ಬಿಡುಗಡೆಯಾದಾಗ ಫ್ಲಾಪ್​​​.. ರಿ-ರಿಲೀಸ್​​ನಲ್ಲಿ ಸೂಪರ್​ಹಿಟ್​​; 2 ದಿನದಲ್ಲಿ 9 ವರ್ಷಗಳ ಹಳೆಯ ದಾಖಲೆ ಮುರಿದ ಈ ಸಿನಿಮಾ ಯಾವ್ದು ಗೊತ್ತಾ? Re-Release Collection

Untitled design - 2025-02-09T163242.895
Published on

ಮುಂಬೈ: ಇತ್ತೀಚಿನ ದಿನಗಳಲ್ಲಿ ಚಿತ್ರಮಂದಿರಗಳಲ್ಲಿ ಹೊಸ ಸಿನಿಮಾಗಳ ಬದಲು ಹಳೆಯ ಚಿತ್ರಗಳ ಕ್ರೇಜ್ ಕಾಣುತ್ತಿದೆ. ಮೂಲ ಬಿಡುಗಡೆಯಲ್ಲಿ ಉತ್ತಮ ಪ್ರದರ್ಶನ ನೀಡದ ಚಿತ್ರಗಳು ಮರು ಬಿಡುಗಡೆಯಲ್ಲಿ ಭಾರಿ ಸದ್ದು ಮಾಡುತ್ತಿವೆ. ಲೈಲಾ ಮಜ್ನು ಮತ್ತು ತುಂಬದ್ ನಂತರ ಮತ್ತೊಂದು ಸಿನಿಮಾ ಸದ್ಯ ಬಾಕ್ಸ್​​ ಆಫೀಸ್​ನಲ್ಲಿ ಸಖತ್​ ಸೌಂಡ್(Re-Release Collection) ಮಾಡುತ್ತಿದೆ.

2016 ಫೆಬ್ರವರಿ 5ರಂದು ಬಿಡುಗಡೆಗೊಂಡಿದ್ದ ಸನಮ್ ತೇರಿ ಕಸಮ್ ಮತ್ತೆ ರಿರಿಲೀಸ್​​ ಆಗಿದೆ. ಚಿತ್ರದ ಹಾಡುಗಳು ಮತ್ತು ಕಥೆ ಹೊಸದಾಗಿದ್ದರು ಅಂದು ವಿಮರ್ಶಕರಿಂದ ಮಿಶ್ರ ವಿಮರ್ಶೆಗಳನ್ನು ಪಡೆಯಿತು. ಆ ಸಮಯದಲ್ಲಿ ಆ ಸಿನಿಮಾ ಫ್ಲಾಪ್​​​ ಆಗಿತ್ತು. ಆದರೆ ಇಂದು ಈ ಚಿತ್ರ ಪ್ರೇಕ್ಷಕರ ಮೊದಲ ಆಯ್ಕೆಯಾಗಿದೆ. ಈ ಕಥೆಯನ್ನು ದೊಡ್ಡ ಪರದೆಯ ಮೇಲೆ ವೀಕ್ಷಿಸಲು ಚಿತ್ರಮಂದಿರಗಳಲ್ಲಿ ಭಾರಿ ಜನಸಂದಣಿ ಇದೆ.

