

ಮುಂಬೈ: ಚಿತ್ರರಂಗದಲ್ಲಿ 15ವರ್ಷಕ್ಕೂ ಹೆಚ್ಚು ಶ್ರಮಪಟ್ಟು ಯಶಸ್ಸು ಸಾಧಿಸಿರುವ ನಟ ರವಿ ಕಿಶನ್(Ravi Kishan) ಅವರನ್ನು ಪರಿಚಯಿಸುವ ಅಗತ್ಯ ಇಲ್ಲ. ಅವರು ಬಾಲಿವುಡ್, ಭೋಜ್‌ಪುರಿ ಮತ್ತು ಸೌತ್ ಸಿನಿಮಾರಂಗದಲ್ಲಿ ತಮ್ಮ ನಟನಾ ಕೌಶಲವನ್ನು ತೋರಿಸುವ ಮೂಲಕ ಅಭಿಮಾನಿಗಳ ಹೃದಯ ಗೆದಿದ್ದಾರೆ. ಆದರೆ ಈ ಸ್ಥಾನಕ್ಕೆ ಬರುವ ಮುನ್ನ ತನ್ನ ಬಡತನದ ದಿನಗಳು ಹಾಗೂ ತಮ್ಮ ಹೋರಾಟ ಹೇಗಿತ್ತು ಎಂಬುದನ್ನು ಮುಕ್ತವಾಗಿ ಮಾತನಾಡಿದ್ದಾರೆ. ಅಲ್ಲದೆ ಈಗ ಬಡತನವು ನನ್ನನ್ನು ತೊರೆದಿದೆ ಆದರೆ ಬಡತನವನ್ನು ಬಿಡಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ.
ಇತ್ತೀಚಿಗಿನ ಸಂದರ್ಶನವೊಂದರಲ್ಲಿ ಮಾತನಾಡಿರುವ ರವಿ ಕಿಶನ್, ಬಡತನವು ನನ್ನನ್ನು ತೊರೆದಿದೆ ಆದರೆ ಬಡತನವನ್ನು ಬಿಡಲು ಸಾಧ್ಯವಾಗುತ್ತಿಲ್ಲ. ಇವತ್ತಿಗೂ ನನಗಾಗಿ ದುಬಾರಿ ವಸ್ತುಗಳನ್ನು ಖರೀದಿಸಲು ಸಾಧ್ಯವಾಗುತ್ತಿಲ್ಲ. 7 ಸ್ಟಾರ್ ಹೋಟೆಲ್‌ನಲ್ಲಿ ದುಬಾರಿ ಆಹಾರವನ್ನು ಆರ್ಡರ್ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು.
ನಾವು ಮಣ್ಣಿನ ಗುಡಿಸಲಿನಲ್ಲಿ ವಾಸಿಸುತ್ತಿದ್ದೇವು, ನನಗೆ ಸಾಕಷ್ಟು ಜವಾಬ್ದಾರಿಗಳಿದ್ದವು. ನಮ್ಮ ಜಮೀನನ್ನು ಅಡಮಾನ ಇಡಲಾಗಿತ್ತು. ನಾನು ಸಾಕಷ್ಟು ಬಡತನವನ್ನು ಕಂಡಿದ್ದೇನೆ ಎಂದು ಹೇಳಿದ್ದಾರೆ. ಅಲ್ಲದೆ ನಮ್ಮ ಬಡತನ ಹೇಗಿತ್ತು ಎಂದರೆ ಕಡಿಮೆ ಖಿಚಡಿಯನ್ನು 12 ಮಂದಿ ಹಂಚಿಕೊಂಡು ಸೇವಿಸಬೇಕಿತ್ತು. ಸಾಕಷ್ಟು ಕಡಿಮೆ ಇರುತ್ತಿದ್ದ ಖಿಚಡಿಗೆ ನೀರು ಸೇರಿಸಿ 12 ಮಂದಿ ಸೇವಿಸುತ್ತಿದ್ದೇವು ಎಂದು ತಿಳಿಸಿದರು.
ಇನ್ನು ಮುಂಬೈನಲ್ಲಿದ್ದಾಗ ತಾವು ಎದುರಿಸಿದ ಸಂಕಷ್ಟುಗಳನ್ನು ಹಂಚಿಕೊಂಡರು. ಮುಂಬೈನಲ್ಲಿ ಚಹಾ ಮತ್ತು ವಡಾ ಪಾವ್ ಸೇವಿಸಿ ಬದುಕುತ್ತಿದ್ದೆ. 15 ವರ್ಷಗಳಿಂದ ಇಂಡಸ್ಟ್ರಿಯಲ್ಲಿ ಕಷ್ಟಪಟ್ಟು ಸರಿಯಾಗಿ ಸಂಬಳ ಕೂಡ ನೀಡಿಲ್ಲ. ನಾನು ಸಾಕಷ್ಟು ಅವಮಾನಗಳನ್ನು ಎದುರಿಸಿದ್ದೇನೆ. ಜನರು ಒಂದೋ ಎರಡೋ ಬಾರಿ ಅವಮಾನ ಎದುರಿಸಿರುತ್ತಾರೆ ಆದರೆ ನಾನು ಸಾವಿರಾರು ಬಾರಿ ಅವಮಾನವನ್ನು ಎದುರಿಸಿದ್ದೇನೆ ಎಂದು ಹೇಳಿದರು.(ಏಜೆನ್ಸಿಸ್)