‘ಮದುವೆ ಸೀರೆ’ ಸೀಕ್ರೆಟ್​​ ಬಿಚ್ಚಿಟ್ಟ ನಟಿ ಕೀರ್ತಿ ಸುರೇಶ್​​​; ಇದು ವಿಶೇಷ & ಅತ್ಯಮೂಲ್ಯ ಎಂದಿದ್ದೇಕೆ ಸೌತ್​ ಬ್ಯೂಟಿ | Keerthy Suresh

Untitled design - 2025-01-03T163417.552
Published on

ಚೆನ್ನೈ: ಸೌತ್​ ಬ್ಯೂಟಿ ನಟಿ ಕೀರ್ತಿ ಸುರೇಶ್​​​​(Keerthy Suresh) ಇತ್ತೀಚೆಗೆ ತಮ್ಮ ಬಾಲ್ಯದ ಗೆಳೆಯ ಆಂಟೋನಿ ಥಾಟಿಲ್​​ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಇತ್ತೀಚಿಗಿನ ಸಂದರ್ಶನವೊಂದರಲ್ಲಿ ತಮ್ಮ ವಿವಾಹದ ಕುರಿತು ಮುಕ್ತವಾಗಿ ಮಾತನಾಡಿರುವ ನಟಿ ಕೀರ್ತಿ ಸುರೇಶ್​​ ಮದುವೆಯಲ್ಲಿ ಅವರು ಧರಿಸಿದ್ದ ಸೀರೆಯ ಸೀಕ್ರೆಟ್​ ಅನ್ನು ರಿವೀಲ್​ ಮಾಡಿದ್ದಾರೆ.

ಕೀರ್ತಿ ಸುರೇಶ್​​ ಅವರು ಆಂಟೀನಿ ಥಾಟಿಲ್​ ಅವರನ್ನು 2024 ಡಿಸೆಂಬರ್ 12ರಂದು ಗೋವಾದಲ್ಲಿ ವಿವಾಹವಾದರು. ಈ ವಿಶೇಷ ದಿನದಂದು ಸಾಂಪ್ರದಾಯಿಕ ಕುರ್ತಾ-ಧೋತಿಯಲ್ಲಿ ಆಂಟೋನಿ ಬಹಳ ಆಕರ್ಷಕವಾಗಿ ಕಂಡುಬಂದರೆ, ಕೀರ್ತಿ ಸುಂದರವಾದ ಕೆಂಪು ಸೀರೆಯನ್ನು ಧರಿಸಿದ್ದರು. ಅದು ಎಲ್ಲರನ್ನು ಮಂತ್ರಮುಗ್ಧಗೊಳಿಸಿತು. ತನ್ನ ಮದುವೆಯಲ್ಲಿ ಧರಿಸಿರುವ ಕೆಂಪು ಸೀರೆಯ ಕುರಿತ ಮಾಹಿತಿಯೊಂದನ್ನು ಹಂಚಿಕೊಂಡಿದ್ದಾರೆ.

ತನ್ನ ಮದುವೆಯಲ್ಲಿ ಧರಿಸಿರುವ ಈ ಕೆಂಪು ಸೀರೆಯು ತನ್ನ ತಾಯಿಯಿಂದ ಪಡೆದ ವಿಶೇಷ ಮತ್ತು ಅಮೂಲ್ಯವಾದ ಚರಾಸ್ತಿಯಾಗಿದೆ ಎಂದು ಕೀರ್ತಿ ಹೇಳಿದರು. ಈ ಸೀರೆಯು ಆಕೆಯ ಕುಟುಂಬದ ಇತಿಹಾಸದ ಭಾಗವಾಗಿದೆ ಮತ್ತು ಸುಮಾರು 30 ವರ್ಷ ಹಳೆಯದು. ಈ ಸೀರೆಗೆ ಮಾಡರ್ನ್ ಲುಕ್ ನೀಡಲು ಖ್ಯಾತ ಡಿಸೈನರ್ ಅನಿತಾ ಡೋಂಗ್ರೆ ಅದನ್ನು ಮರುಸೃಷ್ಟಿಸಿದ್ದಾರೆ. ವಿನ್ಯಾಸಕಾರರು ಅದರಲ್ಲಿ ಬೆಳ್ಳಿ ಮತ್ತು ಕೆಂಪು ಬಣ್ಣಗಳ ಸುಂದರವಾದ ಮಿಶ್ರಣವನ್ನು ಬಳಸಿದ್ದಾರೆ. ಈ ಡಿಸೈನ್​​ ಸೀರೆಯನ್ನು ಇನ್ನಷ್ಟು ಆಕರ್ಷಕವಾಗಿ ಮತ್ತು ವಿಶೇಷವಾಗಿಸಿದೆ.

ಕೆಂಪು ಸೀರೆಯನ್ನು ಧರಿಸುವ ನಿರ್ಧಾರ ತನಗೆ ತುಂಬಾ ಸುಲಭ ಎಂದು ಕೀರ್ತಿ ಬಹಿರಂಗಪಡಿಸಿದ್ದಾರೆ. ಮೊದಮೊದಲು ಅಳಿಯನ ಮನೆಯವರು ಕೊಟ್ಟ ಸೀರೆಯನ್ನು ಉಡುವ ಯೋಚನೆಯಲ್ಲಿದ್ದ ಕೀರ್ತಿ ಸುರೇಶ್​​​ ತನ್ನ ತಾಯಿಯ ವಾರ್ಡ್ ರೋಬ್​​ನಲ್ಲಿ ನೋಡಿದಾಗ ಹಳೆಯದಾದ ಅದ್ಭುತವಾದ ಕೆಂಪು ಬಣ್ಣದ ಸೀರೆ ಸಿಕ್ಕಿತು. ಅದನ್ನು ನೋಡಿದ ತಕ್ಷಣ ಈ ಸೀರೆಯನ್ನು ಧರಿಸಬೇಕೆಂದು ನಿರ್ಧರಿಸಿದ್ದಾಗಿ ತಿಳಿಸಿದರು.

ಕ್ರಿಸ್‌ಮಸ್ ಸಮಯದಲ್ಲಿ ಅಂದರೆ ಡಿಸೆಂಬರ್ 25, 2024ರಂದು ಕೀರ್ತಿ ಸುರೇಶ್ ಅವರ ಬೇಬಿ ಜಾನ್ ಚಿತ್ರವು ಬಿಡುಗಡೆಯಾಗಿದೆ. ಇದರಲ್ಲಿ ಕೀರ್ತಿ ಸುರೇಶ್​​​ಗೆ ನಟ ವರುಣ್ ಧವನ್ ಜೋಡಿಯಾಗಿದ್ದಾರೆ. ಬೇಬಿ ಜಾನ್​ ಸಿನಿಮಾದ ಮೂಲಕ ಕೀರ್ತಿ ಸುರೇಶ್​ ಬಾಲಿವುಡ್​ಗೆ ಪದಾರ್ಪಣೆ ಮಾಡಿದ್ದಾರೆ.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net