ಜೀವನದಲ್ಲಿ ಎಂದೂ ಮದ್ಯ ಸೇವಿಸಿಲ್ಲ; ಆದರೆ ಸಲ್ಮಾನ್​ ಖಾನ್​ ಮಾಡಿದ್ದು ಮಾತ್ರ.. ನಟ ಸೋನುಸೂದ್​​ ಹೇಳಿದ್ದೇನು? | Sonu Sood

Untitled design - 2025-01-04T172421.711
Published on

ಮುಂಬೈ: ದಕ್ಷಿಣ ಚಿತ್ರರಂಗದಿಂದ ಬಾಲಿವುಡ್​ವರೆಗೂ ತಮ್ಮದೇ ಅಭಿಮಾನಿ ಬಳಗ ಹೊಂದಿರುವ ನಟ ಸೋನು ಸೂದ(Sonu Sood) ಸದ್ಯ ತಮ್ಮ ಮುಂಬರುವ ಚಿತ್ರ ಫತೇಹ್ ಪ್ರಚಾರದಲ್ಲಿ ನಿರತರಾಗಿದ್ದಾರೆ. ನಟನೆ ಜತೆಗೆ ಅವರು ತನ್ನ ಫಿಟ್ನೆಸ್​​ಗೂ ಹೆಸರುವಾಸಿಯಾಗಿದ್ದಾರೆ. ತಮ್ಮ ಆಹಾರ ಮತ್ತು ಫಿಟ್ನೆಸ್​ ಪ್ರಯಾಣದ ಕುರಿತು ಸೋನು ಸೂದ್​​ ಮುಕ್ತವಾಗಿ ಮಾತನಾಡಿದ್ದಾರೆ. ಅಲ್ಲದೆ ಜೀವನದಲ್ಲಿ ಎಂದೂ ಮದ್ಯ ಸೇವಿಸಿಲ್ಲ ಎಂದು ಹೇಳಿದ್ದಾರೆ.

ಇತ್ತೀಚನ ಸಂದರ್ಶನವೊಂದರಲ್ಲಿ ಮಾತನಾಡಿರುವ ಸೋನು ಸೂದ್​​ ತಮ್ಮ ಆಹಾರದ ಬಗ್ಗೆ ಹೇಳಿದ್ದಾರೆ. ನಾನು ಸಸ್ಯಾಹಾರಿ. ನನ್ನ ಆಹಾರವು ತುಂಬಾ ನೀರಸವಾಗಿದೆ. ಯಾರಾದರೂ ಮನೆಗೆ ಬಂದಾಗ ನಾನು ಆಸ್ಪತ್ರೆಯ ಆಹಾರವನ್ನು ಮನೆಯಲ್ಲಿಯೇ ತಿನ್ನುತ್ತೇನೆ ಎಂದು ಹೇಳುತ್ತಾರೆ. ಇದು ನನ್ನ ತಟ್ಟೆ, ನಿಮಗೆ ಬೇಕಾದುದನ್ನು ತಿನ್ನಿರಿ ಎಂದು ನಾನು ಅವರಿಗೆ ಹೇಳುತ್ತೇನೆ. ನನ್ನ ಹೊರತಾಗಿ ಎಲ್ಲರೂ ಮನೆಯಲ್ಲಿ ಮಾಂಸಾಹಾರ ಸೇವಿಸುತ್ತಾರೆ. ಎಲ್ಲರಿಗೂ ಒಳ್ಳೆಯ ಅಡುಗೆ ಮಾಡುತ್ತಾರೆ. ನಮ್ಮಲ್ಲಿ ಅತ್ಯುತ್ತಮ ಅಡುಗೆಯವರು ಇದ್ದಾರೆ ಎಂದು ಹೇಳಿದ್ದಾರೆ.

ಇನ್ನು ನಾನು ಶಾಲೆ, ಕಾಲೇಜು ಅಥವಾ ಇಂದಿಗೂ ಆಹಾರದ ಬಗ್ಗೆ ಯಾವುದೇ ನಾಟಕ ಮಾಡಿಲ್ಲ. ತಿನ್ನಲು ಸಿಕ್ಕಿದ್ದನ್ನೆಲ್ಲ ತಿನ್ನುತ್ತಿದ್ದೆ. ನಾನು ಮೂರು-ನಾಲ್ಕು ವರ್ಷಗಳಿಂದ ಬ್ರೆಡ್ ತಿನ್ನುವುದನ್ನು ನಿಲ್ಲಿಸಿದೆ. ಮಧ್ಯಾಹ್ನ ನಾನು ಸ್ಮಾಲ್​ ಕಪ್​ ರೈಸ್​ ಮತ್ತು ದಾಲ್​​ ತಿನ್ನುತ್ತೇನೆ. ಬೆಳಗಿನ ಉಪಾಹಾರಕ್ಕಾಗಿ ಮೊಟ್ಟೆಯ ಬಿಳಿ ಆಮ್ಲೆಟ್, ಸಲಾಡ್, ಆವಕಾಡೊ, ತರಕಾರಿಗಳು ಅಥವಾ ಪಪ್ಪಾಯಿಯನ್ನು ತಿನ್ನುತ್ತೇನೆ. ಆದರೆ ನಾನು ಆರೋಗ್ಯಕರವಾಗಿ ತಿನ್ನುತ್ತೇನೆ ಮತ್ತು ಆಹಾರದ ವಿಷಯದಲ್ಲಿ ಡಯಟ್​ ಎಂದು ಯಾವುದೇ ಮೋಸ ಮಾಡಿಕೊಳ್ಳುವುದಿಲ್ಲ. ಕೆಲವೊಮ್ಮೆ ನಾನು ಕಾರ್ನ್ ಬ್ರೆಡ್ ತಿನ್ನುತ್ತೇನೆ, ಆದರೆ ಬಹಳ ವಿರಳವಾಗಿ. ಇದಕ್ಕಾಗಿ ನೀವು ಸ್ಥಿರವಾಗಿರುವುದು ಬಹಳ ಮುಖ್ಯ ಎಂದು ತಿಳಿಸಿದರು.