ಸನಮ್ ತೇರಿ ಕಸಮ್ ಫೆಬ್ರವರಿ 7 ರಂದು ಚಿತ್ರಮಂದಿರಗಳಲ್ಲಿ ಮರು ಬಿಡುಗಡೆಯಾಗಿದೆ. ಈ ಸಿನಿಮಾ ಕೇವಲ ಎರಡೇ ದಿನಗಳಲ್ಲಿ ಬಾಕ್ಸ್ ಆಫೀಸ್​​ನಲ್ಲಿ ಇತಿಹಾಸ ಸೃಷ್ಟಿಸಿದೆ. ಮೊದಲ ದಿನ ದೇಶೀಯ ಬಾಕ್ಸ್ ಆಫೀಸ್‌ನಲ್ಲಿ 4 ಕೋಟಿ ರೂಪಾಯಿ ಗಳಿಸಿದ ಈ ಚಿತ್ರ, ಎರಡನೇ ದಿನವೂ ಅದ್ಭುತ ವ್ಯವಹಾರ ಮಾಡಿದೆ. ಇಂಡಿಯಾ ಫೋರಮ್ಸ್ ಪ್ರಕಾರ, ಸನಮ್ ತೇರಿ ಕಸಮ್ ಎರಡನೇ ದಿನ ಅಂದರೆ ಶನಿವಾರ(ಫೆಬ್ರವರಿ 8) 5 ಕೋಟಿ ರೂಪಾಯಿಗಳ ವ್ಯವಹಾರ ಮಾಡಿದೆ. ಈ ನಿಟ್ಟಿನಲ್ಲಿ ಚಿತ್ರದ ಎರಡು ದಿನಗಳ ಕಲೆಕ್ಷನ್ ಸುಮಾರು 9 ಕೋಟಿ ರೂಪಾಯಿಗಳಾಗಿದೆ.

ರಿರಿಲೀಸ್​ ಬಳಿಕ ಕೇವಲ ಎರಡೇ ದಿನಗಳಲ್ಲಿ ಸನಮ್ ತೇರಿ ಕಸಮ್ ಗಳಿಸಿರುವ ಮೊತ್ತವು ಹಳೆಯ ದಾಖಲೆಯನ್ನು ಮುರಿದಿದೆ. ಈ ಸಿನಿಮಾ 25 ಕೋಟಿ ರೂ.ಗಳಲ್ಲಿ ನಿರ್ಮಾಣವಾಗಿದೆ ಎಂದು ವರದಿಯಾಗಿದೆ. ಆದರೆ ಆ ಸಮಯದಲ್ಲಿ ದೇಶೀಯ ಬಾಕ್ಸ್ ಆಫೀಸ್‌ ಕಲೆಕ್ಷನ್​​ನಲ್ಲಿ ಕೇವಲ 9.10 ಕೋಟಿ ರೂಪಾಯಿಯನ್ನು ಗಳಿಸಿತ್ತು. ಆ ಸಮಯದಲ್ಲಿ ಚಿತ್ರತಂಡಕ್ಕೆ ಭಾರೀ ನಿರಾಸೆಯಾಗಿತ್ತು. 9 ವರ್ಷಗಳ ಹಿಂದೆ ಈ ಚಿತ್ರವು 9 ಕೋಟಿ ರೂಪಾಯಿಗಳ ಜೀವಮಾನದ ಕಲೆಕ್ಷನ್ ಮಾಡಿತ್ತು.

ಆದರೆ ಮರು ಬಿಡುಗಡೆಯಾದ ಕೇವಲ ಎರಡು ದಿನಗಳಲ್ಲಿ 9 ಕೋಟಿ ರೂಪಾಯಿಗಳನ್ನು ಗಳಿಸಿದೆ. ಇದು ಕೇವಲ ತನ್ನ ಸ್ವಂತ ದಾಖಲೆಯನ್ನು ಮುರಿಯುವುದಷ್ಟೇ ಅಲ್ಲ. ಸನಮ್ ತೇರಿ ಕಸಮ್ ಮರುಬಿಡುಗಡೆಯಾದ ತಕ್ಷಣ, ಹೊಸ ಚಿತ್ರಗಳಾದ ಲವ್‌ಯಾಪ (ಲವ್‌ಯಾಪ ಬಾಕ್ಸ್ ಆಫೀಸ್ ಕಲೆಕ್ಷನ್) ಮತ್ತು ಬಡಾಸ್ ರವಿ ಕುಮಾರ್ (ಬದಾಸ್ ರವಿ ಕುಮಾರ್ ಬಾಕ್ಸ್ ಆಫೀಸ್ ಕಲೆಕ್ಷನ್) ಗಳಿಗಿಂತ ಹೆಚ್ಚು ಕಲೆಕ್ಷನ್​ ಗಳಿಸಿದೆ.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net