್ತಿವೆ? ಎಂದು ಕೇಳಿ. ಆದರೂ ಈ ಸಮಯದಲ್ಲಿ ಅವರು ತಪ್ಪು ಮಾಡಿದರೆ ಕ್ಷಮೆಯಾಚಿಸುವುದಾಗಿಯೂ ಹೇಳಿದ್ದಾರೆ.
ಆದರೆ ನೀವು ತಪ್ಪು ಮಾಡಿದ್ದೀರಿ ಎಂದು ಅರಿವಾದಾಗ ನೀವು ತಕ್ಷಣ ಕ್ಷಮೆಯಾಚಿಸಬೇಕು ಎಂದು ಸಲ್ಲು ಭಾಯ್ ಹೇಳಿದರು. ಪ್ರತಿಯೊಂದು ಸಂಬಂಧದಲ್ಲೂ ಇನ್ನೊಬ್ಬ ವ್ಯಕ್ತಿಯನ್ನು ಗೌರವಿಸುವುದು ಬಹಳ ಮುಖ್ಯ. ಗೌರವವಿಲ್ಲದ ಸಂಬಂಧದಲ್ಲಿ ಯಾರೂ ಉಳಿಯಬಾರದು. 40-50 ವರ್ಷಗಳಿಂದ ಸಂಬಂಧದಲ್ಲಿದ್ದರೂ ಸಹ ಒಬ್ಬರು ಆ ಸಂಬಂಧದಲ್ಲಿ ಉಳಿಯಬೇಕು ಮತ್ತು ಈ ಅವಧಿಯಲ್ಲಿ ನೀವು ಮೋಸ ಹೋಗಿದ್ದೀರಿ ಎಂದು ನೀವು ಭಾವಿಸಿದರೆ, ಸಾಧ್ಯವಾದಷ್ಟು ಬೇಗ ಅದನ್ನು ಕೊನೆಗೊಳಿಸಿ ಎಂದು ಸಲಹೆ ನೀಡಿದರು. (ಏಜೆನ್ಸೀಸ್)