ಇದೇ ಸಮಯದಲ್ಲಿ ತನ್ನ ಜೀವನದಲ್ಲಿ ಎಂದಿಗೂ ಮದ್ಯ ಸೇವಿಸಿಲ್ಲ ಎಂದು ಬಹಿರಂಗಪಡಿಸಿದ ಸೋನು, ಸಲ್ಮಾನ್ ತನ್ನ ಪಾನೀಯದಲ್ಲಿ ಆಲ್ಕೋಹಾಲ್ ಬೆರೆಸಲು ಪ್ರಯತ್ನಿಸಿದ ಸಮಯವನ್ನು ನೆನಪಿಸಿಕೊಂಡರು. ನಾನು ಕುಡಿಯುವುದಿಲ್ಲ. ನನ್ನ ಅನೇಕ ಸಹನಟರು ನನಗೆ ಮದ್ಯಪಾನ ಮಾಡಿಸಲು ಪ್ರಯತ್ನಿಸಿದ್ದಾರೆ. ಮತ್ತು ಇಂದು ಕುಡಿಸುತ್ತೇವೆ ಎಂದು ಹೇಳಿದ್ದಾರೆ. ಅನೇಕ ಜನರು ನನ್ನ ಪಾನೀಯಗಳಲ್ಲಿ ರಹಸ್ಯವಾಗಿ ಮದ್ಯವನ್ನು ಬೆರೆಸಲು ಪ್ರಯತ್ನಿಸಿದ್ದಾರೆ. ಈ ವಿಚಾರದಲ್ಲಿ ಸಲ್ಮಾನ್​ ಭಾಯ್​​​ ಮಾಡಿದ್ದು ಬಹಳ ಇಷ್ಟವಾಯಿತು ಎಂದು ಹೇಳಿದರು.

ಸಲ್ಮಾನ್​ ಭಾಯ್​ ನನಗೆ ರೆಡ್​ ಬುಲ್​ನಲ್ಲಿ ಮದ್ಯ ಬೆರಸಿ ಕುಡಿಯುವಂತೆ ಹೇಳುತ್ತಿದ್ದರು. ಅವರು ನನಗೆ ರಹಸ್ಯವಾಗಿ ಗ್ಲಾಸ್​ ನೀಡುತ್ತಿದ್ದರು. ನಾನು ಅದನ್ನು ಕುಡಿಯುತ್ತಿದ್ದೇನೆ ಅಥವಾ ಬೇರೆಯವರಿಗೆ ನೀಡುತ್ತಿದ್ದೇನೆ ಎಂದು ನೋಡುತ್ತಿದ್ದರು ಎಂದು ಹೇಳಿದರು. ಅವರು ಇತರರು ಕುಡಿಯಲೆಂದು ಭಾವಿಸುವುದ ಒಳ್ಳೆಯದು ಆದರೆ ನಾನು ಎಂದಿಗೂ ಮದ್ಯ ಸೇವಿಸಿಲ್ಲ ಎಂದು ತಿಳಿಸಿದರು.

ಸೋನು ಸೂದ್ ಅವರ ಫತೇಹ್ ಸಿನಿಮಾ ಜನವರಿ 10, 2025ರಂದು ಬಿಡುಗಡೆಯಾಗಲಿದೆ. ಸೋನು ಸೂದ್ ಈ ಚಿತ್ರದ ಮೂಲಕ ನಿರ್ದೇಶಕರಾಗಿ ಪದಾರ್ಪಣೆ ಮಾಡಲಿದ್ದಾರೆ. ಈ ಚಿತ್ರದಲ್ಲಿ ಅವರೊಂದಿಗೆ ಜಾಕ್ವೆಲಿನ್ ಫರ್ನಾಂಡೀಸ್, ವಿಜಯ್ ರಾಜ್ ಮತ್ತು ನಾಸಿರುದ್ದೀನ್ ಶಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.(ಏಜೆನ್ಸೀಸ್​​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net